ಕೊಪ್ಪಳ; ಆ. 21ರಂದು ಅಪ್ರೆಂಟಿಸ್ ಮೇಳ, ಸ್ಟೈಫಂಡ್ ಲಭ್ಯವಿದೆ
ಕೊಪ್ಪಳ, ಆಗಸ್ಟ್ 20: ಕೊಪ್ಪಳ ಜಿಲ್ಲಾ ಮಟ್ಟದ ರಾಷ್ಟ್ರೀಯ ಶಿಶುಕ್ಷು (ಅಪ್ರೆಂಟಿಶಿಪ್) ಮೇಳವನ್ನು ಆಗಸ್ಟ್ 21ರ ಸೋಮವಾರ ಆಯೋಜನೆ ಮಾಡಲಾಗಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು.
ಕುಕನೂರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ಜಿಲ್ಲಾ ಮಟ್ಟದ ರಾಷ್ಟ್ರೀಯ ಶಿಶುಕ್ಷು ಮೇಳವನ್ನು ಸೋಮವಾರ ಬೆಳಗ್ಗೆ 9ಕ್ಕೆ ಆಯೋಜನೆ ಮಾಡಲಾಗಿದೆ. ಗುದ್ನೆಪ್ಪನಮಠದ ಹತ್ತಿರದ ಕುಕನೂರು ಐಟಿಐ ಕಾಲೇಜಿನಲ್ಲಿ ಈ ಮೇಳ ನಡೆಯಲಿದೆ.

ಈ ಮೇಳದಲ್ಲಿ ಕೊಪ್ಪಳ ತಾಲೂಕಿನ ಬೇವಿನಹಳ್ಳಿಯ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಯಲ್ ಪ್ರೈ.ಲಿ ಮತ್ತು ಬೆಂಗಳೂರಿನ ಕಂಪನಿಗಳಾದ ಟೊಯೋಟ ಇಂಡಸ್ಟ್ರೀಜ್ ಪ್ರೈ.ಲಿ., ಸ್ನೈಡರ್ ಎಲೆಕ್ಟ್ರೀಕ್ ಇಂಡಿಯಾ ಪ್ರೈ.ಲಿ., ಬೋಶ್ ಆಟೋಮೊಟಿವ್ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈ.ಲಿ., ಟೊಯೋಡಾ ಗೊಸೈ ಸೌಥ್ ಇಂಡಿಯಾ ಪ್ರೈ.ಲಿ., ಟಯೋಟಾ ಕಿರ್ಲೋಸ್ಕರ್ ಮೊಟಾರ್ ಪ್ರೈ.ಲಿ ಹಾಗೂ ಅಫೋಲೊ ಮೆಡ್ ಸ್ಕಿಲ್ ಟ್ರೇನಿಂಗ್ ಬೆಂಗಳೂರು ಪಾಲ್ಗೊಳ್ಳಲಿವೆ.
ವಯೋಮಿತಿ, ಸ್ಟೈಫಂಡ್ ಮಾಹಿತಿ; ಅಪ್ರೆಂಟಿಸ್ ಮೇಳದಲ್ಲಿ ಪಾಲ್ಗೊಳ್ಳಲು ಅಭ್ಯರ್ಥಿಗಳಿಗೆ
18 ರಿಂದ 24 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಎಸ್.ಎಸ್.ಎಲ್.ಸಿ., ಪಿಯುಸಿ, ಐಟಿಐನ ಎಲ್ಲಾ ವೃತ್ತಿಗಳಲ್ಲಿ ಉತ್ತೀರ್ಣರಾದ (ಮಹಿಳಾ ಮತ್ತು ಪುರಷ ಅಭ್ಯರ್ಥಿಗಳು) ಹಾಗೂ ಡಿಪ್ಲೊಮಾದಲ್ಲಿ ಉತ್ತೀರ್ಣರಾದ ಮಹಿಳಾ ಅಭ್ಯರ್ಥಿಗಳು ಮಾತ್ರ ಈ ಸಂದರ್ಶನದಲ್ಲಿ ಭಾಗವಹಿಸಬಹುದು.
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ. 13,000 ದಿಂದ ರೂ. 17,000 ವರೆಗೆ ಸ್ಟೈಫಂಡ್ ನೀಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ತಮ್ಮ ವಿರ್ದ್ಯಾಹತೆಗೆ ಸಂಬಂಧಿಸಿದ ಎಲ್ಲಾ ಪ್ರಮಾಣ ಪತ್ರಗಳ ಮೂಲ ದಾಖಲಾತಿ ಹಾಗೂ ಒಂದು ಸೆಟ್ ಝೆರಾಕ್ಸ್ ಪ್ರತಿ, ಎರಡು ಫೋಟೋ ಹಾಗೂ ರೆಸ್ಯೂಮ್‌ನೊಂದಿಗೆ ಸ್ವಂತ ಖರ್ಚಿನಲ್ಲಿಯೇ ಸಂದರ್ಶನಕ್ಕೆ ಹಾಜರಾಗಬೇಕು.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9964247098, 9481718859, 8618952961, 9164198246 ಗೆ ಸಂಪರ್ಕಿಸಬಹುದಾಗಿದೆ ಎಂದು ಕುಕನೂರು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ವಯಂ ಉದ್ಯೋಗ ಮಾಡಲು ಸಹಾಯಧನ; ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2022-23ನೇ ಸಾಲಿನ ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಅಧಿಕೃತ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ ಪರಿಶಿಷ್ಟ ಜಾತಿ ಕ್ರೀಡಾಪಟುಗಳಿಗೆ ಸ್ವಯಂ ಉದ್ಯೋಗ ಹೊಂದಲು ಜಿಮ್ ಸ್ಥಾಪನೆಗಾಗಿ ಸಹಾಯಧನ ನೀಡಲು ಉದ್ದೇಶಿಸಲಾಗಿದೆ.
ಅರ್ಹ ಕ್ರೀಡಾಪಟುಗಳು ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು. ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಅಧಿಕೃತ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ ಪರಿಶಿಷ್ಟ ಜಾತಿಯ ರಾಜ್ಯದ ಕ್ರೀಡಾಪಟುಗಳು ತಮ್ಮ ವಿವರಗಳನ್ನು ನಿಗದಿತ ನಮೂನೆಯ ಅರ್ಜಿಯಲ್ಲಿ ಭರ್ತಿ ಮಾಡಿ, ಅರ್ಜಿಗಳನ್ನು ಆಯಾ ಜಿಲ್ಲೆಯ ತರಬೇತುದಾರರಿಗೆ ಸಲ್ಲಿಸಬೇಕು.
ಕ್ರೀಡಾಪಟುಗಳು ಸಲ್ಲಿಸಿರುವ ಪ್ರಮಾಣ ಪತ್ರಗಳನ್ನು ಪರಿಶೀಲಿಸಲಾಗುತ್ತದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 9 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಬಹುದು. ಕರೆ ಮಾಡಲು ದೂರವಾಣಿ ಸಂಖ್ಯೆ 9972552385.












Click it and Unblock the Notifications