ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಟಿಡಿಸಿಯಿಂದ ಉಡುಪು ತಯಾರಿಕೆ ಕೌಶಲ್ಯ ತರಬೇತಿ

|
Google Oneindia Kannada News

ಬೆಂಗಳೂರು ಆಗಸ್ಟ್ 08: ಉಡುಪು ತಯಾರಿಕೆಗಳಿಗೆ ಬೇಕಾದ ಅಗತ್ಯ ಕೌಶಲ್ಯ ಒದಗಿಸುವ ಸಂಸ್ಥೆಯಾದ ಬೆಂಗಳೂರಿನ ಯಶವಂತಪುರದ ಆಪೆರಲ್ ಟ್ರೇನಿಂಗ್ ಆಂಡ ಡಿಸೈನ್ ಸೆಂಟರ್ (ಎಟಿಡಿಸಿ) ವಿವಿಧ ಕೋರ್ಸ್‌ಗಳನ್ನು ನಡೆಸುತ್ತಿದ್ದು, ಆಸಕ್ತರು ತರಬೇತಿ ಪಡೆಯಬಹುದಾಗಿದೆ.

ಪ್ರಧಾನ ಮಂತ್ರಿಗಳ ಮೇಕ್ ಇನ್ ಇಂಡಿಯಾ ಯೋಜನೆಗಳ ಮೂಲಕ ಸ್ವದೇಶಿ ಫ್ಯಾಷನ್ ಜಗತ್ತಿಗೆ ಅಗತ್ಯ ಕೌಶಲ್ಯವುಳ್ಳ ಉದ್ಯೋಗಿಗಳನ್ನು ಒದಗಿಸಲು ಎಟಿಡಿಸಿ ಕೋರ್ಸ್‌ಗಳ ಮೂಲಕ ತರಬೇತಿ ನೀಡಲಿದೆ. ಈ ಸಂಬಂಧ 20ಕ್ಕೂ ಹೆಚ್ಚು ಉಡುಪಿ ತಯಾರಿಕಾ ಕಾರ್ಖಾನೆಗಳ ಜತೆಗೆ ಎಟಿಡಿಸಿ ಸಂಸ್ಥೆ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಎಟಿಡಿಸಿ ಫ್ಯಾಷನ್ ಜಗತ್ತನ್ನು ತನ್ನತ್ತ ಸೆಳೆಯಲು ಮುಂದಾಗಿದೆ.

ವಿವಿಧ ಕೋರ್ಸ್‌ಗಳನ್ನು ಎಟಿಡಿಸಿ ಹಮ್ಮಿಕೊಂಡಿದ್ದು, ಅದರಲ್ಲಿ ಮೂರು ವರ್ಷ್ ಫ್ಯಾಷನ್ ಡಿಸೈನ್ ಆಂಡ್ ರೀಟೇಲ್ (ಬಿವಿಒಸಿ) ಪದವಿ ಕೋರ್ಸ್‌ ಆಗಿದೆ. ಇದರಲ್ಲಿ ಫ್ಯಾಷನ್ ಡಿಸೈನ್ ರಿಟೈಲ್ (ಎಫ್‌ಡಿಆರ್), ಅಪೆರಲ್ ಮ್ಯಾನುಫ್ಯಾಕ್ಚರಿಂಗ್ ಆಂಡ್ ಎಂಟರ್‌ಪುನರ್ ಶಿಪ್ (ಎಎಂಇ) ಜುಲೈನಿಂದ ಆರಂಭವಾಗಿದೆ. ಇನ್ನು ಒಂದು ವರ್ಷದ ಡಿಪ್ಲೋಮಾ ಕೋರ್ಸ್, ಮೂರರಿಂದ ಎಂಟು ತಿಂಗಳ ಪ್ರಮಾಣಪತ್ರ ಕಾರ್ಯಕ್ರಮ (ಕೋರ್ಸ್) ಎಟಿಡಿಸಿ ಹಾಗೂ ಆನ್‌ಲೈನ್‌ ಸರ್ಟಿಫಿಕೇಟ್ ಕೋರ್ಸ್ ನಡೆಸಲಿದೆ.

ATDC Started the skill training program for Garment manufacturing

ವಿದ್ಯಾರ್ಥಿಗಳು ಕಾರ್ಖಾನೆಗಳಿಗೆ ಭೇಟಿ ನೀಡಿ ಅಲ್ಲಿ ತರಬೇತಿ ಪಡೆದು ಕೌಶಲ್ಯ ಹೆಚ್ಚಿಸಿಕೊಳ್ಳಲು ಈ ಕೋರ್ಸ್‌ಗಳು ಅಗತ್ಯವಾಗಿವೆ. ಈ ಸಂಸ್ಥೆಯಡಿ ತರಬೇತಿ ಪಡೆದವರು ಇಂದು ಸ್ವಂತ ಉಡುಪಿ ತಯಾರಿಕಾ ಕಾರ್ಖಾನೆ ನಡೆಸುತ್ತಿದ್ದಾರೆ. ಆಸಕ್ತ ವಿದ್ಯಾರ್ಥಿಗಳು https://atdcindia.co.in/ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ATDC Started the skill training program for Garment manufacturing

ರಾಜೀವ್ ಗಾಂಧಿ ವಿವಿ ಮಾನ್ಯತೆ

ಮೂರು ವರ್ಷದ 'ಫ್ಯಾಷನ್ ಡಿಸೈನ್ ಆಂಡ್ ರೀಟೇಲ್ (ಬಿವಿಒಸಿ) ಕೋರ್ಸ್' ರಾಜೀವ್ ಗಾಂಧಿ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದುಕೊಂಡಿದೆ. ಪಿಯುಸಿಗೆ ಸರಿಸಮನಾದ ಯಾವುದೇ ಕೋರ್ಸ್‌ನ ವಿದ್ಯಾರ್ಥಿಗಳು ಈ ತರಬೇತಿ ಶಿಕ್ಷಣ ಪಡೆಯಬಹುದಾಗಿದೆ. ಇದರಲ್ಲಿ ಶೇ. 70ರಷ್ಟು ಪ್ರಾಯೋಗಿಕ ತರಬೇತಿ, ಕೇವಲ 30ರಷ್ಟು ಥಿಯರಿ ತರಬೇತಿ ಇರುತ್ತದೆ. ಇನ್ನು ಒಂದು ವರ್ಷದ ಡಿಪ್ಲೋಮಾ ಕೋರ್ಸ್‌ನಲ್ಲಿ ಉಡುಪು, ವಿನ್ಯಾಸ ಹಾಗೂ ತಂತ್ರಜ್ಞಾನ ತರಬೇತಿ ಕೊಟ್ಟು ಪ್ರಮಾಣ ಪತ್ರ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

English summary
Apparel Training and Design Centre (ATDC) Started the skill training program for Garment manufacturing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X