BHEL Recruitment: ಬರೋಬ್ಬರಿ 515 ಹುದ್ದೆಗಳ ನೇಮಕಾತಿ, ಜುಲೈ 16ರಿಂದ ಅರ್ಜಿ ಸಲ್ಲಿಕೆ ಆರಂಭ, ವಿವರ
BHEL Recruitment 2025: ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ನಲ್ಲಿ ಉದ್ಯೋಗ ಹುಡುಕುತ್ತಿರುವ ಅರ್ಹ ಅಭ್ಯರ್ಥಿಗಳಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಬೃಹತ್ ಪ್ರಮಾಣದಲ್ಲಿ ನೇಮಕಾತಿ ಮಾಡಿಕೊಳ್ಳಲು ಸಂಸ್ಥೆ ಮುಂದಾಗಿದೆ. ತಾಂತ್ರಿಕವಾಗಿ ಪರಿಣಿತಿ ಇರುವ ಅರ್ಹ ಅಭ್ಯರ್ಥಿಗಳು ಜುಲೈ 16 ರಿಂದ ಅರ್ಜಿಗಳನ್ನು ಸಲ್ಲಿಸಬಹುದು. ಈ ಮೂಲಕ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲೇ ಉದ್ಯೋಗ ಪಡೆಯುಬಹುದು ಎಂದು ಅಧಿಸೂಚನೆ ಮಾಹಿತಿ ನೀಡಿದೆ.
ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ತನ್ನಲ್ಲಿ ಖಾಲಿ ಇರುವ ಬರೋಬ್ಬರಿ 515 ತಾಂತ್ರಿಕ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಸದ್ಯ ಅಧಿಸೂಚನೆ ಹೊರಡಿಸಿದ್ದು, ಆರು ದಿನಗಳಲ್ಲಿ ಅರ್ಜಿ ಸಲ್ಲಿಕೆ ಶುರುವಾಗಲಿದೆ. ಟರ್ನರ್, ಮೆಕ್ಯಾನಿಸ್ಟ್, ಫಿಟ್ಟರ್, ವೆಲ್ಡರ್, ಎಲೆಕ್ಟ್ರಿಷಿಯನ್, ಫೌಂಡ್ರಿ ಮ್ಯಾನ್ ಹಾಗೂ ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ ಪೋಸ್ಟ್‌ಗಳು ಖಾಲಿ ಇವೆ. ಅವುಗಳ ಭರ್ತಿಗೆ ಸಂಸ್ಥೆಯು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ನೇಮಕಾತಿಗೆಯಲ್ಲಿ ಪಾಲ್ಗೊಳ್ಳುವವರು ಮೊದಲು ಆನ್‌ಲೈನ್ ಮೂಲಕ (bhel.com) ಅರ್ಜಿ ಸಲ್ಲಿಸಬೇಕು. ವಿದ್ಯಾರ್ಹತೆ, ವಯೋಮಿತಿ ಇತರ ಮಾಹಿತಿ ಇಲ್ಲಿದೆ.
