Government Employee: ಅನುಕಂಪ ಆಧಾರಿತ ನೇಮಕಾತಿಯಲ್ಲಿ ಬದಲಾವಣೆ, ವಿವರ
ಬೆಂಗಳೂರು, ಅಕ್ಟೋಬರ್ 20: ಅನುಕಂಪ ಆಧಾರಿತ ನೇಮಕಾತಿಯಲ್ಲಿ ಕೆಲವು ಬದಲಾವಣೆಗಳು ಆಗಿವೆ. ಈ ಕುರಿತು ಅಧಿಸೂಚನೆ ಪ್ರಕಟಿಸಲಾಗಿದ್ದು, ಮಾಹಿತಿ ನೀಡಲಾಗಿದೆ. ಈ ಅಧಿಸೂಚನೆ ಅನುಕಂಪದ ಆಧಾರದ ಮೇಲೆ ನೌಕರಿ ಪ್ರಸ್ತಾವನೆಗಳನ್ನು ಆನ್‌ಲೈನ್ ತಂತ್ರಾಂಶದಲ್ಲಿ ನಿರ್ವಹಿಸುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ. ಅನುಕಂಪದ ನೇಮಕಾತಿ ನಿಯಮಗಳು-1996ರ ತಿದ್ದುಪಡಿ ಆದೇಶ, ಶಾಲಾ ಶಿಕ್ಷಣ ಇಲಾಖೆಯ ಕಛೇರಿಯ ಸುತ್ತೋಲೆಗಳಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಡಾ. ತ್ರಿಲೋಕ್ ಚಂದ್ರ ಕೆ. ವಿ. ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಅಧಸೂಚನೆ ಹೊರಡಿಸಿದ್ದಾರೆ. ಈವಿಷಯದನ್ವಯ ಅನುಕಂಪದ ನೇಮಕಾತಿ ಅರ್ಜಿಗಳನ್ನು ಸಂಪೂರ್ಣವಾಗಿ ಆನ್‌ಲೈನ್ ತಂತ್ರಾಂಶದ ಮುಖಾಂತರ ಇಇಡಿಎಸ್ ನಲ್ಲಿ ನಿರ್ವಹಿಸಲು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಇಲಾಖಾ ವೆಬ್‌ಸೈಟ್ https://schooleducation.karnataka.gov.in ಅಳವಡಿಸಲಾಗಿದೆ ಎಂದು ಹೇಳಿದ್ದಾರೆ.

ಅನುಕಂಪದ ನೇಮಕಾತಿ ಅರ್ಜಿಗಳು ಪ್ರಸ್ತುತದಲ್ಲಿ ಭೌತಿಕವಾಗಿ ಸ್ವೀಕೃತಿಯಾಗಿ ನಿರ್ವಹಣೆ ಕ್ರಮಗಳು ಆಗುತ್ತಿದ್ದು ಇದರಿಂದ ಹಲವು ಪ್ರಕರಣಗಳಲ್ಲಿ ಅರ್ಜಿದಾರರಿಗೆ ಅನಗತ್ಯ ತೊಂದರೆಗಳಾಗುತ್ತಿರುವುದು ಗಮನಕ್ಕೆ ಬಂದಿದೆ. ಅಸಾಧಾರಣ ವಿಳಂಬವನ್ನೂ ಸಹ ಗಮನಿಸಿದ್ದು, ದೂರುಗಳಿಗೆ ದಾರಿಯಾಗಿದೆ. ಇನ್ನು ಮುಂದೆ ಅರ್ಜಿದಾರರಿಗೆ ಅನುಕೂಲವಾಗುವಂತೆ ಮತ್ತು ಇಡೀ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ನಿರ್ವಹಿಸಬಹುದಾದ ರೀತಿಯಲ್ಲಿ ಈಗಾಗಲೇ ಆನ್‌ಲೈನ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದ್ದು ಪ್ರಸ್ತುತ ವಿವಿಧ ಜಿಲ್ಲೆಗಳಿಂದ ಆನ್‌ಲೈನ್ ಪರೀಕ್ಷೆಗೆ ಮಾಡ್ಯೂಲ್ ಅನ್ನು ಒದಗಿಸಿ ವರದಿಗಳನ್ನು ಪಡೆಯಲಾಗುತ್ತಿದೆ. ವರದಿಗಳ ಆಧಾರದಲ್ಲಿ ತಂತ್ರಾಂಶವು ಅತ್ಯಂತ ಸಮರ್ಥವಾಗಿ ಮತ್ತು ಸುಲಭ ವ್ಯವಹರಣೆಗೆ ಸೂಕ್ತವಾಗಿ ಇರುತ್ತದೆ ಎಂದು ತಿಳಿಸಿದ್ದಾರೆ.
