ದಾವಣಗೆರೆ: ಕೆಲಸ ಖಾಲಿ ಇದೆ, ವೇತನ 48,400 ರೂ.ಗಳು.
ದಾವಣಗೆರೆ, ಮಾರ್ಚ್ 11: ದಾವಣಗೆರೆಯಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಪ್ರಮುಖವಾದ ಮಾಹಿತಿಯೊಂದಿದೆ. ಜಿಲ್ಲಾ ವಿಪತ್ತು ಪರಿಣಿತರ ಹುದ್ದೆಗೆ ಒಂದು ವರ್ಷದ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹರು ಅರ್ಜಿಗಳನ್ನು ಸಲ್ಲಿಕೆ ಮಾಡಲು ಮಾರ್ಚ್ 21 ಕೊನೆಯ ದಿನವಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ 48,400 ರೂ.ಗಳು.
ನಗರದ ಜಿಲ್ಲಾ ವಿಪತ್ತುನಿರ್ವಹಣಾ ಪ್ರಾಧಿಕಾರದಲ್ಲಿ ತೆರವಾಗಿರುವ ಜಿಲ್ಲಾ ವಿಪತ್ತು ಪರಿಣಿತರ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಒಂದು ವರ್ಷದ ಗುತ್ತಿಗೆ ಆಧಾರದ ಮೇಲೆ ಈ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 48400ಗಳಂತೆ ಸಂಭಾವನೆ ನೀಡಲಾಗುತ್ತದೆ. ಅರ್ಜಿ ಸಲ್ಲಿಕೆ ಮಾಡುವವರು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವಿಜ್ಞಾನ, ಸಮಾಜ ವಿಜ್ಞಾನ, ಗ್ರಾಮೀಣಾಭಿವೃದ್ಧಿ, ಪರಿಸರ ವಿಜ್ಞಾನ, ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು.
ವಿಪತ್ತು ನಿರ್ವಹಣೆಯಲ್ಲಿ ಕನಿಷ್ಠ 3 ರಿಂದ 5 ವರ್ಷಗಳ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಅಭ್ಯರ್ಥಿ ವಿಪತ್ತು ನಿರ್ವಹಣಾ ಕಾಯ್ದೆ 2005 ಮತ್ತು ವಿವಿಧ ವಿಪತ್ತುಗಳ ಕುರಿತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಾರ್ಗಸೂಚಿಗಳ ಬಗ್ಗೆ ತಿಳಿದಿರಬೇಕು.
ಬಲವಾದ ಸಂವಹನ ಮತ್ತು ಪ್ರಸ್ತುತಿ ಕೌಶಲ್ಯಗಳನ್ನು ಹೊಂದಿರಬೇಕು. ಕನ್ನಡ ಮತ್ತು ಇಂಗ್ಲಿಶ್ ಭಾಷೆಗಳಲ್ಲಿ ಪರಿಣಿತರಾಗಿರಬೇಕು. ಎಂಎಸ್ ಆಫೀಸ್, ಸ್ಪ್ರೆಡ್‍ಶೀಟ್, ಪಿಪಿಟಿ ಮತ್ತು ಇಂಟರ್ನೆಟ್ ಅಪ್ಲಿಕೇಶನ್‍ಗಳ ಉತ್ತಮ ಜ್ಞಾನ ಹೊಂದಿರಬೇಕು.
ಆಸಕ್ತರು ಅರ್ಜಿಯನ್ನು ಸ್ವಯಂ-ದೃಢೀಕೃತ ಪ್ರತಿಗಳು ಸ್ವ-ವಿವರದೊಂದಿಗೆ ಉಪ ಆಯುಕ್ತರು, ವಿಪತ್ತು ನಿರ್ವಹಣಾ ಕೋಶ, ಉಪ ಆಯುಕ್ತರ ಕಚೇರಿ, ಪ್ಲಾಟ್ ಸಂಖ್ಯೆ 77, ಕರೂರ್ ಕೈಗಾರಿಕಾ ಪ್ರದೇಶ, ಹಳೆಯ ಪಿ. ಬಿ. ರಸ್ತೆ, ದಾವಣಗೆರೆ ಇಲ್ಲಿಗೆ ನೋಂದಾಯಿತ ಅಂಚೆ ಮೂಲಕ ಕಳುಹಿಸಬೇಕು. ಆಸಕ್ತ, ಅರ್ಹರು ಹೆಚ್ಚಿನ ಮಾಹಿತಿಗಾಗಿ 9945235035 ಸಂಖ್ಯೆಗೆ ಕರೆ ಮಾಡಬಹುದು.
