ಸೈಬರ್ ತಜ್ಞರ ನೇಮಕ: ಬೆಂಗಳೂರು ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಅವಕಾಶ

ಬೆಂಗಳೂರು, ಫೆ. 02: ಸೈಬರ್ ಎಕ್ಸಪರ್ಟ್‌ಗಳಿಗೆ ಸಂತಸದ ಸುದ್ದಿ. ಸೈಬರ್ ಸೆಕ್ಯುರಿಟಿ ಕಲಿತವರಿಗೆ ಐಪಿಎಸ್ ಅಧಿಕಾರಿಗಳಿಗೆ ಕೊಡುವ ವೇತನ ಆಫರ್ ಕೊಟ್ಟು ವಿವಿಧ ಹುದ್ದೆಗಳ ನೇಮಕಾತಿಗೆ ಬೆಂಗಳೂರು ಪೊಲೀಸರು ನಗರ ಪೊಲೀಸರು ಅರ್ಜಿ ಆಹ್ವಾನಿಸಿದ್ದಾರೆ.

ಬೆಂಗಳೂರು ಭಾರತದ ಐಟಿ ಹಬ್. ಕಂಪ್ಯೂಟರ್ ಕ್ಷೇತ್ರದಲ್ಲಿ ಹಾಗೂ ಸ್ಟಾರ್ಟಪ್ ಕ್ಷೇತ್ರದಲ್ಲಿ ದೇಶಕ್ಕೆ ಅಗ್ರಗಣ್ಯ ನಗರವಾಗಿ ಹೊರ ಹೊಮ್ಮಿದೆ. ತಂತ್ರಜ್ಞಾನ ಬೆಳೆದಂತೆ ಸೈಬರ್ ಲೋಕದಲ್ಲಿ ಸರಣಿ ಅಪರಾಧ ಕೃತ್ಯಗಳು ವರದಿಯಾಗುತ್ತಿವೆ. ಉಡುಗೊರೆ ರೂಪದಲ್ಲಿ ಹಣ ಕದಿಯುವುದು, ಮದುವೆ ಸಂಬಂಧ ಹೆಸರಿನಲ್ಲಿ ದೋಖಾ, ಕ್ರೆಡಿಟ್ ಕಾರ್ಡ್ ಒಟಿಪಿ ಪಡೆದು ದೋಖಾ ಮಾಡುವ ಸೈಬರ್ ಅಪರಾಧ ಕೃತ್ಯಗಳಿಗೆ ಬೆಂಗಳೂರು ನಗರ ತತ್ತರಿಸಿದೆ. ಹೀಗಾಗಿ ಸೈಬರ್ ಅಪರಾಧ ಕೃತ್ಯಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಬೆಂಗಳೂರು ಪೊಲೀಸರು ಅನೇಕ ಜಾಗೃತ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಆದರೆ ಅದ್ಯಾವುದು ಹೇಳಿಕೊಳ್ಳುವ ಮಟ್ಟಿಗೆ ಯಶಸ್ಸು ನೀಡಿಲ್ಲ. ಜನ ಪದೇ ಪದೇ ಸೈಬರ್ ವಂಚನೆಗೆ ಒಳಗಾಗುತ್ತಿದ್ದಾರೆ. ಹೀಗಾಗಿ ಸೈಬರ್ ಅಪರಾಧ ಕೃತ್ಯಗಳನ್ನು ನಿಯಂತ್ರಿಸಲು ಬೆಂಗಳೂರು ಪೊಲೀಸರು ಸೈಬರ್ ತಜ್ಞರ ಮೊರೆ ಹೋಗಿದೆ.

ಸೈಬರ್ ಸೆಕ್ಯುರಿಟಿ ಅನಾಲಿಸ್ಟ್ ವೇತನ ವಿವರ:

ಬೆಂಗಳೂರು ಸೈಬರ್ ಎಕನಾಮಿಕ್ಸ್ ಅಂಡ್ ನಾರ್ಕೋಟಿಕ್ಸ್ ಕ್ರೈಂ (ಸಿಇಎನ್) ವಿಭಾಗದಲ್ಲಿ ಕೆಲಸ ಮಾಡಲು ಅರ್ಹ ಸೈಬರ್ ತಜ್ಞರಿಂದ ಅರ್ಜಿ ಆಹ್ವಾನಿಸಿದೆ. ಸೈಬರ್ ಸೆಕ್ಯುರಿಟಿ ಅನಾಲಿಸ್ಟ್ ಮತ್ತು ಡಿಜಿಟಲ್ ಫೋರೇನಿಕ್ಸ್ ಅನಲಿಸ್ಟ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ. ಅರ್ಹರು ಫೆ. 28 ರೊಳಗೆ ಅರ್ಜಿ ಸಲ್ಲಿಸಬೇಕು. ಮಾಸಿಕ 75 ಸಾವಿರ ರೂಪಾಯಿ ವೇತನ ನಿಗದಿ ಮಾಡಿದೆ. ಐಪಿಎಸ್ ಸೇವೆಗೆ ಸೇರುವ ಆರಂಭದಲ್ಲಿ ಸಿಗುವ ಸಮಾನ ವೇತನ ನಿಗದಿ ಮಾಡಿರುವುದು ವಿಶೇಷ.