ನೇಮಕಾತಿ ಪೂರ್ಣ ಮಾಹಿತಿ
ನೇಮಕಾತಿ ಸಂಸ್ಥೆ: BHEL
ಹುದ್ದೆಗಳು ಎಷ್ಟು: 515
ಯಾವ ಹುದ್ದೆಗಳು: ತಾಂತ್ರಿಕ
ಅರ್ಜಿ ಸಲ್ಲಿಕೆ ಆರಂಭ: ಜುಲೈ
ಕನಿಷ್ಠ ವಿದ್ಯಾರ್ಹತೆ: SSLC
ಗರಿಷ್ಠ ವಯಸ್ಸು: 27
ಶೈಕ್ಷಣಿಕ ಅರ್ಹತೆ
ಬಿಎಚ್‌ಇಎಲ್ ನೇಮಕಾತಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಅವರು ಮಾನ್ಯತೆ ಪಡೆದು ಶೈಕ್ಷಣಿಕ ಸಂಸ್ಥೆ ಇಲ್ಲವೇ ಮಂಡಳಿಯಲ್ಲಿ ಕಲಿತು ಪಾಸಾದವರಾಗಿರಬೇಕು. ಟ್ರೇಡ್‌ನಲ್ಲಿ ಐಟಿಐ, ರಾಷ್ಟ್ರೀಯ ವ್ಯಾಪಾರ ಪ್ರಮಾಣಪತ್ರ (NTC) ಮತ್ತು ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಪ್ರಮಾಣಪತ್ರ (NAC) ಹೊಂದಿರಬೇಕು. ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು ಕನಿಷ್ಠ 60% ಮತ್ತು ಎಸ್‌ಸಿ ಮತ್ತು ಎಸ್‌ಟಿ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 55 % ಅಂಕ ಪಡೆದಿರುವುದು ಕಡ್ಡಾಯ ಎಂದು ಅಧಿಸೂಚನೆ ಮಾಹಿತಿ ನೀಡಿದೆ.
ಇನ್ನು ವಯೋಮಿತಿ ನೋಡುವುದಾದರೆ ಸಾಮಾನ್ಯ ವರ್ಗದವರಿಗೆ ಗರಿಷ್ಠ 27 ವರ್ಷ, ಒಬಿಸಿಗೆ 3 ವರ್ಷಗಳು, ಎಸ್‌ಸಿ/ಎಸ್‌ಟಿಗೆ 5 ವರ್ಷಗಳು ಹಾಗೂ ದಿವ್ಯಾಂಗ ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆ ಸಿಗಲಿದೆ. ಆಸಕ್ತ ಅಭ್ಯರ್ಥಿಗಳು ಸೂಕ್ತ ದಾಖಲೆಗಳ ಸಮೇತರಾಗಿ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಕೆ ಹೇಗೆ?
ಆಸಕ್ತ ಅರ್ಹ ಅಭ್ಯರ್ಥಿಗಳು ಮೊದಲು BHEL ವೆಬ್‌ಸೈಟ್‌ಗೆ https://bhel.com/ ಭೇಟಿ ನೀಡಬೇಕು. ಪರದೆ ಮೇಲೆ ಕಾಣುವ 'ಅಪ್ರೆಂಟಿಸ್ ನೇಮಕಾತಿ 2025' ಲಿಂಕ್ ಆಯ್ಕೆ ಮಾಡಿಕೊಂಡು ಹೊಸದಾಗಿ ರಜಿಸ್ಟರ್ ಮಾಡಿಕೊಳ್ಳಬೇಕು. ಅಗತ್ಯ ಮಾಹಿತಿ ನಮೂದಿಸಿ ಲಾಗಿನ್ ಆಗಬೇಕು. ಅಲ್ಲಿ ಕೇಳಲಾಗುವ ಅಗತ್ಯ ವಿವರ ಹಾಕಿ, ದಾಖಲೆ ಅಪ್‌ಲೋಡ್ ಮಾಡಬೇಕು. ಭವಿಷ್ಯದ ಉಪಯೋಗಕ್ಕೆ ಅರ್ಜಿಯ ಪ್ರತಿ ತೆಗೆದುಕೊಳ್ಳಬೇಕು.
ಸರ್ಕಾರಿ ಸಂಸ್ಥೆಯಲ್ಲಿ ಉದ್ಯೋಗ ಬಯಸುವ ತಾಂತ್ರಿಕ ಪರಿಣಿತರಿಗೆ ಇಲ್ಲೊಂದು ಉತ್ತಮ ಅವಕಾಶ ಇದೆ. ಇದನ್ನು ಸದುಪಯೋಗ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಒಮ್ಮೆ ಅಧಿಸೂಚನೆ ಓದಿಕೊಳ್ಳಿ.












Click it and Unblock the Notifications