ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2626 ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

|
Google Oneindia Kannada News

ಬೆಂಗಳೂರು, ಮೇ 30 : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್ ಟೇಬಲ್ ನಾಗರೀಕ (ಪುರುಷ ಮತ್ತು ಮಹಿಳಾ) ಖಾಲಿ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಇಲಾಖೆಯ ಅಧಿಕೃತ ವೆಬ್ಸೈಟ್ www.ksp.gov.in ನಲ್ಲಿ ಆನ್-ಲೈನ್ ಮುಖಾಂತರ ಮಾತ್ರ ಸಲ್ಲಿಸತಕ್ಕದ್ದು. ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಈ ಹುದ್ದೆಗಳಿಗೆ ಗ್ರಾಮೀಣ, ಕನ್ನಡ ಯೋಜನಾ ನಿರಾಶ್ರಿತ, ಮಾಜಿ ಸೈನಿಕರಿಗೆ ಮೀಸಲಾತಿ ಕಲ್ಪಿಸಲಾಗಿದೆ. ಈ ಎಲ್ಲಾ ಅಂಶಗಳಿಗೆ ಒಳಪಡುವ ಅಭ್ಯರ್ಥಿಗಳು ಸೂಕ್ತ ದಾಖಲೆಗಳನ್ನು ಅರ್ಜಿ ಸಲ್ಲಿಸುವ ವೇಳೆ ನಮೂದಿಸಬೇಕು.

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ದೇಹದಾರ್ಢ್ಯ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ, ವೈದ್ಯಕೀಯ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಇನ್ನೂ ಈ ಹುದ್ದೆಗಳ ಸಂಪೂರ್ಣ ಮಾಹಿತಿ ತಿಳಿಯಲು ಮುಂದೆ ಓದಿ.[ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ]

ಹುದ್ದೆಗಳ ವಿವರ ಇಂತಿವೆ:

ಹುದ್ದೆಗಳ ವಿವರ ಇಂತಿವೆ:

* ಪೊಲೀಸ್ ಕಾನ್ಸ್ ಟೇಬಲ್ (ನಾಗರಿಕ)(ಪುರುಷ)-1980, * ಪೊಲೀಸ್ ಕಾನ್ಸ್ ಟೇಬಲ್ (ನಾಗರಿಕ)(ಮಹಿಳಾ)-496, * ಪುರುಷ ಸ್ಥಳೀಯೇತರ ವೃಂದ (ಉಳಿದ ಮೂಲ ವೃಂದ)-ರೈಲ್ವೇಸ್-120, * ಮಹಿಳಾ ಸ್ಥಳೀಯೇತರ ವೃಂದ (ಉಳಿದ ಮೂಲ ವೃಂದ)-ರೈಲ್ವೇಸ್-30

ವಯೋಮಿತಿ

ವಯೋಮಿತಿ

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಂದರೆ 12-06-2017ಕ್ಕೆ ಅಭ್ಯರ್ಥಿಗೆ ಕನಿಷ್ಠ 19 ವರ್ಷ ವಯಸ್ಸಾಗಿರಬೇಕು ಹಾಗೂ ಗರಿಷ್ಠ ವಯಸ್ಸು ಮೀರಿರಬಾರದು.
* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದೂಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 27 ವರ್ಷಗಳು.
* ಇತರೆ ಅಭ್ಯಾರ್ಥಿಗಳಿಗೆ 25 ವರ್ಷಗಳು. ಕರ್ನಾಟಕ ರಾಜ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆ 30 ವರ್ಷಗಳು.

ವಿದ್ಯಾರ್ಹತೆ ಮತ್ತು ವೇತನ ಶ್ರೇಣಿ

ವಿದ್ಯಾರ್ಹತೆ ಮತ್ತು ವೇತನ ಶ್ರೇಣಿ

ವೇತನ ಶ್ರೇಣಿ: 11600 ರಿಂದ 21000 ರು. ತಿಂಗಳಿಗೆ.
ವಿದ್ಯಾರ್ಹತೆ: ಅಭ್ಯರ್ಥಿಗಳು ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಅರ್ಜಿ ಶುಲ್ಕ

ಅರ್ಜಿ ಶುಲ್ಕ

ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 250ರು. ಪ.ಜಾ/ಪ.ಪಂ/ಪ್ರ-1 ರ ಅಭ್ಯರ್ಥಿಗಳಿಗೆ 100 ರು. ನಿಗದಿತ ಶುಲ್ಕವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಸ್ಥಳೀಯ ಅಂಚೆ ಕಛೇರಿಯ ಅಧಿಕೃತ ಶಾಖೆಗಳಲ್ಲಿ ಕಛೇರಿಯ ವೇಳೆಯಲ್ಲಿ ಚಲನ್ ಮೂಲಕ ಶುಲ್ಕ ಪಾವತಿಸತಕ್ಕದ್ದು.