ಇನ್ನು ಮುಂದೆ ಎಲ್ಲಾ ಅನುಕಂಪದ ನೇಮಕಾತಿ ಅರ್ಜಿಗಳನ್ನು ಆನ್‌ಲೈನ್ ವ್ಯವಸ್ಥೆಯಲ್ಲಿಯೇ ಸ್ವೀಕರಿಸಲು ಮತ್ತು ಆಯಾ ಕಛೇರಿ ಹಂತಗಳಲ್ಲಿ ಮತ್ತು ಮೇಲು ಕಛೇರಿಗೆ ಅರ್ಜಿಗಳನ್ನು ಮುಂದಿನ ಕ್ರಮಕ್ಕಾಗಿ ಆನ್‌ಲೈನ್‌ನಲ್ಲಿಯೇ ಸಲ್ಲಿಸಲು ವ್ಯವಸ್ಥೆಗೊಳಿಸಲಾಗಿದೆ. ಅನುಕಂಪದ ಆಧಾರಿತ ಅರ್ಜಿಗಳ ಪ್ರಕ್ರಿಯೆಯು ಯಾವುದೇ ವಿಳಂಬವಿಲ್ಲದಂತೆ ಕಾರ್ಯನಿರ್ವಾಹಕರ ಹಂತದಿಂದ ನೇಮಕಾತಿ ಆದೇಶ ನೀಡುವವರೆಗೆ ಆನ್‌ಲೈನ್ ವ್ಯವಸ್ಥೆಯಲ್ಲಿ ನಿರ್ವಹಣೆಗೊಳ್ಳಲು ಕೆಳಕಂಡ ಸೂಚನೆಗಳನ್ನು ಹೊರಡಿಸಲಾಗಿದೆ. ಸೂಚನೆಗಳನ್ನು ಪಾಲಿಸದೇ ಭೌತಿಕವಾಗಿ ಅರ್ಜಿಗಳನ್ನು ನಿರ್ವಹಿಸುವುದನ್ನು ಅತ್ಯಂತ ಗಂಭಿರವಾಗಿ ಪರಿಗಣಿಸಲಾಗುವುದು ಮತ್ತು ಅಂತಹ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ಎಚ್ಚರಿಸಲಾಗಿದೆ.
ಸೂಚನೆಗಳು ಹೀಗಿವೆ
* ದಿನಾಂಕ 18.11.2024 ರಿಂದ ಎಲ್ಲಾ ಅನುಕಂಪದ ಆಧಾರಿತ ನೇಮಕಾತಿ ಕೋರಿಕೆ ಅರ್ಜಿಗಳನ್ನು ಕಡ್ಡಾಯವಾಗಿ ಆನ್‌ಲೈನ್ ವ್ಯವಸ್ಥೆಯಲ್ಲಿಯೇ ಸ್ವೀಕರಿಸತಕ್ಕದ್ದು ಮತ್ತು ನಿರ್ವಹಿಸತಕ್ಕದ್ದು. ಆದರೆ ದಿನಾಂಕ 18.10.2024 ರಿಂದ 16.11.2024 ರವರೆಗೆ ಸಮಾನಾಂತರವಾಗಿ ಭೌತಿಕವಾಗಿಯೂ ಅರ್ಜಿಗಳನ್ನು ಪಡೆದು ಆನ್‌ಲೈನ್ ವ್ಯವಸ್ಥೆ ಮತ್ತು ಭೌತಿಕ ವ್ಯವಸ್ಥೆಯಲ್ಲಿ ಪ್ರಕ್ರಿಯೆಯನ್ನು ಹಮ್ಮಿಕೊಳ್ಳತಕ್ಕದ್ದು.
