ಕೆನರಾ ಬ್ಯಾಂಕ್ ನೇಮಕಾತಿ, ಪದವೀಧರರು ಅರ್ಜಿ ಹಾಕಿ
ಬೆಂಗಳೂರು, ಫೆಬ್ರವರಿ 26 : ಕೆನರಾ ಬ್ಯಾಂಕ್ ಸೆಕ್ಯೂರಿಟೀಸ್ ಲಿಮಿಡೆಡ್ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು 5/3/2019 ಕೊನೆಯದಿನವಾಗಿದೆ.
ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್, ಡೆಪ್ಯೂಟಿ ಮ್ಯಾನೇಜರ್ (ಚಾರ್ಟಡ್ ಅಕೌಂಟೆಂಟ್), ಆಫೀಸರ್ ಆನ್ ಕಾಂಟ್ರಕ್ಟ್ (ರಿಸರ್ಚ್ ಅಸೋಸಿಯೇಟ್), ಜ್ಯೂನಿಯರ್ ಆಫೀಸರ್ ಆನ್ ಕಾಂಟ್ರಕ್ಟ್ 8 ಸೇರಿದಂತೆ ಒಟ್ಟು 12 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ (ರಿಸರ್ಚ್ ಅನಲಿಸ್ಟ್) ಹುದ್ದೆಗೆ ಎಂಬಿಎ, ಡೆಪ್ಯೂಟಿ ಮ್ಯಾನೇಜರ್ (ಚಾರ್ಟಡ್ ಅಕೌಂಟೆಂಟ್) ಹುದ್ದೆಗೆ ಚಾರ್ಟಡ್ ಅಕೌಂಟೆಂಟ್, ಆಫೀಸರ್ ಆನ್ ಕಾಂಟ್ರಕ್ಟ್ (ರಿಸರ್ಚ್ ಅಸೋಸಿಯೇಟ್) ಹುದ್ದೆಗೆ ಪದವಿ, ಜ್ಯೂನಿಯರ್ ಆಫೀಸರ್ ಆನ್ ಕಾಂಟ್ರಕ್ಟ್ ಹುದ್ದೆಗೆ ಪದವಿ ವಿದ್ಯಾರ್ಹತೆಯನ್ನು ನಿಗದಿ ಮಾಡಲಾಗಿದೆ.

ವಯೋಮಿತಿ ವಿವರ : ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ 30, ಡೆಪ್ಯೂಟಿ ಮ್ಯಾನೇಜರ್ 30, ಆಫೀಸರ್ ಆನ್ ಕಾಂಟ್ರಕ್ಟ್ 30, ಜ್ಯೂನಿಯರ್ ಆಫೀಸರ್ 28 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಬ್ಯರ್ಥಿಗಳಿಗೆ 3 ವರ್ಷದ ವಯೋಮಿತಿ ಸಡಿಲಿಕೆ ಇರುತ್ತದೆ.
ವೇತನ ಶ್ರೇಣಿ
* ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ 26200-39200 ರೂ.
* ಡೆಪ್ಯೂಟಿ ಮ್ಯಾನೇಜರ್ 20000-31000 ರೂ.
* ಆಫೀಸರ್ ಆನ್ ಕಾಂಟ್ರಕ್ಟ್ 37500-46500 ರೂ.
* ಜ್ಯೂನಿಯರ್ ಆಫೀಸರ್ 22500-28000 ರೂ. ವೇತನ ನಿಗದಿ ಮಾಡಲಾಗಿದೆ.
ಆಸಕ್ತ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ, ನಿಗದಿತ ದಾಖಲೆಗಳನ್ನು ಲಗತ್ತಿಸಿ ಕಳುಹಿಸಬೇಕಾಗಿದೆ.
ಅರ್ಜಿಗಳನ್ನು ಸಲ್ಲಿಸಲು ವಿಳಾಸ
The Senior Manager
Canara Bank Securities Ltd 701
7th Floor, Maker Chamber III Nariman Point
Mumbai 400021












Click it and Unblock the Notifications