Bank Recruitment: ಬ್ಯಾಂಕ್ ಆಫ್ ಬರೋಡಾದ 2700 ಹುದ್ದೆಗಳ ನೇಮಕಾತಿ, ಅರ್ಹರಿಂದ ಅರ್ಜಿ ಆಹ್ವಾನ
Bank of Baroda Jobs Recruitment: ಸಾರ್ವಜನಿಕ ವಲಯದಲ್ಲಿ ಪ್ರತಿಷ್ಠಿತ ಬ್ಯಾಂಕ್ ಆಗಿರುವ 'ಬ್ಯಾಂಕ್ ಆಫ್ ಬರೋಡಾ' (Bank of Baroda Recruitment 2025) ಕರ್ನಾಟಕ ಸೇರಿದಂತೆ ಭಾರತಾದ್ಯಂತ ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಅರ್ಹ ಆಸಕ್ತರು ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸಕ್ಕಾಗಿ ಕಾಯುತ್ತಿರುವ ನಿರುದ್ಯೋಗಿಗಳಿಗೆ ಇದು ಉತ್ತಮ ಅವಕಾಶವಾಗಲಿದೆ. ವಿದ್ಯಾರ್ಹತೆ, ಪ್ರಮುಖ ದಿನಾಂಕಗಳು ಮತ್ತು ಮಾಸಿಕ ವೇತನ ವಿವಿಧ ಮಾಹಿತಿ ಇಲ್ಲಿದೆ.
ಬ್ಯಾಂಕ್ ಆಫ್ ಬರೋಡಾ' ದೇಶಾದ್ಯಂತ ಖಾಲಿ ಇರುವ ಗ್ರಾಜ್ಯುಯೇಟ್ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಈ ಅಧಿಸೂಚನೆ ಅಡಿಯಲ್ಲಿ ಬರೋಬ್ಬರಿ ಒಟ್ಟು 2700 ಗ್ರಾಜ್ಯುಯೇಟ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಹರಿಂಧ ಅರ್ಜಿಗಳನ್ನು ಆಹ್ವಾನಿಸಿದೆ. ಇದೇ ನವೆಂಬರ್ 11ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಕರ್ನಾಟಕದಲ್ಲಿ ಎಷ್ಟು ನೂರು ಹುದ್ದೆಗಳು ಖಾಲಿ ಇವೆ? ಎಂಬ ವಿವರ ಇಲ್ಲಿದೆ.

ಬಿಒಬಿ ನೇಮಕಾತಿ ವಿವರ
ನೇಮಕಾತಿ ಸಂಸ್ಥೆ: ಬ್ಯಾಂಕ್ ಆಫ್ ಬರೋಡಾ
ಹುದ್ದೆಗಳು ಹೆಸರು: ಗ್ರಾಜ್ಯುಯೇಟ್ ಅಪ್ರೆಂಟಿಸ್ ಹುದ್ದೆಗಳು
ಒಟ್ಟು ಹುದ್ದೆಗಳು: 2700
ನೇಮಕಾತಿ/ಪೋಸ್ಟಿಂಗ್: ಭಾರತಾದ್ಯಂತ
ಅರ್ಜಿ ಸಲ್ಲಿಕೆ ಆರಂಭ: ನವೆಂಬರ್ 11
ಅರ್ಜಿ ಸಲ್ಲಿಕೆ ಕೊನೆ ದಿನ: ಡಿಸೆಂಬರ್ 01
ಮಾಸಿಕ ವೇತನ: ನಿಯಮಾನುಸಾರ
ಕರ್ನಾಟಕ ಸೇರಿ ರಾಜ್ಯವಾರು ಖಾಲಿ ಹುದ್ದೆಗಳ ಪಟ್ಟಿ
* ಕರ್ನಾಟಕದಲ್ಲಿ ಹುದ್ದೆಗಳ ಸಂಖ್ಯೆ: 440
* ತಮಿಳುನಾಡಿನಲ್ಲಿ ಹುದ್ದೆಗಳ ಸಂಖ್ಯೆ: 159
* ಛತ್ತೀಸ್‌ಗಢದಲ್ಲಿ ಹುದ್ದೆಗಳ ಸಂಖ್ಯೆ: 48
* ದೆಹಲಿಯಲ್ಲಿ ಹುದ್ದೆಗಳ ಸಂಖ್ಯೆ: 119
* ತೆಲಂಗಾಣದಲ್ಲಿ ಹುದ್ದೆಗಳ ಸಂಖ್ಯೆ: 154
* ಆಂಧ್ರಪ್ರದೇಶದಲ್ಲಿ ಹುದ್ದೆಗಳ ಸಂಖ್ಯೆ: 38
* ಕೇರಳದಲ್ಲಿ ಹುದ್ದೆಗಳ ಸಂಖ್ಯೆ: 52
* ಗೋವಾದಲ್ಲಿ ಹುದ್ದೆಗಳ ಸಂಖ್ಯೆ: 10
ವಯೋಮಿತಿ ಏನಿರಬೇಕು?
ಆಸಕ್ತ ಅಭ್ಯರ್ಥಿಗಳು ಬ್ಯಾಂಕ್ ಆಫ್ ಬರೋಡಾ ನೇಮಕಾತಿ ಅಧಿಸೂಚನೆ ಓದಿಕೊಂಡು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳಿಗೆ ಕನಿಷ್ಠ 20 ಹಾಗೂ ಗರಿಷ್ಠ 28 ವರ್ಷ ಇರಬೇಕು. ಜಾತಿ ಮೀಸಲಾತಿ ಆಧಾರದಲ್ಲಿ ವಯೋ ಸಡಿಲಿಕೆ ಸಿಗಲಿದೆ. ಪರಿಶಿಷ್ಠ ಜಾತಿ ಮತ್ತು ಪಂಗಡ ಅಭ್ಯರ್ಥಿಗಳಿಗೆ ಐದು ವರ್ಷ, ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ನೀಡಲಾಗುವುದು ಎಂದು ತಿಳಿಸಲಾಗಿದೆ.
ಅರ್ಜಿ ಶುಲ್ಕ ಎಷ್ಟು?
ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಉಳಿದಂತೆ ಓಬಿಸಿ, ಇಡಬ್ಲುಎಸ್ ಅಭ್ಯರ್ಥಿಗಳಿಗೆ 800 ರೂಪಾಯಿ, ಪಿಡಬ್ಲುಬಿಡಿ ಅಭ್ಯರ್ಥಿಗಳಿಗೆ 400 ರೂಪಾಯಿ ಶುಲ್ಕ ಪಾವತಿಸಬೇಕು.
ಆಯ್ಕೆ ಹೇಗೆ?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಆಯ್ಕೆಯು ಸ್ಥಳೀಯ ಭಾಷಾ ಪರೀಕ್ಷೆ ಇರುತ್ತದೆ. ಬಳಿಕ ದಾಖಲಾತಿ ಪರಿಶೀಲನೆ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಯ್ಕೆ ಆದವರಿಗೆ ಒಬ್ಬರಿಗೆ ಮಾಸಿಕ 1500 ರೂಪಾಯಿ ಸ್ಟೈಫಂಡ್ ನೀಡಲಾಗುತ್ತದೆ.












Click it and Unblock the Notifications