ಬೆಳಗಾವಿ ಜಿಲ್ಲಾ ಕೋರ್ಟ್‌ ನೇಮಕಾತಿ, ವಿವಿಧ ಹುದ್ದೆಗೆ ಅರ್ಜಿ ಹಾಕಿ

ಬೆಂಗಳೂರು, ಫೆಬ್ರವರಿ 11 : ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬೆಳಗಾವಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಫೆ.28, 2019 ಕೊನೆಯ ದಿನವಾಗಿದೆ.

ಶೀಘ್ರಲಿಪಿಗಾರ, ಬೆರಳಚ್ಚುಗಾರ, ಬೆರಳಚ್ಚು ನಕಲುಗಾರ ಮತ್ತು ಸಿಪಾಯಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕು ಎಂದು ನೇಮಕಾತಿ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು 28/2/2019ರ ರಾತ್ರಿ 11.59 ಕೊನೆಯ ದಿನವಾಗಿದೆ. ಅರ್ಜಿ ಶುಲ್ಕವನ್ನು ಚಲನ್ ಮೂಲಕ ಭರ್ತಿ ಮಾಡಲು 5/3/2019 ಕಡೆಯ ದಿನವಾಗಿದೆ. ಎಸ್‌ಬಿಐ ಶಾಖೆಯ ವ್ಯವಹಾರದ ವೇಳೆಯಲ್ಲಿ ಪಾವತಿಸತಕ್ಕದ್ದು ಅಥವ ಆನ್‌ಲೈನ್ ಮೂಲಕ ಪಾವತಿಸತಕ್ಕದ್ದು.

ಆಯ್ಕೆಯಾದ ಅಭ್ಯರ್ಥಿಗಳನ್ನು ನೇಮಕಾತಿ ನಿಯಮದಂತೆ ಎರಡು ವರ್ಷಗಳ ಕಾಲ ಪರಿವೀಕ್ಷಣಾ ಅವಧಿಯಲ್ಲಿಡಲಾಗುತ್ತದೆ. ಶೀಘ್ರಲಿಪಿಗಾರ, ಬೆರಳಚ್ಚುಗಾರ ಹಾಗೂ ಬೆರಳಚ್ಚು ನಕಲುಗಾರರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಆಯ್ಕೆಯಾದ ಮೂರು ತಿಂಗಳ ಒಳಗೆ ಸರ್ಕಾರವು ಅನುಮೋದಿಸಿದ ಏಜೆನ್ಸಿಯಲ್ಲಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಶೇ 60 ಅಂಕಗಳಿಗೆ ಕಡಿಮೆ ಇಲ್ಲದಂತೆ ಪಡೆದು ಪಾಸು ಮಾಡತಕ್ಕದ್ದು.....

ನೇಮಕಾತಿ ಆದೇಶಕ್ಕಾಗಿ ಕ್ಲಿಕ್ ಮಾಡಿ

ಹುದ್ದೆಗಳ ಸಂಖ್ಯೆ

ಹುದ್ದೆಗಳ ಸಂಖ್ಯೆ

* ಶೀಘ್ರಲಿಪಿಗಾರರು 20
* ಬೆರಳಚ್ಚುಗಾರರು 13
* ಬೆರಳಚ್ಚು-ನಕಲುಗಾರರು 15
* ಸಿಪಾಯಿ (Peon) 36

ವಯೋಮಿತಿ ವಿವರ

ವಯೋಮಿತಿ ವಿವರ

ಅರ್ಜಿಗಳನ್ನು ಸಲ್ಲಿಸಲು 28/2/2019ರಂದು 18 ವರ್ಷ ಆಗಿರಬೇಕು. 28/2/2019ಕ್ಕೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗಕ್ಕೆ 35 ವರ್ಷ. ಪ್ರವರ್ಗ 2ಎ, 2ಬಿ, 3ಎ, 3ಬಿ ವರ್ಗಕ್ಕೆ 38 ವರ್ಷಗಳು. ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡ, ಪ್ರವರ್ಗ-1ರ ಅಭ್ಯರ್ಥಿಗಳಿಗೆ 40 ವರ್ಷ.

ವೇತನ ಶ್ರೇಣಿ

ವೇತನ ಶ್ರೇಣಿ

* ಶೀಘ್ರಲಿಪಿಗಾರರು 27650-52650 ರೂ. ಪ್ರತಿ ತಿಂಗಳು
* ಬೆರಳಚ್ಚುಗಾರರು 21400-42000 ರೂ. ಪ್ರತಿ ತಿಂಗಳು
* ಬೆರಳಚ್ಚು-ನಕಲುಗಾರರು 21400-42000 ರೂ. ಪ್ರತಿ ತಿಂಗಳು
* ಸಿಪಾಯಿ (Peon) - 17000-28950 ಪ್ರತಿ ತಿಂಗಳು.

ಅರ್ಜಿ ಶುಲ್ಕದ ವಿವರ

ಅರ್ಜಿ ಶುಲ್ಕದ ವಿವರ

ಸಾಮಾನ್ಯ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಶೀಘ್ರಲಿಪಿಗಾರ ಹುದ್ದೆಗೆ 250 ರೂ, ಬೆರಳಚ್ಚುಗಾರ ಹುದ್ದೆಗೆ 200 ರೂ., ಬೆರಳಚ್ಚು-ನಕಲುಗಾರರು ಹುದ್ದೆಗೆ 200 ರೂ., ಸಿಪಾಯಿ ಹುದ್ದೆಗೆ 100 ರೂ. ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ.

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ -1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+