ಚಿತ್ರದುರ್ಗ ಜಿಲ್ಲಾ ಸಹಕಾರ ಬ್ಯಾಂಕ್ ನೇಮಕಾತಿ, ವಿವರಗಳು

ಚಿತ್ರದುರ್ಗ, ಜುಲೈ 22 : ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಲ್ಲಿಸಲು ಆಗಸ್ಟ್ 16, 2018 ಕೊನೆಯ ದಿನವಾಗಿದೆ.

20 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕಾಗಿದೆ. ಖುದ್ದಾಗಿ ಅಥವ ಅಂಚೆ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿಲ್ಲ ಎಂದು ನೇಮಕಾತಿ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಜುಲೈ 19ರಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿಗಳನ್ನು ಸಲ್ಲಿಸಲು 16/8/2018 ಕೊನೆಯ ದಿನವಾಗಿದೆ. ಶುಲ್ಕಗಳನ್ನು ಪಾವತಿ ಮಾಡಲು 17/8/2018 ಕೊನೆಯ ದಿನವಾಗಿದೆ. ಎಸ್‌ಎಸ್‌ಎಲ್‌ಸಿ/ಪಿಯುಸಿ/ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿಗಳನ್ನು ಸಲ್ಲಿಸುವ ಮೊದಲು ನೇಮಕಾತಿ ಆದೇಶವನ್ನು ಸರಿಯಾಗಿ ಓದಿಕೊಳ್ಳಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅರ್ಜಿ ಸಲ್ಲಿಸುವ ವಿಧಾನ ಮುಂತಾದ ಮಾಹಿತಿಗಳನ್ನು ವೆಬ್‌ಸೈಟ್‌ನಲ್ಲಿ ನೀಡಲಾಗಿದೆ.

ಯಾವ-ಯಾವ ಹುದ್ದೆಗಳು

ಯಾವ-ಯಾವ ಹುದ್ದೆಗಳು

ಕಿರಿಯ ಶಾಖಾ ವ್ಯವಸ್ಥಾಪಕರು/ಪ್ರಥಮ ದರ್ಜೆ ಸಹಾಯಕರು/ಕ್ಷೇತ್ರಾಧಿಕಾರಿಗಳು. ಒಟ್ಟು ಹುದ್ದೆಗಳು 1. ವೇತನ ಶ್ರೇಣಿ 20000-36300 ರೂ.ಗಳು. ವರ್ಗಗಳ ವಿವರ ಪರಿಶಿಷ್ಟ ಜಾತಿ (ಎಸ್‌.ಸಿ).

ಅರ್ಜಿಗಳನ್ನು ಸಲ್ಲಿಸುವಾಗ ತಾಂತ್ರಿಕ ತೊಂದರೆ ಉಂಟಾದರೆ ಅಥವ ಗೊಂದಲವಾದರೆ 8904985941 ನಂಬರ್‌ಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯ ತನಕ ಕರೆ ಮಾಡಬಹುದಾಗಿದೆ.

19 ಹುದ್ದೆಗಳ ವಿವರ

19 ಹುದ್ದೆಗಳ ವಿವರ

* ಕಿರಿಯ ಶಾಖಾ ವ್ಯವಸ್ಥಾಪಕರು/ಪ್ರಥಮ ದರ್ಜೆಯ ಸಹಾಯಕರು/ಕ್ಷೇತ್ರಾಧಿಕಾಗಿಗಳು. ಒಟ್ಟು ಹುದ್ದೆ 2 (1 ಮಹಿಳಾ ಅಭ್ಯರ್ಥಿ). ವೇತನ ಶ್ರೇಣಿ 20000-36000. ಸಾಮಾನ್ಯ ವರ್ಗ.

* ಕಿರಿಯ ಸಹಾಯಕರು/ದ್ವಿತೀಯ ದರ್ಜೆಯ ಸಹಾಯಕರು/ನಗದು ಗುಮಾಸ್ತರು/ಮೇಲ್ವಿಚಾರಕರು. ಒಟ್ಟು ಹುದ್ದೆಗಳು 7.(ಸಾಮಾನ್ಯ ವರ್ಗ 3, ಎಸ್‌ಸಿ 1, 2ಎ 1, 2ಬಿ 1, 3ಎ 1. ವೇತನ ಶ್ರೇಣಿ 16000-29000.

ಯಾವ ಹುದ್ದೆ, ಎಷ್ಟು ವೇತನ

ಯಾವ ಹುದ್ದೆ, ಎಷ್ಟು ವೇತನ

* ಅಟೆಂಡರ್. ಒಟ್ಟು ಹುದ್ದೆಗಳು 9. (ಸಾಮಾನ್ಯ ವರ್ಗ 5, ಎಸ್‌ಸಿ 1, 2ಎ 2, 3ಬಿ 1). ವೇತನ ಶ್ರೇಣಿ 12500-24000

* ವಾಹನ ಚಾಲಕರು. ಹುದ್ದೆ 1. ಸಾಮಾನ್ಯ ವರ್ಗ. ವೇತನ ಶ್ರೇಣಿ 14550-26700 ರೂ.ಗಳು.

ವಯೋಮಿತಿಯ ವಿವರಗಳು

ವಯೋಮಿತಿಯ ವಿವರಗಳು

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ ವಯೋಮಿತಿ ಹೊಂದಿರಬೇಕು ಹಾಗೂ ನಿಗದಿತ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು. ಅಂಗವಿಕಲ/ವಿಧವೆ ಅಭ್ಯರ್ಥಿಗಳಿಗೆ 10 ವರ್ಷದ ವಯೋಮಿತಿ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕದ ವಿವರ

ಅರ್ಜಿ ಶುಲ್ಕದ ವಿವರ

ಅರ್ಜಿ ಸಲ್ಲಿಸಿದ ಬಳಿಕ ವಿದ್ಯುಮಾನ ಪಾವತಿ ಇ ಪೇಮೆಂಟ್ ಅಂಚೆ ಕಚೇರಿಗೆ ತೆರಳಿ ನಿಗದಿತ ಅರ್ಜಿ ಶುಲ್ಕ ಮತ್ತು ಸೇವಾ ತೆರಿಗೆ ರೂ.30 ಅನ್ನು ಪಾವತಿ ಮಾಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+