BMRCL ನಮ್ಮ ಮೆಟ್ರೋದಲ್ಲಿ ಇಂಜಿನಿಯರಿಂಗ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು, ಡಿಸೆಂಬರ್ 20: ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್ ಸಿಲ್) ನಮ್ಮ ಮೆಟ್ರೋದಲ್ಲಿ 2021ನೇ ಸಾಲಿನ ನೇಮಕಾತಿ ಮುಂದುವರೆಸಲಾಗಿದೆ. ಈ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಖಾಲಿ ಇರುವ ವಿವಿಧ ಇಂಜಿನಿಯರಿಂಗ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ, ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಜನವರಿ 17, 2022ರೊಳಗೆ ಸಲ್ಲಿಸಬಹುದು.

ಸಂಸ್ಥೆ : ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್ ಸಿಲ್).
ಹುದ್ದೆ ಹೆಸರು: ಮುಖ್ಯ ಇಂಜಿನಿಯರ್, ಸಹಾಯಕ ಮುಖ್ಯ ಇಂಜಿನಿಯರ್, ಕಾರ್ಯಕಾರಿ ಇಂಜಿನಿಯರ್, ಸಹಾಯಕ ಕಾರ್ಯಕಾರಿ ಇಂಜಿನಿಯರ್ ಹಾಗೂ ಸಹಾಯಕ ಇಂಜಿನಿಯರ್
ಒಟ್ಟು ಹುದ್ದೆ: 145 ಪ್ಲಸ್
ಉದ್ಯೋಗ ಸ್ಥಳ: ಬೆಂಗಳೂರು, ಕರ್ನಾಟಕ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಜನವರಿ 17, 2022.

ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಇ/ ಬಿ.ಟೆಕ್/ ತತ್ಸಮಾನ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

ಸಹಾಯಕ ಮುಖ್ಯ ಇಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಬಿಇ/ ಬಿ.ಟೆಕ್ ಸಿವಿಲ್ ಇಂಜಿನಿಯರ್ ಆಗಿದ್ದು, 14 ವರ್ಷಗಳ ಅನುಭವ ಹೊಂದಿರತಕ್ಕದ್ದು. ಕಾರ್ಯಕಾರಿ ಇಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸುವವರು 12 ವರ್ಷಗಳ ಅನುಭವ ಹೊಂದಿರಬೇಕು.

