ಗಡಿ ಭದ್ರತಾ ಪಡೆಯಲ್ಲಿ 281 ಹುದ್ದೆಗಳಿಗೆ ಅರ್ಜಿ ಆಹ್ವಾನ
ನವದೆಹಲಿ, ಜೂನ್ 3: ಗಡಿ ಭದ್ರತಾ ಪಡೆ (ಬಿಎಸ್ಎಫ್) ತನ್ನ ಅಧಿಕೃತ ವೆಬ್ ತಾಣದಲ್ಲಿ 2022ನೇ ಸಾಲಿನ ನೇಮಕಾತಿ ಕುರಿತಂತೆ ಪ್ರಕಟಣೆ ಹೊರಡಿಸಿದೆ. ಸಬ್ ಇನ್ಸ್ ಪೆಕ್ಟರ್, ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದ್ದು, ಅರ್ಹ ಆಸಕ್ತ ಅಭ್ಯರ್ಥಿಗಳು ಜೂನ್ 28, 2022ರೊಳಗೆ ಅರ್ಜಿ ಸಲ್ಲಿಸಬಹುದು.
ಸಂಸ್ಥೆ ಹೆಸರು: Border Security Force
ಹುದ್ದೆ ಹೆಸರು: ಗ್ರೂಪ್ ಬಿ
ಒಟ್ಟು ಹುದ್ದೆ: 281
ಉದ್ಯೋಗ ಸ್ಥಳ: ಭಾರತದೆಲ್ಲೆಡೆ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಜೂನ್ 28, 2022
ಹುದ್ದೆ-ವೇತನ ವಿವರ:
ಹುದ್ದೆ: ಕಾನ್ಸ್ ಟೇಬಲ್ (ಸಿಬ್ಬಂದಿ)
ಒಟ್ಟು ಹುದ್ದೆ: 130
ವೇತನ ಶ್ರೇಣಿ: 21,700-69,1000 ರು/ ಲೆವಲ್ -3
ಹುದ್ದೆ: ಕಾನ್ಸ್ ಟೇಬಲ್ (Engine driver)
ಹುದ್ದೆ: 64
ಹುದ್ದೆ: ಸಬ್ ಇನ್ಸ್ ಪೆಕ್ಟರ್ (Workshop):
ಹುದ್ದೆ: 32
ವೇತನ ಶ್ರೇಣಿ: 35400 - 112400 ರು / ಲೆವಲ್ -6

ವಿದ್ಯಾರ್ಹತೆ
ಹುದ್ದೆ: ಸಬ್ ಇನ್ಸ್ ಪೆಕ್ಟರ್ (Engine driver)
ಹುದ್ದೆ: 06
ಹುದ್ದೆ: ಸಬ್ ಇನ್ಸ್ ಪೆಕ್ಟರ್ (ಮಾಸ್ಟರ್)
ಹುದ್ದೆ: 08
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 10ನೇ ತರಗತಿ, 12ನೇ ತರಗತಿಯಲ್ಲಿ ಪಾಸ್, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಡಿಪ್ಲೋಮಾ ಪಡೆದಿರಬೇಕು.
ಕಾನ್ಸ್ ಟೇಬಲ್ (ಸಿಬ್ಬಂದಿ): 265 HP ಬೋಟ್ ಆಪರೇಟ್ ಮಾಡುವುದು ಹಾಗೂ ಈಜಾಟ ಗೊತ್ತಿರಬೇಕು.
ಹೆಡ್ ಕಾನ್ಸ್ ಟೇಬಲ್ (ವರ್ಕ್ ಶಾಪ್): ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 10ನೇ ತರಗತಿ, 12ನೇ ತರಗತಿಯಲ್ಲಿ ಪಾಸ್, ಐಟಿಐ ಡಿಪ್ಲೋಮಾ ಮೋಟರ್ ಮೆಕ್ಯಾನಿಕ್/ ಎಲೆಕ್ಟ್ರಿಷಿಯನ್/ ಮೆಷಿನಸ್ಟ್/ ಕಾರ್ಪೆಂಟರಿ/ ಎಸಿ ಟೆಕ್ನಿಷಿಯನ್/ ಎಲೆಕ್ಟ್ರಾನಿಕ್ಸ್ ಹಾಗೂ ಪ್ಲಂಬಿಂಗ್ ಕೋರ್ಸ್

ಇಂಜಿನ್ ಡ್ರೈವರ್ ಪ್ರಮಾಣ ಪತ್ರ ಇರ್ಬೇಕು
ಹೆಡ್ ಕಾನ್ಸ್ ಟೇಬಲ್ (ಇಂಜಿನ್ ಡ್ರೈವರ್): ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 10ನೇ ತರಗತಿ, 12ನೇ ತರಗತಿಯಲ್ಲಿ ಪಾಸ್, ಇಂಜಿನ್ ಡ್ರೈವರ್ ಪ್ರಮಾಣ ಪತ್ರ.
ಹೆಡ್ ಕಾನ್ಸ್ ಟೇಬಲ್(ಮಾಸ್ಟರ್): ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಮೆಟ್ರಿಕ್ಯುಲೇಷನ್ ಅಥವಾ ತತ್ಸಮಾನ ಸೆರಾಂಗ್ ಪ್ರಮಾಣ ಪತ್ರ.
ಸಬ್ ಇನ್ಸ್ ಪೆಕ್ಟರ್(ವರ್ಕ್ ಶಾಪ್): ಮೆಕ್ಯಾನಿಕಲ್ ಇಂಜಿನಿಯರಿಂಗ್ ಅಥವಾ ಮೆಕ್ಯಾನಿಕಲ್ ಮರೇನ್ ಅಥವಾ ಆಟೋಮೊಬೈಲ್ ಇಂಜಿನಿಯರಿಂಗ್ ಕೋರ್ಸ್ ಪದವಿ
ಸಬ್ ಇನ್ಸ್ ಪೆಕ್ಟರ್ (ಇಂಜಿನ್ ಡ್ರೈವರ್): ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 10ನೇ ತರಗತಿ, 12ನೇ ತರಗತಿಯಲ್ಲಿ ಪಾಸ್, ಇಂಜಿನ್ ಡ್ರೈವರ್ ಪ್ರಮಾಣ ಪತ್ರ.
ಸಬ್ ಇನ್ಸ್ ಪೆಕ್ಟರ್ (ಮಾಸ್ಟರ್): ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 10ನೇ ತರಗತಿ, 12ನೇ ತರಗತಿಯಲ್ಲಿ ಪಾಸ್, ಎರಡನೇ ದರ್ಜೆ ಮಾಸ್ಟರ್ ಪ್ರಮಾಣ ಪತ್ರ

