Central Bank of India recruitment 2022 : ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 110 ಹುದ್ದೆಗಳಿವೆ

ನವದೆಹಲಿ, ಅಕ್ಟೋಬರ್ 07: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 2022ನೇ ಸಾಲಿನ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರೆಸಿದೆ. ಈ ಕುರಿತಂತೆ ತನ್ನ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. 110 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ, ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 17 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಸಂಸ್ಥೆ ಹೆಸರು: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
ಹುದ್ದೆ ಹೆಸರು: Officer, Economist, IT, Data Scientist & Other
ಒಟ್ಟು ಹುದ್ದೆ: 110
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಅಕ್ಟೋಬರ್ 17 , 2022

ವಿದ್ಯಾರ್ಹತೆ: ಪದವಿ, ಪಿಜಿ ಪದವಿ, ಎಂಬಿಎ, ಬಿ. ಟೆಕ್, ಎಂಸಿಎ, ಎಂಎಸ್ಸಿ, ಸಿಎ, ಸಿಎಫ್ಎ. ಐಸಿಎಐ.. ಇತ್ಯಾದಿ

ವಯೋಮಿತಿ
ಕನಿಷ್ಠ ವಯೋಮಿತಿ: 20 ವರ್ಷ
ಗರಿಷ್ಠ ವಯೋಮಿತಿ: 45 ವರ್ಷ

ಹುದ್ದೆ ವಿವರ
ಕ್ರಮ ಸಂಖ್ಯೆ ಹುದ್ದೆ ಹೆಸರು ಹುದ್ದೆ ಸಂಖ್ಯೆ ವಿದ್ಯಾರ್ಹತೆ ವಯೋಮಿತಿ
01 ಎಕಾನಾಮಿಸ್ಟ್ 03 ಪಿಜಿ(ಎಕಾನಾಮಿಕ್ಸ್/ಬ್ಯಾಂಕಿಂಗ್/ಕಾಮರ್ಸ್/ ಎಕಾನಾಮಿ ಪಾಲಿಸಿ/ಪಬ್ಲಿಕ್ ಪಾಲಿಸಿ) 30- 45 ವರ್ಷ
02 ಐಟಿ 36 ಪದವಿ(ಇಂಜಿನಿಯರ್) 35- 50 ವರ್ಷ
03 ಡೇಟಾ ಸೈಂಟಿಸ್ಟ್ 01 ಬಿ.ಇ/ ಬಿ.ಟೆಕ್/ಪಿಜಿ 28- 35 ವರ್ಷ
04 ರಿಸ್ಕ್ ಮ್ಯಾನೇಜರ್ 21 ಬಿಎಸ್ ಸಿ/ ಎಂಬಿಎ/ಡಿಪ್ಲೋಮಾ(FRM/CFA) 20-35 ವರ್ಷ
05 ಐಟಿ Soc ಸೆಕ್ಯುರಿಟಿ ಅನಾಲಿಸ್ಟ್ 01 ಬಿ.ಇ (ಇಂಜಿನಿಯರಿಂಗ್) 26- 40 ವರ್ಷ
06 ಐಟಿ ಸೆಕ್ಯುರಿಟಿ ಅನಾಲಿಸ್ಟ್ 01 ಬಿ.ಇ/ಎಂಸಿಎ/ಎಂ.ಟೆಕ್ 26- 40 ವರ್ಷ
07 ಟೆಕ್ನಿಕಲ್ ಆಫೀಸರ್(ಕ್ರೆಡಿಟ್) 15 ಪದವಿ(ಇಂಜಿನಿಯರಿಂಗ್) 26-34 ವರ್ಷ
08 ಕ್ರೆಡಿಟ್ ಅಧಿಕಾರಿ 08 ಸಿಎ/ ಐಸಿಎಐ/ ಎಂಬಿಎ 26- 34 ವರ್ಷ
09 ಡೇಟಾ ಇಂಜಿಯರ್ 09 ಪಿ ಜಿ ಡಿಪ್ಲೋಮಾ 26- 35 ವರ್ಷ
10 ಸೆಕ್ಯುರಿಟಿ 05 ಪದವಿ/ ಕಂಪ್ಯೂಟರ್ ಜ್ಞಾನ 20-35 ವರ್ಷ
11 ಫೈನಾನ್ಸ್ ಅನಾಲಿಸ್ಟ್ 08 ಐಸಿಎಐ, ಎಂಬಿಎ 26-35 ವರ್ಷ

ನೇಮಕಾತಿ ಪ್ರಕ್ರಿಯೆ: ಆನ್ ಲೈನ್ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ.

