ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಡಿ ಭದ್ರತಾ ಪಡೆಯಲ್ಲಿ ಗ್ರೂಪ್ ಬಿ 90 ಹುದ್ದೆಗಳಿಗೆ ಅರ್ಜಿ ಆಹ್ವಾನ

|
Google Oneindia Kannada News

ನವದೆಹಲಿ, ಮೇ 3: ಗಡಿ ಭದ್ರತಾ ಪಡೆ (ಬಿಎಸ್ಎಫ್) ತನ್ನ ಅಧಿಕೃತ ವೆಬ್ ತಾಣದಲ್ಲಿ 2022ನೇ ಸಾಲಿನ ನೇಮಕಾತಿ ಕುರಿತಂತೆ ಪ್ರಕಟಣೆ ಹೊರಡಿಸಿದೆ. ಗ್ರೂಪ್ ಬಿ ಇಂಜಿನಿಯರಿಂಗ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದ್ದು, ಅರ್ಹ ಆಸಕ್ತ ಅಭ್ಯರ್ಥಿಗಳು ಜೂನ್ 8, 2022ರೊಳಗೆ ಅರ್ಜಿ ಸಲ್ಲಿಸಬಹುದು.

ಸಂಸ್ಥೆ ಹೆಸರು: Border Security Force
ಹುದ್ದೆ ಹೆಸರು: ಗ್ರೂಪ್ ಬಿ (ಇಂಜಿನಿಯರಿಂಗ್)
ಒಟ್ಟು ಹುದ್ದೆ: 90
ಉದ್ಯೋಗ ಸ್ಥಳ: ಭಾರತದೆಲ್ಲೆಡೆ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಜೂನ್ 8, 2022

ಹುದ್ದೆ-ವೇತನ ವಿವರ:
ಇನ್ಸ್ ಪೆಕ್ಟರ್ (ಆರ್ಕಿಟೆಕ್ಟ್): 1
ವೇತನ ಶ್ರೇಣಿ: 44900-142400 ರು / ಲೆವಲ್ -7

ಸಬ್ ಇನ್ಸ್ ಪೆಕ್ಟರ್ (ವರ್ಕ್ಸ್) : 57 ಹುದ್ದೆ

ವೇತನ ಶ್ರೇಣಿ: 35400 - 112400 ರು / ಲೆವಲ್ -6

ಜ್ಯೂನಿಯರ್ ಇಂಜಿನಿಯರ್ /ಸಬ್ ಇನ್ಸ್ ಪೆಕ್ಟರ್ (ಎಲೆಕ್ಟ್ರಿಕಲ್): 32

ವೇತನ ಶ್ರೇಣಿ: 35400 - 112400 ರು / ಲೆವಲ್ -6

BSF Recruitment 2022 Apply for 2788 Constable(Tradesman) Vacancies

ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 10ನೇ ತರಗತಿ, 12ನೇ ತರಗತಿಯಲ್ಲಿ ಪಾಸ್, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಡಿಪ್ಲೋಮಾ ಪಡೆದಿರಬೇಕು.

ಸಬ್ ಇನ್ಸ್ ಪೆಕ್ಟರ್ (ವರ್ಕ್ಸ್) : ಕನಿಷ್ಠ ಮೂರು ವರ್ಷಗಳ ಡಿಪ್ಲೋಮಾ(ಸಿವಿಲ್ ಇಂಜಿನಿಯರಿಂಗ್)

ಸಬ್ ಇನ್ಸ್ ಪೆಕ್ಟರ್ (ಎಲೆಕ್ಟ್ರಿಕಲ್) : ಕನಿಷ್ಠ ಮೂರು ವರ್ಷಗಳ ಡಿಪ್ಲೋಮಾ (ಎಲೆಕ್ಟ್ರಿಕಲ್ ಇಂಜಿನಿಯರಿಂಗ್)

ಇನ್ಸ್ ಪೆಕ್ಟರ್ (ಆರ್ಕಿಟೆಕ್ಟ್): ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಆರ್ಕಿಟೆಕ್ಟ್ ಪದವಿ ಪಡೆದಿರಬೇಕು. ಕೌನ್ಸಿಲ್ ಆಫ್ ಆರ್ಕಿಟೆಕ್ಟ್ ಕಾಯ್ದೆ 1972 ಅಡಿ ಮಾನ್ಯತೆ, ನೋಂದಣಿಯಾಗಿರುವ ವಿದ್ಯಾಸಂಸ್ಥೆಯಾಗಿರಬೇಕು.