ವಯೋಮಿತಿ
ವಯೋಮಿತಿ:
ಕನಿಷ್ಠ ವಯಸ್ಸು: 18 ವರ್ಷ.
ಗರಿಷ್ಠ ವಯಸ್ಸು: 23 ವರ್ಷ.
ಅರ್ಹರಿಗೆ ನಿಯಮಾವಳಿಯಂತೆ ವಯೋಮಿತಿಯಲ್ಲಿ ವಿನಾಯಿತಿ ಸಿಗಲಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗೆ 3 ವರ್ಷ, ಹಿಂದುಳಿದ ವರ್ಗ(ಕೆನೆ ಪದರ ರಹಿತ) 3 ವರ್ಷ, ದಿವ್ಯಾಂಗರಿಗೆ 10 ವರ್ಷ ಹಾಗೂ 1984ರ ಗಲಭೆ ಪೀಡಿತರು ಮತ್ತು ಮಾಜಿ ಯೋಧರಿಗೆ 5 ವರ್ಷ ವಯೋಮಿತಿಯಲ್ಲಿ ವಿನಾಯಿತಿ ಸಿಗಲಿದೆ.
ನೇಮಕಾತಿ ಪ್ರಕ್ರಿಯೆ: ದಾಖಲೆ ಪರಿಶೀಲನೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ

ಅರ್ಜಿ ಶುಲ್ಕ
ಅರ್ಜಿ ಶುಲ್ಕ:
SI: ಸಾಮಾನ್ಯ/ಒಬಿಸಿ/ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿ: 200 ರು
HC & Constable: 100 ರು
ಮಹಿಳಾ/ ಎಸ್ ಸಿ/ ಎಸ್ಟಿ/ ಮಾಜಿ ಯೋಧ: ಯಾವುದೇ ಶುಲ್ಕವಿಲ್ಲ
ಅರ್ಜಿ ಶುಲ್ಕವನ್ನು ನೆಟ್ ಬ್ಯಾಂಕಿಂಗ್, ಕ್ರೆಡಿಟ್, ಡೆಬಿಟ್ ಅಥವಾ ಇ ಚಲನ್ ಮೂಲಕ ಪಾವತಿಸಬಹುದು.
ಅರ್ಜಿ ಸಲ್ಲಿಸುವುದು ಹೇಗೆ?
ಪ್ರಮುಖ ದಿನಾಂಕ:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಆರಂಭ: 30/05/2022
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಕೊನೆ ದಿನಾಂಕ; 28/06/2022

ಅರ್ಜಿ ಸಲ್ಲಿಸುವುದು ಹೇಗೆ?
* ಬಿಎಸ್ಎಫ್ ಗ್ರೂಪ್ ಬಿ ಇಂಜಿನಿಯರಿಂಘ್ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್ ತಾಣ (https://rectt.bsf.gov.in/)ಕ್ಕೆ ಭೇಟಿ ನೀಡಿ ಸೂಕ್ತ ಅರ್ಜಿ ನಮೂನೆ ಆಯ್ಕೆ ಮಾಡಿಕೊಳ್ಳಿ
* ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಕಚೇರಿಗೆ ಯಾವುದೇ ರೀತಿ ಪತ್ರ ಅಥವಾ ಅರ್ಜಿಯಲ್ಲಿ ಬದಲಾವಣೆಗೆ ಮನವಿಯನ್ನು ಪುರಸ್ಕರಿಸಲಾಗುವುದಿಲ್ಲ.
* ಅಭ್ಯರ್ಥಿಗಳು ತಮ್ಮ ಇಮೇಲ್ ಐಡಿ, ಮೊಬೈಲ್ ನಂಬರ್ ನೀಡಿ ನೋಂದಾಯಿಸಿಕೊಳ್ಳುವುದು ಮುಖ್ಯ. ಬಿಎಸ್ ಎಫ್ ನಿಂದ ಅಧಿಕೃತ ಸಂದೇಶಗಳು ಮೊಬೈಲ್ ಹಾಗೂ ಮೇಲ್ ಐಡಿಗೆ ಬರಲಿದೆ.
* ಕ್ರೀಡಾ ಕೋಟಾದಡಿಯಲ್ಲಿ ಅರ್ಜಿ ಸಲ್ಲಿಸಲು ಸೂಕ್ತವಾದ ದಾಖಲೆ ಒದಗಿಸಬೇಕಾಗುತ್ತದೆ.
ನೇಮಕಾತಿ ಕುರಿತಂತೆ ನೋಟಿಫಿಕೇಷನ್ ಇಲ್ಲಿ ಓದಿ, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ (docs.bsf.gov.in )












Click it and Unblock the Notifications