ಅರ್ಜಿ ಶುಲ್ಕ:
ಎಸ್ ಸಿ/ ಎಸ್ಟಿ: 175 ರು + ಜಿಎಸ್‌ಟಿ
ಇತರೆ: 850 ರು

Central Bank of India Officer Recruitment 2022: Apply Online for 110 Vacancy

ಶುಲ್ಕ ಪಾವತಿ ವಿಧಾನ: ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಬಹುದು. ಆನ್ ಲೈನ್ ಮೂಲಕವೇ ಪೇಮೆಂಟ್ ಮಾಡಬಹುದು. ಡೆಬಿಟ್ ಕಾರ್ಡ್/ ರುಪೇ ಕಾರ್ಡ್/ ವೀಸಾ ಕಾರ್ಡ್/ ಮಾಸ್ಟರ್ ಕಾರ್ಡ್/ಮಾಸ್ಟ್ರೋ ಅಲ್ಲದೆ ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್/ಮೊಬೈಲ್ ವ್ಯಾಲೆಟ್/ಯುಪಿಐ ಮೂಲಕ ಹಣ ಪಾವತಿಸಬಹುದು.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 28/09/2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 17/10/2022
ಆನ್‌ಲೈನ್ ಪರೀಕ್ಷೆ ಸಂಭಾವ್ಯ ದಿನಾಂಕ: ಡಿಸೆಂಬರ್ 2022

ಅರ್ಜಿ ಸಲ್ಲಿಸುವ ವಿಧಾನ:
* ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಅಧಿಸೂಚನೆ ಓದಿಕೊಂಡು, ಅರ್ಹತೆಯುಳ್ಳ ಅಭ್ಯರ್ಥಿಗಳು ಅಧಿಕೃತ ವೆಬ್ ತಾಣದಲ್ಲಿ ನೇಮಕಾತಿ ಲಿಂಕ್ ಕ್ಲಿಕ್ ಮಾಡಿ.
* ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಮುನ್ನ ಐಬಿಪಿಎಸ್ ವೆಬ್ ತಾಣ(https://ibpsonline.ibps.in/cbiosep22/)ದಲ್ಲಿ ನೋಂದಣಿ ಮಾಡಿಕೊಳ್ಳಿ.
* ಅರ್ಜಿ ಸಲ್ಲಿಸುವ ಮುನ್ನ ಇಮೇಲ್ ಐಡಿ ಹಾಗೂ ಮೊಬೈಲ್ ನಂಬರ್ ನೀಡಿ.
* ವಯೋಮಿತಿ, ವಿದ್ಯಾರ್ಹತೆ, ಅನುಭವ, ವಯೋಮಿತಿ ವಿನಾಯಿತಿ ಮುಂತಾದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸತಕ್ಕದ್ದು.
* ತಾಂತ್ರಿಕ/ ತಾಂತ್ರಿಕೇತರ ಹುದ್ದೆ ಅರ್ಜಿ ನಮೂನೆಯನ್ನು ಕ್ಲಿಕ್ ಮಾಡಿ ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ಪ್ರಮಾಣ ಪತ್ರಗಳನ್ನು ಲಗತ್ತಿಸಿ.
* ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಬಹುದು. ಆನ್ ಲೈನ್ ಮೂಲಕವೇ ಪೇಮೆಂಟ್ ಮಾಡಬಹುದು. ಡೆಬಿಟ್ ಕಾರ್ಡ್/ ರುಪೇ ಕಾರ್ಡ್/ ವೀಸಾ ಕಾರ್ಡ್/ ಮಾಸ್ಟರ್ ಕಾರ್ಡ್/ಮಾಸ್ಟ್ರೋ ಅಲ್ಲದೆ ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್/ಮೊಬೈಲ್ ವ್ಯಾಲೆಟ್/ಯುಪಿಐ ಮೂಲಕ ಹಣ ಪಾವತಿಸಬಹುದು.
* ಅರ್ಜಿ ಸಲ್ಲಿಸಿದ್ದಕ್ಕೆ ಹಾಗೂ ಶುಲ್ಕ ಪಾವತಿಗೆ ಇ ರಸೀತಿ ಪಡೆದುಕೊಳ್ಳಿ.

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಅಧಿಕೃತ ವೆಬ್‌ತಾಣಕ್ಕೆ (https://www.centralbankofindia.co.in/en) ಭೇಟಿ ನೀಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+