ಮಾರ್ಚ್ 15ರಂದು ಉದ್ಯೋಗ ಮೇಳ: ದಾವಣಗೆರೆಯಲ್ಲಿ ಮಾರ್ಚ್ 15ರಂದು ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದೆ. ಹಲವು ಕಂಪನಿಗಳು ಭಾಗಿಯಾಗಲಿದ್ದು, ದಾವಣಗೆರೆಯ ಯುವಕ, ಯುವತಿಯರಿಗೆ ಉದ್ಯೋಗ ಪಡೆಯುವ ಸುವರ್ಣಾವಕಾಶವಿದೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗೂ ಜಿಲ್ಲಾ ಕೌಶಲ್ಯ ಮಿಷನ್ ಇವರ ಸಹಯೋಗದಲ್ಲಿ ಮಾರ್ಚ್ 15ರಂದು ಬೆಳಗ್ಗೆ 10 ಗಂಟೆಗೆ ನಗರದ ಹದಡಿ ರಸ್ತೆಯಲ್ಲಿರುವ ಸರ್ಕಾರಿ ಐ.ಟಿ.ಐ ಕಾಲೇಜು ಆವರಣದಲ್ಲಿ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದೆ.
ಉದ್ಯೋಗ ಮೇಳವನ್ನು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಎಸ್. ಮಲ್ಲಿಕಾರ್ಜುನ್ ಉದ್ಘಾಟಿಸುವರು. ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಚಿವ ಡಾ. ಶರಣಪ್ರಕಾಶ ರುದ್ರಪ್ಪ ಪಾಟೀಲ್, ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಪಾಲ್ಗೊಳ್ಳಲಿದ್ದಾರೆ.
ಮಾಜಿ ಸೈನಿಕರಿಗೆ ಉದ್ಯೋಗಾವಕಾಶ: ಭೂ ಸೇನೆಯಿಂದ ಅಕ್ಟೋಬರ್ 2022ರ ನಂತರ ನಿವೃತ್ತರಾಗಿರುವ ಜೆ.ಸಿ.ಒ ಹಾಗೂ ಹವಾಲ್ದಾರ್ ಬ್ಯಾಂಕ್ ಹುದ್ದೆಗೆ ಹೊರಗುತ್ತಿಗೆ ಆಧಾರದ ಮೇಲೆ ಮಾಜಿ ಸೈನಿಕರನ್ನು ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಬೆಂಗಳೂರು, ಮೈಸೂರು. ಮಂಗಳೂರು, ಬೆಳಗಾವಿ, ರಾಯಚೂರು ಮತ್ತು ಶಿವಮೊಗ್ಗದ ಎನ್.ಸಿ.ಸಿ. ಬೆಟಾಲಿಯನ್‍ಗಳಿಗೆ ಹೆಚ್ಚುವರಿ ತರಬೇತಿ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವ ಉದ್ದೇಶದಿಂದ ಸೈನ್ಯದಲ್ಲಿ ದುರ್ನಡತೆ ಮತ್ತು ಯಾವುದೇ ವೈದ್ಯಕೀಯ ಕಾರಣಗಳಿಂದ ಸೈನ್ಯದಿಂದ ಬಿಡುಗಡೆಗೊಂಡಿರದ ಆಸಕ್ತ ಮಾಜಿ ಸೈನಿಕರು ಮಾರ್ಚ್ 13ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು ಕೆಎಸ್‍ಸಿಎಂಎಫ್ ಬಿಲ್ಡಿಂಗ್, 4ನೇ ಮಹಡಿ ನಂ-8, ಕನ್ನಿಂಗ್‍ಹ್ಯಾಮ್ ರಸ್ತೆ, ಬೆಂಗಳೂರು-560001 ಸಂಪರ್ಕಿಸಲು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪ ನಿರ್ದೇಶಕರಾದ ಡಾ. ಸಿ. ಎ ಹಿರೇಮಠ ತಿಳಿಸಿದ್ದಾರೆ.












Click it and Unblock the Notifications