Infosys: ವಾರ್ಷಿಕ ವೇತನ ಹೆಚ್ಚಳ ಮುಂದೂಡಿದ ಇನ್ಫೋಸಿಸ್, ನೌಕರರಿಗೆ ಶಾಕ್..

ಬೆಂಗಳೂರು, ಜನವರಿ 06: ದೇಶದ ಎರಡನೇ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಸೇವಾ ಸಂಸ್ಥೆಯಾದ ಇನ್ಫೋಸಿಸ್ ಕಂಪನಿಯು ತನ್ನ ಉದ್ಯೋಗಿಗಳಿಗೆ ಶಾಕ್ ನೀಡಿದೆ. ಹೊಸ ವರ್ಷ ಸ್ವಾಗತಿಸಿದ ಇನ್ಫೋಸಿಸ್ ಕಂಪನಿ ನೌಕರರು, ಈ ಬಾರಿ ತಮಗೆ ಸಂಬಳ ಹೆಚ್ಚಳವಾಗಲಿದೆ ಎಂಬ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಈ ವರ್ಷದ ಮೊದಲ ತ್ರೈಮಾಸಿಕ ಅಂದರೆ ಏಪ್ರಿಲ್ ಹೊತ್ತಿಗೆ ವೇತನ ಹೆಚ್ಚಳ ಆಗುವುದಿಲ್ಲ ಎಂದು ತಿಳಿಸಿದೆ.

ಬೆಂಗಳೂರು ಮೂಲದ ಇನ್ಫೋಸಿಸ್ ಕಂಪನಿಯು 2023ರ ನವೆಂಬರ್ ತಿಂಗಳಲ್ಲಿ ನೌಕರರ ವೇತನ ಹೆಚ್ಚಿಸಿತ್ತು. ಅದಾದ ಬಳಿಕ ಇಲ್ಲಿಯವರೆಗೂ ವೇತನ ಏರಿಕೆ ಮಾಡಿರಲಿಲ್ಲ. ಹೀಗಾಗಿ ಈವರ್ಷದ ಆರಂಭದಲ್ಲಿ ಇಲ್ಲವೇ ಏಪ್ರಿಲ್‌ನಲ್ಲಿ ವಾರ್ಷಿಕ ವೇತನದ ಹೆಚ್ಚಳ ಕುರಿತು ನಿರೀಕ್ಷೆ ಇಟ್ಟುಕೊಂಡವರಿಗೆ ಕಂಪನಿ ಶಾಕ್ ನೀಡಿದೆ.

Bengaluru-based Tech Company Infosys Postponed Employees Annual Salary Hike to Q4 of 2025

ಪ್ರಸಕ್ತ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕಕ್ಕೆ (Q4 FY 25) ವೇತನ ಹೆಚ್ಚಳ ಮಾಡಲಾಗುವುದು ಎಂದು ಇನ್ಫೋಸಿಸ್ ಕಂಪನಿ ತಿಳಿಸಿದೆ ಎಂದು 'ಮನಿ ಕಂಟ್ರೋಲ್' ವರದಿ ಮಾಡಿದೆ.

ಮುಂದೂಡಿಕೆಗೆ ಕಾರಣ ತಿಳಿಸಿರುವ ಕಂಪನಿಯು, ಜಾಗತಿಕ ಬೇಡಿಕೆ, ಐಟಿ ಸೇವೆಗಳಲ್ಲಿ ಅನಿಶ್ಚಿತತೆ, ವಿಳಂಬ ಯೋಜನೆಗಳು, ಆರ್ಥಿಕ ಅನಿಶ್ಚಿತತೆಯ ಸೇರಿದಂತೆ ಕೆಲವು ಕಾರಣದಿಂದಾಗಿ ಐಟಿ ಕಂಪನಿಗಳು ಒತ್ತಡದಲ್ಲಿವೆ. ಇನ್ಫೋಸಿಸ್ ಕಂಪನಿಗಳ ಪ್ರತಿಸ್ಪರ್ಧಿ ಟೆಕ್ ಕಂಪನಿಗಳಾದ HCLTech, LTIMindtree ಹಾಗೂ ಎಲ್‌ ಆಂಡ್ ಟಿ ಕಂಪನಿಗಳು ನಿರ್ವಹಣೆ ವೆಚ್ಚ ನಿಭಾಯಿಸಲು, ಲಾಭದ ಹಾದಿ ಹಿಡಿಯುವ ಉದ್ದೇಶದಿಂದ ಎರಡನೇ ತ್ರೈಮಾಸಿಕದಲ್ಲಿ ಮಾಡುತ್ತಿದ್ದ ವಾರ್ಷಿಕ ಹೆಚ್ಚಳವನ್ನು ಮಾಡದಿರಲು ತೀರ್ಮಾನಿಸಿವೆ.

ಸದ್ಯದ ಪರಿಸ್ಥಿತಿಯಿಂದಾಗಿ ಇದೇ ವರ್ಷ ನಾಲ್ಕನೇ ತ್ರೈಮಾಸಿಕದಲ್ಲಿ ಅಂದರೆ ಅಕ್ಟೋಬರ್ 17ರಿಂದ ಕ್ರಮೇಣ ವೇತನ ಹೆಚ್ಚಳದ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗುತ್ತದೆ. ಎಲ್ಲರಿಗೂ ವೇತನ ಹೆಚ್ಚಳ ಸಿಗುವುದಿಲ್ಲ. ಜನವರಿಯಲ್ಲಿ (2026) ಕೆಲವರಿಗೆ ವೇತನ ಹೆಚ್ಚಳ ಸಿಗಲಿದೆ. ಜನವರಿಯಲ್ಲಿ ವೇತನ ಹೆಚ್ಚಳ ಪಡೆಯದವರಿಗೆ ಏಪ್ರಿಲ್‌ನಲ್ಲಿ ವೇತನ ಹೆಚ್ಚಳ ಮಾಡಲಾಗುವುದು ಎಂದು ಕಂಪಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದೆ ಎಂದು 'ಮನಿ ಕಂಟ್ರೋಲ್' ತಿಳಿಸಿದೆ.

ಇನ್ಫೋಸಿಸ್‌ನ ನಿವ್ವಳ ಲಾಭ ಒಂದು ತ್ರೈಮಾಸಿಕದಿಂದ ಮತ್ತೊಂದು ತ್ರೈಮಾಸಿಕಕ್ಕೆ ಶೇಕಡಾ 2.2 ರಷ್ಟು ಏರಿಕೆ (6,506 ಕೋಟಿ ರೂ.) ಆಗಿದೆ. ಕಂಪನಿಯು ವೆಚ್ಚದ ನಿರ್ವಹಣೆಗೆ ಕೆಲವು ಉಪಕ್ರಮಗಳನ್ನು ಅಳವಡಿಕೆ ಮಾಡಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+