BEL Recruitment: ಬೆಂಗಳೂರಲ್ಲಿ ಸರ್ಕಾರಿ ಉದ್ಯೋಗ, ಆ.13ಕ್ಕೆ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಿ
ಬೆಂಗಳೂರು, ಆಗಸ್ಟ್ 09: ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲೊಂದು ಖುಷಿ ಸುದ್ದಿ ಇದೆ. ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL Recruitment 2025) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹರನ್ನು ಆಹ್ವಾನಿಸಿದೆ. ಯಾರೆಲ್ಲ ಕರ್ನಾಟಕ ರಾಜಧಾನಿಯಲ್ಲಿ ಹುದ್ದೆ ಬಯಸಿದ್ದೀರೋ ಅವರೆಲ್ಲ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳುವಂತೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಬಿಇಎಲ್ ಅಧಿಸೂಚನೆ ಪ್ರಕಾರ, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL Job interview) ನಲ್ಲಿ ಕೆಲವು ಹುದ್ದೆಗಳು ಖಾಲಿ ಇವೆ. ಅದಕ್ಕಾಗಿ ಅರ್ಹ ಅಭ್ಯರ್ಥಿಗಳು ಆಗಸ್ಟ್ 13 ರಂದು ಬೆಳಗ್ಗೆ 10 ಗಂಟೆಗೆ ನಡೆಯುವ ವಾಕ್-ಇನ್-ಇಂಟರ್‌ವ್ಯೂವ್‌ನಲ್ಲಿ ಪಾಲ್ಗೊಳ್ಳಬಹುದು. ನೇಮಕಾತಿ ವಿವಿರ, ಮಾಸಿಕ ವೇತನ, ವಿದ್ಯಾರ್ಹತೆ ಇತರ ಮಾಹಿತಿ ಇಲ್ಲಿದೆ.

ನೇಮಕಾತಿ ಪೂರ್ಣ ವಿವರ
ನೇಮಕಾತಿ ಸಂಸ್ಥೆ ಹೆಸರು: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL)
ಉದ್ಯೋಗ ಸ್ಥಳ: ಬೆಂಗಳೂರು
ಸ್ಟೈಫಂಡ್: ಮಾಸಿಕ 12,500ರೂಪಾಯಿ
ಸಂದರ್ಶನ ಸ್ಥಳ: ಬೆಂಗಳೂರು ಸಂಸ್ಥೆ ಕಚೇರಿ
ಸಂದರ್ಶನ ದಿನಾಂಕ: ಆಗಸ್ಟ್ 13 ಬೆಳಗ್ಗೆ 10.00
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ
ಗರಿಷ್ಠ ವಯಸ್ಸು:25
ವಿದ್ಯಾರ್ಹತೆ ಏನಿರಬೇಕು?
ಬಿಇಎಲ್ ಅಧಿಸೂಚನೆಯಲ್ಲಿ ತಿಳಿಸಿರುವಂತೆ, ಹುದ್ದೆ ಪಡೆಯಬೇಕಾದ ಅಭ್ಯರ್ಥಿಗಳು ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆ ಇಲ್ಲವೇ ವಿಶ್ವವಿದ್ಯಾಲಯಗಳಲ್ಲಿ ಬಿ.ಕಾಂ, ಬಿಬಿಎ, ಪದವಿ ಪೂರ್ಣಗೊಳಿಸಿರಬೇಕು. ಸಂದರ್ಶನ ವೇಳೆ ಅಗತ್ಯ ದಾಖಲಾತಿ ತರಬೇಕು.
ವಯಸ್ಸಿನ ಮಿತಿ
ಸಂದರ್ಶನದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಗರಿಷ್ಠ 25 ವರ್ಷ ವಯಸ್ಸಿನವರಾಗಿರಬೇಕು. ಜಾರಿ ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ 03 ವರ್ಷ (ಒಬಿಸಿ ಅಭ್ಯರ್ಥಿಗಳಿಗೆ), 05 ವರ್ಷ (SC/ST ಅಭ್ಯರ್ಥಿಗಳಿಗೆ ಮತ್ತು 10 ವರ್ಷ (ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ) ಸಡಿಲಿಡಿಕೆ ಸಿಗಲಿದೆ.
ಸಂದರ್ಶನ -ಅಭ್ಯರ್ಥಿಗಳ ಬಗ್ಗೆ...
ಸಂದರ್ಶನಕ್ಕೆ ಬರುವ ಆಸಕ್ತ ಅಭ್ಯರ್ಥಿಗಳು ಅಂದು ಅಗತ್ಯ ದಾಖಲೆಗಳ ಸಹಿತ ಬರಬೇಕು. ನಿಗದಿತ ಸ್ಥಳ ಹಾಗೂ ನಿಗದಿತ ಸಮಯಕ್ಕೆ 'ಸೆಂಟರ್ ಫಾರ್ ಲರ್ನಿಂಗ್ ಆಂಡ್ ಡೆವಲಪ್‌ಮೆಂಟ್ (CLD), ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಜಾಲಹಳ್ಳಿ ಪೋಸ್ಟ್, ಬೆಂಗಳೂರು-560013'' ಇಲ್ಲಿ ನಡೆಯಲಿರುವ ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಒಮ್ಮೆ ಅಧಿಸೂಚನೆ ಓದಿಕೊಂಡು ಸಂದರ್ಶನಕ್ಕೆ ಬಂದರೆ ಇಳಿತು.












Click it and Unblock the Notifications