ವಯೋಮಿತಿ:
ಕನಿಷ್ಠ ವಯಸ್ಸು: 18 ವರ್ಷ.
ಗರಿಷ್ಠ ವಯಸ್ಸು: 23 ವರ್ಷ.
ಅರ್ಹರಿಗೆ ನಿಯಮಾವಳಿಯಂತೆ ವಯೋಮಿತಿಯಲ್ಲಿ ವಿನಾಯಿತಿ ಸಿಗಲಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗೆ 3 ವರ್ಷ, ಹಿಂದುಳಿದ ವರ್ಗ(ಕೆನೆ ಪದರ ರಹಿತ) 3 ವರ್ಷ, ದಿವ್ಯಾಂಗರಿಗೆ 10 ವರ್ಷ ಹಾಗೂ 1984ರ ಗಲಭೆ ಪೀಡಿತರು ಮತ್ತು ಮಾಜಿ ಯೋಧರಿಗೆ 5 ವರ್ಷ ವಯೋಮಿತಿಯಲ್ಲಿ ವಿನಾಯಿತಿ ಸಿಗಲಿದೆ.

ನೇಮಕಾತಿ ಪ್ರಕ್ರಿಯೆ: ದಾಖಲೆ ಪರಿಶೀಲನೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ.

ಅರ್ಜಿ ಶುಲ್ಕ:
ಸಾಮಾನ್ಯ/ಒಬಿಸಿ/ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿ: 200 ರು
ಮಹಿಳಾ/ ಎಸ್ ಸಿ/ ಎಸ್ಟಿ/ ಮಾಜಿ ಯೋಧ: ಯಾವುದೇ ಶುಲ್ಕವಿಲ್ಲ

ಅರ್ಜಿ ಶುಲ್ಕವನ್ನು ನೆಟ್ ಬ್ಯಾಂಕಿಂಗ್, ಕ್ರೆಡಿಟ್, ಡೆಬಿಟ್ ಅಥವಾ ಇ ಚಲನ್ ಮೂಲಕ ಪಾವತಿಸಬಹುದು.

ಪ್ರಮುಖ ದಿನಾಂಕ:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಆರಂಭ: 25/04/2022
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಕೊನೆ ದಿನಾಂಕ; 08/06/2022

ಅರ್ಜಿ ಸಲ್ಲಿಸುವುದು ಹೇಗೆ?:
* ಬಿಎಸ್ಎಫ್ ಗ್ರೂಪ್ ಬಿ ಇಂಜಿನಿಯರಿಂಘ್ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್ ತಾಣ (https://rectt.bsf.gov.in/)ಕ್ಕೆ ಭೇಟಿ ನೀಡಿ ಸೂಕ್ತ ಅರ್ಜಿ ನಮೂನೆ ಆಯ್ಕೆ ಮಾಡಿಕೊಳ್ಳಿ
* ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಕಚೇರಿಗೆ ಯಾವುದೇ ರೀತಿ ಪತ್ರ ಅಥವಾ ಅರ್ಜಿಯಲ್ಲಿ ಬದಲಾವಣೆಗೆ ಮನವಿಯನ್ನು ಪುರಸ್ಕರಿಸಲಾಗುವುದಿಲ್ಲ.
* ಅಭ್ಯರ್ಥಿಗಳು ತಮ್ಮ ಇಮೇಲ್ ಐಡಿ, ಮೊಬೈಲ್ ನಂಬರ್ ನೀಡಿ ನೋಂದಾಯಿಸಿಕೊಳ್ಳುವುದು ಮುಖ್ಯ. ಬಿಎಸ್ ಎಫ್ ನಿಂದ ಅಧಿಕೃತ ಸಂದೇಶಗಳು ಮೊಬೈಲ್ ಹಾಗೂ ಮೇಲ್ ಐಡಿಗೆ ಬರಲಿದೆ.
* ಕ್ರೀಡಾ ಕೋಟಾದಡಿಯಲ್ಲಿ ಅರ್ಜಿ ಸಲ್ಲಿಸಲು ಸೂಕ್ತವಾದ ದಾಖಲೆ ಒದಗಿಸಬೇಕಾಗುತ್ತದೆ.

Recommended Video

CSK ವಿರುದ್ಧ ಸೇಡು ತೀರಿಸಿಕೊಳ್ಳಲು ವಿರಾಟ್ ಹೇಗೆ ರೆಡಿಯಾಗಿದ್ದಾರೆ ಗೊತ್ತಾ? | Oneindia Kannad

ನೇಮಕಾತಿ ಕುರಿತಂತೆ ನೋಟಿಫಿಕೇಷನ್ ಇಲ್ಲಿ ಓದಿ, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ (docs.bsf.gov.in )

English summary
BSF recruitment 2022 notification has been released on official website for the recruitment of 2788 Constable (Tradesman)Vacancies at Border Security Force.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X