* ಈ ವ್ಯವಸ್ಥೆಯು ಅನುಕಂಪದ ಆಧಾರಿತ ಅರ್ಜಿದಾರರಿಗೆ ಯಾವುದೇ ತೊಂದರೆಯಾಗದಂತೆ ಆಡಳಿತ ವ್ಯವಸ್ಥೆಯಲ್ಲಿ ಭೌತಿಕ ಪದ್ಧತಿಯಿಂದ ಆನ್‌ಲೈನ್ ಪದ್ಧತಿಗೆ ಪೂರ್ಣ ಹೊಂದಿಕೊಳ್ಳಲು ಸಮಯವನ್ನು ಕಲ್ಪಿಸಲಾಗಿದೆ (transition period). ಇದರಿಂದ ತಂತ್ರಾಂಶವನ್ನು ಬಳಸುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಹೊಸ ವ್ಯವಸ್ಥೆಗೆ ಒಗ್ಗೂಡಿಕೊಳ್ಳಲು ಮತ್ತು ಅರ್ಜಿದಾರರಿಗೂ ಸಹ ಸೂಕ್ತ ತಾಂತ್ರಿಕ ಮಾರ್ಗದರ್ಶನವನ್ನು ನೀಡಲು ತರಬೇತಿಯನ್ನು ಪಡೆದುಕೊಳ್ಳಲು ಕಾಲಾವಕಾಶವನ್ನು ಕಲ್ಪಿಸಲಾಗಿದೆ.
* ಆದರೆ ದಿನಾಂಕ 19-11-2024 ರಿಂದ ಮುಂದಕ್ಕೆ ಅರ್ಜಿ ಸ್ವೀಕಾರ ಮತ್ತು ಎಲ್ಲಾ ಪ್ರಾರಂಭಿಕ ಪಕ್ರಿಯೆಗಳಿಂದ ಆಖೈರಿನವರೆಗೆ ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿಯೇ ಕಡತ ನಿರ್ವಹಣೆಯಾಗತಕ್ಕದ್ದು, ಈಗಾಗಲೇ ಇಇಡಿಎಸ್ ತಂತ್ರಾಂಶವನ್ನು ಬಳಸಲಾಗುತ್ತಿರುವುದರಿಂದ ಅನುಕಂಪದ ಆಧಾರಿತ ನೇಮಕಾತಿ ಅರ್ಜಿಗಳ ಆನ್‌ಲೈನ್ ನಿರ್ವಹಣೆಗೆ ಒಗ್ಗಿಕೊಳ್ಳುವುದು ಸುಲಭವಾಗಿಯೇ ಇದೆ.
* ಅನುಕಂಪದ ಆಧಾರಿತ ನೇಮಕಾತಿಗೆ ಚಾಲ್ತಿಯಲ್ಲಿರುವ ನಿಯಮಗಳನುಸಾರ ಎಲ್ಲಾ ಅಂಶಗಳನ್ನು ಪರಿಗಣಿಸಿ ವ್ಯವಸ್ಥೆಗಳನ್ನು ತಂತ್ರಾಂಶದಲ್ಲಿ ಅಳವಡಿಸಲಾಗಿದೆ ಮತ್ತು ಭೌತಿಕ ಕಡತ ನಿರ್ವಹಣೆಯ ಪ್ರತಿರೂಪದಂತೆಯ ಆನ್‌ಲೈನ್ ವ್ಯವಸ್ಥೆಯ ಕಡತ ನಿರ್ವಹಣೆ ಸಹ ಇರಲಿದೆ.
* ಪ್ರಸ್ತುತದಲ್ಲಿ ಅನುಕಂಪದ ಆಧಾರಿತ ನೇಮಕಾತಿ ಕೋರಿಕೆ ಅರ್ಜಿಯು ಒಂದನೇ ಹಂತದಲ್ಲಿ ಆಯಾ ಕಛೇರಿ ಮುಖ್ಯಸ್ಮರಲ್ಲಿ ಭೌತಿಕವಾಗಿ ಸ್ವೀಕೃತವಾಗುತ್ತಿದೆ. ಆದರೆ ಇನ್ನು ಮುಂದೆ ಅರ್ಜಿದಾರರಿಗೆ ಅನುಕೂಲವಾಗುವಂತೆ ನೇರವಾಗಿ https://schooleducation.karnataka.gov.in ಮುಖಾಂತರ ಒದಗಿಸಲಾಗಿರುವ ಲಿಂಕ್‌ನಲ್ಲಿ ಅರ್ಜಿಯನ್ನು ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ಆಯಾ ಕಛೇರಿ ಮುಖ್ಯಸ್ಥರು ಅವರ ಲಾಗಿನ್ ಮುಖಾಂತರದಲ್ಲಿ ಪರಿಶೀಲಿಸಿಕಂಡು ಅರ್ಜಿ ಸ್ವೀಕೃತವಾಗಿರುವ ಬಗ್ಗೆ ಭೌತಿಕ ವಹಿಯಲ್ಲಿಯೂ ಸಹ ನೋಂದಾಯಿಸಿಕೊಳ್ಳಬಹುದಾಗಿದೆ. ಪ್ರಕ್ರಿಯೆಯು ಅತ್ಯಂತ ಸರಳವಾಗಿರುವಂತೆ ವ್ಯವಸ್ಥೆಗೊಳಿಸಲಾಗಿದ ಲಿಂಕ್ ಮೇಲೆ ಕ್ಲಿಕ್ ಮಾಡಿದ ತಕ್ಷಣದಲ್ಲಿ ಅರ್ಜಿದಾರನಿಗೆ ಅರ್ಜಿ ಸಲ್ಲಿಸಲು ಲಾಗಿನ್ ಪೇಜ್ ತೆರೆದುಕೊಳ್ಳಲಿದೆ. ಅದರಲ್ಲಿ ಕನ್ನಡ ಮತ್ತು ಆಂಗ್ಲ ಭಾಷಾ ಅವತರಣಿಕೆಯನ್ನು ಆಯ್ಕೆ ಮಾಡಬಹುದಾಗಿದೆ. ಮೃತ ಸರ್ಕಾರಿ ನೌಕರರ ಅವಲಂಬಿತರಿಂದ ಅರ್ಜಿ ಸಲ್ಲಿಕೆಯಾಗುವುದರಿಂದ ಮೃತ ಸರ್ಕಾರಿ ನೌಕರರ ಕೆ.ಜಿ.ಐ.ಡಿ ಸಂಖ್ಯೆಯನ್ನು ಲಾಗಿನ್ ಐಡಿ ಮತ್ತು ಪಾಸ್‌ವರ್ಡ್‌ನ್ನಾಗಿ ಪ್ರಥಮದಲ್ಲಿ ಇರಿಸಿಕೊಂಡಿದೆ.
* ಪ್ರಥಮವಾಗಿ ಕೆಜಿಐಡಿ ಸಂಖ್ಯೆ ಬಳಸಿ ಲಾಗಿನ್ ಐಡಿ ಮುಖಾಂತರ ಲಾಗಿನ್ ಆಗುವ ಅರ್ಜಿದಾರರಿಗೆ ಮೃತ ನೌಕರರ ಮೂಲ ವಿವರಗಳನ್ನು ಲಾಗಿನ್ ಪೇಜ್‌ನಲ್ಲಿ ಡಿಸ್‌ಪ್ಲೇ ನೀಡಲಾಗಿದೆ. ಅಲ್ಲೇ ಮುಂದುವರೆದು ಅರ್ಜಿದಾರರು ತಮ್ಮ ಮೂಲ ವಿವರಗಳನ್ನು ನಮೂದಿಸಿ ಅರ್ಜಿಯನ್ನು ಆನ್‌ಲೈನ್‌ನಲ್ಲಿ ದಾಖಲಿಸುವುದು ಮತ್ತು ಒದಗಿಸಲಾಗಿರುವ ಸ್ಲಾಟ್‌ನಲ್ಲಿ ಅವರ ಲಿಖಿತ ಅರ್ಜಿಯನ್ನು ಸಹ ಅಪ್‌ಲೋಡ್ ಮಾಡಲು ವ್ಯವಸ್ಥೆ ಇರುತ್ತದೆ. ಅನುಕಂಪದ ಆಧಾರಿತ ಅರ್ಜಿದಾರರಿಗೆ ಯಾವುದೇ ತೊಂದರೆಯಾಗದಂತೆ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳುವ ಜವಾಬ್ದಾರಿಯನ್ನು ಅಧಿಕಾರಿಗಳು ನಿರ್ವಹಿಸಲಿದ್ದಾರೆ.
* ಅನುಕಂಪದ ಆಧಾರಿತ ನೇಮಕಾತಿಯು ಮಾನವೀಯ ನೆಲೆಯಲ್ಲಿ ಇಲಾಖೆಯ ಮೃತ ಸರ್ಕಾರಿ ನೌಕರರ ಕುಟುಂಬದವರಿಗೆ ಸರ್ಕಾರವು ಕಲ್ಪಿಸಿರುವ ಒಂದು ಅವಕಾಶ, ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ನಿವೃತ್ತಿ ವಯೋಮಾನಕ್ಕಿಂತ ಮೊದಲು ಆಕಸ್ಮಾತ್ ಮರಣ ಹೊಂದಿದಲ್ಲಿ ಆ ಎಲ್ಲಾ ಮೃತ ಸರ್ಕಾರಿ ನೌಕರರ ಕುಟುಂಬಕ್ಕೆ ಸರ್ಕಾರವು ಕಲ್ಪಿಸಿರುವ ಅವಕಾಶಗಳಂತೆ ಇಲಾಖೆಯ ಅಧಿಕಾರಿ/ ಸಿಬ್ಬಂದಿಗಳು ಕ್ರಮವಹಿಸಿ ಸೂಕ್ತ ನೇಮಕಾತಿಗಳನ್ನು ಕಲ್ಪಿಸುವುದು ಅತ್ಯಂತ ಸಂವೇದನಾತ್ಮಕ ಜವಾಬ್ದಾರಿ ಎಂಬುದನ್ನು ತಿಳಿದುಕೊಳ್ಳತಕ್ಕದ್ದು.
