ಚಾಮರಾಜನಗರ ಜಿಲ್ಲಾ ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳು ಖಾಲಿ
ಚಾಮರಾಜನಗರ, ನವೆಂಬರ್ 05 : ಚಾಮರಾಜನಗರ ಜಿಲ್ಲಾ ನ್ಯಾಯಾಂಗ ಘಟಕದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಅಂಚೆ ಮೂಲಕ ಅರ್ಜಿಗಳನ್ನು ಸಲ್ಲಿಸಲು 5/12/2018 ಕೊನೆಯ ದಿನವಾಗಿದೆ.
ಶೀಘ್ರಲಿಪಿಗಾರ, ಬೆರಳಚ್ಚುಗಾರ, ನಕಲು ಬೆರಳಚ್ಚುಗಾರ, ಆದೇಶ ಜಾರಿಕಾರ ಮತ್ತು ಸೇವಕರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆನ್‌ಲೈನ್‌ನಲ್ಲಿ ಸಿಗುವ ಅರ್ಜಿಯ ಪ್ರತಿಯನ್ನು ತೆಗೆದುಕೊಂಡು ಅಭ್ಯರ್ಥಿಯು ಕೈ ಬರಹದಲ್ಲಿ ಭರ್ತಿ ಮಾಡಿ ಅಗತ್ಯ ದಾಖಲೆಗಳ ಜೊತೆ ಸಲ್ಲಿಸಬೇಕು.
ಒಟ್ಟು 19 ಹುದ್ದೆಗಳಿದ್ದು ಆಯ್ಕೆಯಾದ ಅಭ್ಯರ್ಥಿಗಳು ಚಾಮರಾಜನಗರದಲ್ಲಿ ಕೆಲಸ ಮಾಡಬೇಕಿದೆ. ಅರ್ಜಿ ಅಪೂರ್ಣವಾಗಿದ್ದರೆ, ಸಹಿ ಮಾಡದೇ ಇದ್ದರೆ, ವಿದ್ಯಾರ್ಹತೆ, ಮೀಸಲಾತಿ ದಾಖಲೆಗಳನ್ನು ಸಲ್ಲಿಕೆ ಮಾಡದಿದ್ದರೆ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.
ಅರ್ಜಿ ಸಲ್ಲಿಸುವಾಗ ಲಕೋಟೆಯ ಮೇಲೆ ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ ಎಂದು ದಪ್ಪ ಅಕ್ಷರಗಳಲ್ಲಿ ಬರೆಯಬೇಕು. ಅರ್ಜಿಯ ಜೊತೆ ಅಭ್ಯರ್ಥಿಗಳು 5 ರೂ. ಅಂಚೆ ಮುದ್ರಾಂಕವನ್ನು ಹೊಂದಿರುವ ಸ್ವ-ವಿಳಾಸದ ಲಕೋಟೆಯನ್ನು ಸಲ್ಲಿಸತಕ್ಕದ್ದು...

ಎಷ್ಟು ಹುದ್ದೆಗಳು ಖಾಲಿ ಇವೆ
* ಶೀಘ್ರಲಿಪಿಗಾರ 6
* ಬೆರಳಚ್ಚುಗಾರ 1
* ನಕಲು ಬೆರಳಚ್ಚುಗಾರ 3
* ಆದೇಶ ಜಾರಿಕಾರ 2
* ಸೇವಕರ (peon) 7 ಹುದ್ದೆಗಳಿವೆ.

ವಯೋಮಿತಿಯ ವಿವರ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18, ಗರಿಷ್ಠ 35 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ.
ಓಬಿಸಿ (2ಎ/2ಬಿ/3ಎ/&3ಬಿ) ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ/ಪ್ರವರ್ಗ-1 ರ ಅಭ್ಯರ್ಥಿಗಳಿಗೆ 40 ವರ್ಷದ ವಯೋಮಿತಿ ನಿಗದಿಪಡಿಸಲಾಗಿದೆ.

ವೇತನ ಶ್ರೇಣಿಗಳ ವಿವರ
* ಶೀಘ್ರಲಿಪಿಗಾರ 27650-52650 ರೂ. ಪ್ರತಿ ತಿಂಗಳು
* ಬೆರಳಚ್ಚುಗಾರ 21400-42000 ರೂ. ಪ್ರತಿ ತಿಂಗಳು
* ನಕಲು ಬೆರಳಚ್ಚುಗಾರ 21400-42000 ಪ್ರತಿ ತಿಂಗಳು
* ಆದೇಶ ಜಾರಿಕಾರ 19950-37900 ಪ್ರತಿ ತಿಂಗಳು
* ಸೇವಕರ -17000-28950 ಪ್ರತಿ ತಿಂಗಳು.

ಅರ್ಜಿ ಸಲ್ಲಿಸಲು ವಿಳಾಸ
ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಕೈ ಬರಹದಲ್ಲಿ ಭರ್ತಿ ಮಾಡಿ ದಿನಾಂಕ 5/12/2018ರ ಸಂಜೆ 5 ಗಂಟೆಯೊಳಗೆ ಈ ವಿಳಾಸಕ್ಕೆ ಸಲ್ಲಿಸಬೇಕು.
ಅರ್ಜಿಗಳನ್ನು ಸಲ್ಲಿಸಲು ವಿಳಾಸ : ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ
ಚಾಮರಾಜನರ












Click it and Unblock the Notifications