Government jobs: ಪದವಿ ಪಡೆದವರಿಗೆ ಸರ್ಕಾರಿ ಹುದ್ದೆ, ಕೈತುಂಬ ಸಂಬಳ, ಅರ್ಜಿ ಸಲ್ಲಿಕೆ, ಆಯ್ಕೆ ಬಗ್ಗೆ ತಿಳಿಯಿರಿ

ಬೆಂಗಳೂರು, ಅಕ್ಟೋಬರ್ 10: ಕ್ಯಾಬಿನೆಟ್ ಸೆಕ್ರೆಟರಿಯೇಟ್ (Cabinet Secretariat) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭವಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ನವೆಂಬರ್ 6ರೊಳಗೆ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ. ಈ ಮೂಲಕ ಸರ್ಕಾರಿ ಉದ್ಯೋಗ ಹಡುಕುತ್ತಿರುವವಿಗೆ ಇದೊಂದು ಉತ್ತಮ ಅವಕಾಶವಾಗಿದೆ.

ಕ್ಯಾಬಿನೆಟ್ ಸೆಕ್ರೆಟರಿಯೇಟ್ ನಲ್ಲಿ ಒಟ್ಟು 125 ಡೆಪ್ಯುಟಿ ಫೀಲ್ಡ್ ಆಫೀಸರ್ಸ್ (ತಾಂತ್ರಿಕ) ಹುದ್ದೆಗಳು ಖಾಲಿ ಇವೆ. ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಬೇಕು. ಇದಕ್ಕ ಮೊದಲು ಈ ಕೆಳಗೆ ಈಡಲಾಗಿರುವ ನೇಮಕಾತಿಯ ಪೂರ್ಣ ಮಾಹಿತಿ ತಿಳಿದುಕೊಳ್ಳಬೇಕಿದೆ.

Cabinet Secretariat Recruitment 2023: Invites Applications by Eligible Candidates For Posts

ನೇಮಕಾತಿ ಮಾಹಿತಿ ಇಲ್ಲಿದೆ

ಸಂಸ್ಥೆ ಹೆಸರು: ಕ್ಯಾಬಿನೆಟ್ ಸೆಕ್ರೆಟರಿಯೇಟ್

ಹುದ್ದೆ ಹೆಸರು: ಡೆಪ್ಯುಟಿ ಫೀಲ್ಡ್ ಆಫೀಸರ್ಸ್

ಖಾಲಿ ಹುದ್ದೆ ಸಂಖ್ಯೆ: 125

ಮಾಸಿಕ ವೇತನ: ₹ 90,000

ಅರ್ಜಿ ಸಲ್ಲಿಕೆಗೆ ಕೊನೆ ದಿನ: ನವೆಂಬರ್ 6

ಪೋಸ್ಟಿಂಗ್: ಭಾರತ

ಶೈಕ್ಷಣಿಕ ಅರ್ಹತೆ

ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಬಿಇ/ ಬಿ.ಟೆಕ್, ಎಂ.ಎಸ್ಸಿ ಪದವಿ ಪಡೆದಿರಬೇಕು.

ವಯೋಮಿತಿ ವಿವರ

ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳ ವಯಸ್ಸು ನವೆಂಬರ್ 6ಕ್ಕೆ ಗರಿಷ್ಠ 30 ವರ್ಷ ವಯಸ್ಸಾಗಿರಬೇಕು ಎಂದು ನಿಗದಿ ಮಾಡಲಾಗಿದೆ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ ಎಂದು ಕ್ಯಾಬಿನೆಟ್ ಸೆಕ್ರೆಟರಿಯೇಟ್ ನೇಮಕಾತಿ ಅಧಿಸೂಚನೆ ತಿಳಿಸಿದೆ.

Cabinet Secretariat Recruitment 2023: Invites Applications by Eligible Candidates For Posts

ಆಯ್ಕೆ ಹೇಗೆ?

ಮೊದಲು ಅರ್ಜಿ ಸಲ್ಲಿದ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ಮಾಡಲಾಗುತ್ತದೆ. ನಂತರ ವೈದ್ಯಕೀಯ ಪರೀಕ್ಷೆ ಮತ್ತು

ಗೇಟ್ ಸ್ಕೋರ್ ನಡೆಸಲಾಗುವುದು. ಅಂತಿಮವಾಗಿ ವೈಯಕ್ತಿಕ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಅಭ್ಯರ್ಥಿಗಳು ಅರ್ಜಿಗಳನ್ನು ಸೂಕ್ತ ದಾಖಲಾತಿಗಳ ಸಹಿತ ಪೋಸ್ಟ್ ಬ್ಯಾಗ್ ಸಂಖ್ಯೆ. 001 ಲೋಧಿ ರಸ್ತೆ ಹೆಡ್ ಪೋಸ್ಟ್ ಆಫೀಸ್ ನವದೆಹಲಿ-110003 ಇಲ್ಲಿಗೆ ನವೆಂಬರ್ 6ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+