* ಆಕಸ್ಮಿಕವಾದ ಸಂದರ್ಭಗಳು ಯಾವುದೇ ರೀತಿಯಲ್ಲಿಯೂ, ಯಾವುದೇ ಸಂದರ್ಭದಲ್ಲಿಯೂ ಯಾರಿಗಾದರೂ ಬರಬಹುದಾಗಿದ ಎಂಬುದನ್ನು ನಾವೆಲ್ಲರೂ ಅರಿಯತಕ್ಕದ್ದು, ಇದರಲ್ಲಿ ಯಾವುದೇ ಅಪಚಾರವಾಗದಂತೆ ಮತ್ತು ಲೋಪವಾಗದಂತೆ ಸದರಿ ಕುಟುಂಬದ ಅವಲಂಬಿತ ಅರ್ಜಿದಾರರಿಗೆ ಸಹಕರಿಸುವುದು, ಮಾರ್ಗದರ್ಶನ ನೀಡುವುದು, ಕಡತವನ್ನು ಸೂಕ್ತವಾಗಿ ನಿರ್ವಹಿಸಿ ಅನುಕಂಪದ ಆಧಾರಿತ ನೇಮಕಾತಿ ಅರ್ಜಿಯನ್ನು ವಿಲೇವಾರಿ ಮಾಡತಕ್ಕದ್ದು. ಅರ್ಜಿ ಕುರಿತಂತೆ ಚಾಲ್ತಿಯಲ್ಲಿರುವ ಎಲ್ಲಾ ನಿಯಮಗಳು ಮತ್ತು ಇಲಾಖೆಯಿಂದ ಹೊರಡಿಸಲಾದ ಎಲ್ಲಾ ಸುತ್ತೋಲೆ/ ಜ್ಞಾಪನ/ ಪತ್ರ ವ್ಯವಹರಣೆಯ ಎಲ್ಲಾ ಸೂಚನೆಗಳು ಆನ್‌ಲೈನ್‌ನಲ್ಲಿ ಕಡತ ನಿರ್ವಹಣೆ ವ್ಯವಸ್ಥೆಗೂ ಅನ್ವಯವಾಗಲಿದೆ.
-
ಏರ್ ಕೂಲರ್ vs ಏರ್ ಕಂಡಿಷನರ್: ಬೇಸಿಗೆಯಲ್ಲಿ ನಿಮ್ಮ ಸರಿಯಾದ ಆಯ್ಕೆ ಯಾವುದು? -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ -
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
ಇಂಧನ ಪೂರೈಕೆ ಕೊರತೆ ಭೀತಿ: 2026ರಲ್ಲಿ ನೀವು ಖರೀದಿಸಬಹುದಾದ ಟಾಪ್ ಎಲೆಕ್ಟ್ರಿಕ್ ಸ್ಕೂಟರ್ ಗಳು ಇಲ್ಲಿವೆ -
Davanagere By Election: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಜನಸ್ಪಂದನೆ: ಸಿ.ಎಂ ಸಿದ್ದರಾಮಯ್ಯ -
Water4Life: ಅತ್ಯಮೂಲ್ಯ ಜಲಮೂಲಗಳ ಸಂರಕ್ಷಣೆಗೆ ರಿಲಯನ್ಸ್ ಫೌಂಡೇಷನ್ನಿಂದ ಜನ ಚಳವಳಿ, ಡಿಟೇಲ್ಸ್ ಇಲ್ಲಿದೆ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Property: ಕಟ್ಟಡ ಮಾಲೀಕರಿಗೆ ಬಂಪರ್ ಆಫರ್: ಶೇ.15ರವರೆಗಿನ ನಿಯಮ ಉಲ್ಲಂಘನೆ ಸಕ್ರಮಕ್ಕೆ ಜಿಬಿಎ ಅವಕಾಶ! -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ












Click it and Unblock the Notifications