ದೇಹದಾರ್ಢ್ಯತೆ ಪರೀಕ್ಷೆ (Physical Standard Test)

ದೇಹದಾರ್ಢ್ಯತೆ ಪರೀಕ್ಷೆ (Physical Standard Test)

* ಎಲ್ಲಾ ಸಾಮಾನ್ಯ ಅಭ್ಯರ್ಥಿಗಳು ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಕನಿಷ್ಠ ಎತ್ತರ 168 ಸೆಂ. ಮೀ, ಕನಿಷ್ಠ ಎದೆ ಸುತ್ತಳತೆ 86 ಸೆಂ.ಮೀ.
* ಮಹಿಳಾ ಅಭ್ಯರ್ಥಿಗಳಿಗೆ ಕನಿಷ್ಠ ಎತ್ತರ 157 ಸೆಂ. ಮೀ, ನಜಿಷ್ಠ ತೂಕ 45 ಕೆ.ಜಿ.
* ಬುಡಕಟ್ಟು ಪುರುಷ ಅಭ್ಯರ್ಥಿಗಳಿಗೆ ಕನಿಷ್ಠ ಎತ್ತರ 155 ಸೆಂ. ಮೀ, ಎದೆ ಸುತ್ತಳತೆ 75 ಸೆಂ.ಮೀ.ಗಳಿಗಿಂಯ ಕಡಿಮೆ ಇಲ್ಲದಂತೆ.
* ಬುಡಕಟ್ಟು ಮಹಿಳಾ ಅಭ್ಯರ್ಥಿಗಳಿಗೆ ಕನಿಷ್ಠ ಎತ್ತರ 150 ಸೆಂ.ಮೀ.

ಸಹಿಷ್ಣತೆ ಪರೀಕ್ಷೆ

ಸಹಿಷ್ಣತೆ ಪರೀಕ್ಷೆ

* ಎಲ್ಲಾ ಸಾಮಾನ್ಯ ಅಭ್ಯರ್ಥಿಗಳಿಗೆ 1600 ಮೀಟರ್ ಓಟ ಅದು 6 ನಿಮಿಷ 30 ಸೆಕೆಂಡುಗಳಲ್ಲಿ ಓಡಬೇಕು. ಎತ್ತರ ಜಿಗಿತ 1.20 ಮೀಟರ್ ಕಡಿಮೆ ಇಲ್ಲದಂತೆ(3 ಅವಕಾಶಗಳು). ಅಥವಾ ಉದ್ದ ಜಿಗಿತ 3.80 ಮೀಟರ್ ಕಡಿಮೆ ಇಲ್ಲದಂತೆ (ಮೂರು ಅವಕಾಶಗಳು). ಗುಂಡು ಎಸೆತ (7.26ಕೆ.ಜಿ) 5.60ಮೀಟರ್ ಕಡಿಮೆ ಇಲ್ಲದಂತೆ.
* ಮಹಿಳಾ ಮತ್ತು ಸೈನಿಕ ಅಭ್ಯರ್ಥಿಗಳಿಗೆ ಎತ್ತರ ಜಿಗಿತ 0.90 ಮೀಟರ್ ಕಡಿಮೆ ಇಲ್ಲದಂತೆ. ಉದ್ದ ಜಿಗಿತ 2.50 ಮೀಟರ್ ಕಡಿಮೆ ಇಲ್ಲದಂತೆ (ಮೂರು ಅವಕಾಶಗಳು). ಗುಂಡು ಎಸೆತ (4ಕೆ.ಜಿ) 3.75 ಮೀಟರ್ ಕಡಿಮೆ ಇಲ್ಲದಂತೆ.

ಸಹಾಯವಾಣಿ

ಸಹಾಯವಾಣಿ

ಡೆಪ್ಯೂಟಿ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ನೇಮಕಾತಿ ಮತ್ತು ತರಬೇತಿ ಹಾಗೂ ಸಮನ್ವಯಾಧಿಕಾರಿ, ಪೊಲೀಸ್ ಕಾನ್ಸ್ ಟೇಬಲ್ (ಸಿವಿಲ್) ನೇಮಕಾತಿ ಸಮಿತಿ, ಕಾರ್ಲಟನ್ ಭವನ, ಅರಮನೆ ರಸ್ತೆ, ಬೆಂಗಳೂರು. ದೂರವಾಣಿ ಸಂಖ್ಯೆ22942261, 22207044 ಈ ವಿಳಾಸಕ್ಕೆ ಕಚೇರಿಯ ಸಮಯಕದಲ್ಲಿ ಅಭ್ಯರ್ಥಿಗಳು ಸಂಪರ್ಕಿಸ ಬಹುದಾಗಿದೆ.

ಪ್ರಮುಖ ದಿನಾಂಕಗಳು

ಪ್ರಮುಖ ದಿನಾಂಕಗಳು

* ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 27-05-2017, ಬೆಳಿಗ್ಗೆ 10.00 ಗಂಟೆಯಿಂದ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12-06-2017, ಸಂಜೆ 06.00 ಗಂಟೆಯವರೆಗೆ ಅಧಿಕೃತ ಬ್ಯಾಂಕ್ ಶಾಖೆಗಳ/ಅಂಚೆ ಕಛೇರಿ ವೇಳೆಯಲ್ಲಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 14-06-2017

English summary
Karnataka State Police invites application for the position of 2626 Civil Police Constable vacancies. Apply online before 12-06-2017
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X