Bengaluru City Police Recruitment 2022: Apply For 16 Cyber Security Analyst jobs

ಸೈಬರ್ ಎಕ್ಸಪರ್ಟ್ ಅನಾಲಿಸ್ಟ್ ಅರ್ಹತೆಗಳು:

ಬೆಂಗಳೂರು ನಗರದಲ್ಲಿ ಒಟ್ಟು ಎಂಟು ಸೈಬರ್ ಪೊಲೀಸ್ ಠಾಣೆಗಳಲ್ಲಿ ಸೈಬರ್ ಸೆಕ್ಯುರಿಟಿ ಅನಾಲಿಸ್ಟ್ ಮತ್ತು ಡಿಜಿಟಲ್ ಫೆರೋನಿಕ್ಸ್ ಎಕ್ಸಪರ್ಟ್‌ಗಳು ಕೆಲಸ ಮಾಡಬೇಕಾಗುತ್ತದೆ. ಈ ಎರಡು ವಿಭಾಗದ 16 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕಂಪ್ಯೂಟರ್ ಸೈನ್ಸ್, ಇನ್‌ಫರ್ಮೇಷನ್ ಟೆಕ್ನಾಲಜಿ ಸೇರಿದಂತೆ ಸೈಬರ್ ಕ್ಷೇತ್ರದಲ್ಲಿ ನಿಪುಣತೆ ಸಾಧಿಸಿದವರು ಅರ್ಜಿ ಸಲ್ಲಿಸಬಹುದು. ಪದವಿಯಲ್ಲಿ ಕನಿಷ್ಠ 60 ರಷ್ಟು ಅಂಕ ಗಳಿಸಿರಬೇಕು. ಜತೆಗೆ ಸೈಬರ್ ಸೆಕ್ಯುರಿಟಿ ಮತ್ತು ಸೈಬರ್ ಫೆರೋನಿಕ್ಸ್ ಸೈನ್ಸ್‌ನಲ್ಲಿ ನಿಪುಣತೆ ಸಾಧಿಸಿರುವ ಜತೆಗೆ ಎರಡು ವರ್ಷ ಕೆಲಸ ಮಾಡಿರುವ ಅನುಭವ ಇರಬೇಕು ಎಂದು ಸೂಚಿಸಲಾಗಿದೆ.

Bengaluru City Police Recruitment 2022: Apply For 16 Cyber Security Analyst jobs

ಆಯ್ಕೆಯಾದವರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಬೇಕು. ಅವರ ಸೇವೆ ಉತ್ತಮವಾಗಿದ್ದರೆ ಅರ್ಹರ ಗುತ್ತಿಗೆ ಅವಧಿಯನ್ನು ವಿಸ್ತರಣೆ ಮಾಡಲಾಗುತ್ತದೆ. ಸೈಬರ್ ಸೆಕ್ಯುರಿಟಿ ಅನಾಲಿಸ್ಟ್ ಮತ್ತು ಡಿಜಿಟಲ್ ಫೆರೋನಿಕ್ಸ್‌ ಅನಾಲಿಸ್ಟ್ ಗಳನ್ನು ನೇಮಿಸಿಕೊಳ್ಳಲು ಮುಂದಾಗುವ ಮೂಲಕ ಬೆಂಗಳೂರು ಪೊಲೀಸರು ಸೈಬರ್ ಅಪರಾಧಗಳಿಗೆ ತಡೆ ಹಾಕಲು ಮುಂದಾಗಿದ್ದಾರೆ. ಹೆಚ್ಚಿನ ಮಾಹಿತಿಗೆ ಬೆಂಗಳೂರು ಪೊಲೀಸ್ ಕಮೀಷನರ್ ಕಚೇರಿ ಸೈಬರ್ ಎಕನಾಮಿಕ್ಸ್ ಅಂಡ ನಾರ್ಕೊಟಿಕ್ಸ್ ವಿಂಗ್ ಸಂಪರ್ಕಿಸಲು ಸೂಚಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+