BMRCL Recruitment 2021 apply for Various Engineer Post

ಹುದ್ದೆ ಹೆಸರು: ಹುದ್ದೆ ಸಂಖ್ಯೆ- ಸಂಬಳ ವಿವರ
ಮುಖ್ಯ ಇಂಜಿನಿಯರ್ : 01 -1,50,000 ರು
ಡೆಪ್ಯುಟಿ ಮುಖ್ಯ ಇಂಜಿನಿಯರ್: 04- 1,25,000 ರು
ಕಾರ್ಯಕಾರಿ ಇಂಜಿನಿಯರ್: 04- 80,000 ರು
ಸಹಾಯಕ ಕಾರ್ಯಕಾರಿ ಇಂಜಿನಿಯರ್: 05- 65,000 ರು
ಸಹಾಯಕ ಇಂಜಿನಿಯರ್: 34- 50, 000 ರು
ಸೆಕ್ಷನ್ ಇಂಜಿನಿಯರ್: 46- 36,000ರು
ಸಹಾಯಕ ಕಾರ್ಯಕಾರಿ ಇಂಜಿನಿಯರ್ (ಸರ್ವೆ): 02- 65,000 ರು
ಸಹಾಯಕ ಇಂಜಿನಿಯರ್ (ಸರ್ವೆ): 06- 50, 000 ರು
ಜ್ಯೂನಿಯರ್ ಇಂಜಿನಿಯರ್: 23- 30,000ರು
ಮುಖ್ಯ ಇಂಜಿನಿಯರ್ (ಡಿಸೈನ್): 01- 1,65,000 ರು
ಹೆಚ್ಚುವರಿ ಮುಖ್ಯ ಇಂಜಿನಿಯರ್/ ಡೆಪ್ಯುಟಿ ಇಂಜಿನಿಯರ್ (ಡಿಸೈನ್): 02- 1,40,000 ರು
ಡೆಪ್ಯುಟಿ ಜನರಲ್ ಮ್ಯಾನೇಜರ್ (ಆರ್ಕಿಟೆಕ್ಟ್): 01- 1,40,000 ರು
ಕಾರ್ಯಕಾರಿ ಇಂಜಿನಿಯರ್ ಡಿಸೈನ್ (Viaduct & Elevated Stations): 02
ಮ್ಯಾನೇಜರ್ (ಆರ್ಕಿಟೆಕ್ಟ್): 01
ಡೆಪ್ಯುಟಿ ಮ್ಯಾನೇಜರ್ (ಆರ್ಕಿಟೆಕ್ಟ್): 02
ಸಹಾಯಕ ಕಾರ್ಯಕಾರಿ ಇಂಜಿನಿಯರ್, ಡಿಸೈನ್ (Viaduct & Elevated Stations): 02
ಸಹಾಯಕ ಇಂಜಿನಿಯರ್ -ಡಿಸೈನ್ (Viaduct & Elevated Stations): 03
ಸೆಕ್ಷನ್ ಇಂಜಿನಿಯರ್ (ಆರ್ಕಿಟೆಕ್ಟ್): 02
ಸೆಕ್ಷನ್ ಇಂಜಿನಿಯರ್ ಡಿಸೈನ್: 03

ನೇಮಕಾತಿ ಪ್ರಕ್ರಿಯೆ: ವೈಯಕ್ತಿಕ ಸಂದರ್ಶನ ಹಾಗೂ ಪರೀಕ್ಷೆ. ಆಯ್ಕೆಯಾದವರಿಗೆ ಆರೋಗ್ಯ ಭತ್ಯೆ, ಆರೋಗ್ಯ ವಿಮೆ, ಅಪಘಾತ ವಿಮೆ, ರಾಷ್ಟ್ರೀಯ ಪಿಂಚಣಿ ಯೋಜನೆ ಅನ್ವಯ ಸೂಕ್ತ ಭತ್ಯೆಗಳು ಲಭ್ಯವಾಗಲಿವೆ.

ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ, ಆಸಕ್ತ ಅಭ್ಯರ್ಥಿಗಳು ತಮ್ಮ ತುಂಬಿದ ಅರ್ಜಿಗಳನ್ನು ಸೂಕ್ತ ದಾಖಲೆಗಳೊಂದಿಗೆ ಜನವರಿ 17, 2021ರ ಸಂಜೆ 4ರೊಳಗೆ ಈ ಕೆಳಕಂಡ ವಿಳಾಸಕ್ಕೆ ಖುದ್ದು ಅಥವಾ ಪೋಸ್ಟ್ ಮೂಲಕ ತಲುಪಿಸಬಹುದು.

ವಿಳಾಸ:
ಪ್ರಧಾನ ವ್ಯವಸ್ಥಾಪಕ (HR)
ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್(BMRCL)
ಮೂರನೇ ಮಹಡಿ, ಬಿಎಂಟಿಸಿ ಕಟ್ಟಡ, ಕೆ.ಎಚ್ ರಸ್ತೆ
ಶಾಂತಿನಗರ, ಬೆಂಗಳೂರು- 560 027.

ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 19/12/2021
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 17/01/2022

Recommended Video

      ಆಫ್ರಿಕಾ ನೆಲದಲ್ಲಿ ಯಾರೂ ಮಾಡದ ರೆಕಾರ್ಡ್ ಬ್ರೇಕ್ ಮಾಡ್ತಾರಾ ರಿಷಬ್ ಪಂತ್ | Oneindia Kannada

      ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಕ್ಲಿಕ್ ಮಾಡಿ (bmrc.co.in)

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+