ಸಿಆರ್ ಪಿಎಫ್ ನಲ್ಲಿ ವಿವಿಧ ಹುದ್ದೆ ಖಾಲಿ ಇವೆ, ಅರ್ಜಿ ಹಾಕಿ
ಬೆಂಗಳೂರು, ಜೂನ್ 07 : ಭಾರತದಾದ್ಯಂತ ಕೇಂದ್ರ ಮೀಸಲು ಪೊಲೀಸ್ ಪಡೆಯಲ್ಲಿ ಖಾಲಿ ಇರುವ ವಿವಿಧ ಒಟ್ಟು 661 ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
232 ವಿಶೇಷ ವೈದ್ಯಕೀಯ ಅಧಿಕಾರಿ (ಉಪ ಕಮಾಂಡೆಂಟ್) ಹಾಗೂ 429 ವೈದ್ಯಕೀಯ ಅಧಿಕಾರಿ (ಸಹಾಯಕ ಕಮಾಂಡೆಂಟ್) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹರು ದಿನಾಂಕ 7/7/2017ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.[1313 ರಾಜ್ಯ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ]

ವಿಶೇಷ ವೈದ್ಯಕೀಯ ಅಧಿಕಾರಿ (ಉಪ ಕಮಾಂಡೆಂಟ್)
* ವಿದ್ಯಾರ್ಹತೆ: ವಿಶೇಷ ವೈದ್ಯಕೀಯ ಅಧಿಕಾರಿ (ಉಪ ಕಮಾಂಡೆಂಟ್) ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಲೋಪಥಿಕ್ ಸಿಸ್ಟಮ್ ಹಾಗೂ ಮೆಡಿಷನ್ ನಲ್ಲಿ ಸ್ನಾತಕೋತ್ತರ ಪದವಿ ಅಥವಾ ಡಿಪ್ಲಮೋ ಪೂರ್ಣಗೊಳಸಿರಬೇಕು.
* ವೇತನ ಶ್ರೇಣಿ: 67700 ರಿಂದ 208700 ತಿಂಗಳಿಗೆ.
* ವಯೋಮಿತಿ: ಗರಿಷ್ಠ 30 ವರ್ಷ.[2626 ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ]
ವೈದ್ಯಕೀಯ ಅಧಿಕಾರಿ (ಸಹಾಯಕ ಕಮಾಂಡೆಂಟ್) ಹುದ್ದೆ:
* ವಿದ್ಯಾರ್ಹತೆ: ವಿಶೇಷ ವೈದ್ಯಕೀಯ ಅಧಿಕಾರಿ (ಉಪ ಕಮಾಂಡೆಂಟ್) ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಲೋಪಥಿಕ್ ಸಿಸ್ಟಮ್ ಹಾಗೂ ಮೆಡಿಷನ್ ನಲ್ಲಿ ಸ್ನಾತಕೋತ್ತರ ಪದವಿ ಅಥವಾ ಡಿಪ್ಲಮೋ ಪೂರ್ಣಗೊಳಸಿರಬೇಕು.
*ವೇತನ ಶ್ರೇಣಿ: 56100 ರಿಂದ 177500 ತಿಂಗಳಿಗೆ.
* ವಯೋಮಿತಿ: ಗರಿಷ್ಠ 30 ವರ್ಷ.
ಆಯ್ಕೆ ವಿಧಾನ: ಮೇಲಿನ ಎರಡು ಹುದ್ದೆಗಳಿಗೆ ಅಭ್ಯರ್ಥಿಗಳನ್ನು ವೈಯಕ್ತಿಕ ಸಂದರ್ಶನ ಹಾಗೂ ಮೂಲ ದಾಖಲಾತಿಗಳ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ












Click it and Unblock the Notifications