ಅತಿಥಿ ಉಪನ್ಯಾಸಕರ ನೇಮಕ ಯುಜಿಸಿ ನಿಯಮಾವಳಿ ಪ್ರಕಾರವೇ ಆಗಲಿ; ಹೈಕೋರ್ಟ್

ಕರ್ನಾಟಕ ಸರ್ಕಾರ ಸರ್ಕಾರಿ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡುವಾಗ ಯುಜಿಸಿ ನಿಯಮಾವಳಿಗಳನ್ನು ಪಾಲನೆ ಮಾಡಬೇಕು ಎಂದು ಕೋರ್ಟ್‌ ಆದೇಶ ನೀಡಿದೆ.

ಬೆಂಗಳೂರು, ಫೆಬ್ರವರಿ 01; ರಾಜ್ಯದ ಸರ್ಕಾರಿ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡುವಾಗ ವಿಶ್ವವಿದ್ಯಾಲಯ ಧನ ಆಯೋಗ (ಯುಜಿಸಿ) ನಿಯಮಾವಳಿಯನ್ವಯವೇ ಮಾಡಬೇಕು ಎಂದು ಕರ್ನಾಟಕ ಹೈಕೋರ್ಟ್ ಸರ್ಕಾರಕ್ಕೆ ತಾಕೀತು ಮಾಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕೆ. ವಿ. ರಂಜಿತ್‌ ನಾಯಕ್‌ ಮತ್ತಿತರ 50ಕ್ಕೂ ಅಧಿಕ ಮಂದಿ ಸಲ್ಲಿಸಿದ್ದ ಅರ್ಜಿಗಳನ್ನು ವಿಲೇವಾರಿ ಮಾಡಿರುವ ನ್ಯಾ. ಬಿ. ಎಂ. ಶ್ಯಾಮ್‌ ಪ್ರಸಾದ್‌ ಅವರಿದ್ದ ಏಕಸದಸ್ಯಪೀಠ ಯುಜಿಸಿ ನಿಗದಿಪಡಿಸಿರುವ ಕನಿಷ್ಠ ಶೈಕ್ಷಣಿಕ ಅರ್ಹತೆ ಸೇರಿದಂತೆ ಎಲ್ಲ ನಿಯಮಾವಳಿಗಳನ್ನು ಪರಿಗಣಿಸಿಯೇ ನೇಮಕ ಮಾಡಿಕೊಳ್ಳಬೇಕೆಂದು ಸರ್ಕಾರಕ್ಕೆ ಆದೇಶಿಸಿದೆ.

ಹಾಲಿ ನಡೆದಿರುವ ನೇಮಕಗಳಲ್ಲಿ ಮಧ್ಯಪ್ರವೇಶ ಮಾಡಲು ನಿರಾಕರಿಸಿರುವ ನ್ಯಾಯಾಲಯ ಮುಂದಿನ ನೇಮಕಾತಿಗೆ ವೇಳೆ ಯುಜಿಸಿಯ ನಿಯಮ ಪರಿಗಣಿಸಲು ನಿರ್ದೇಶನ ನೀಡಿದೆ.

Appointment Of Guest Lecturers: High Court Directs State Govt To Follow UGC Rule

ಕೃಪಾಂಕ ವಿಚಾರದಲ್ಲಿ ಅರ್ಜಿದಾರ ವಾದವನ್ನು ತಿರಸ್ಕರಿಸಿರುವ ನ್ಯಾಯಾಲಯ, ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರಿಗೆ ಅವರು ಸಲ್ಲಿಸಿರುವ ವರ್ಷಗಳ ಸೇವೆಗೆ ಅನುಗುಣವಾಗಿ ವರ್ಷಕ್ಕೆ 3 ಅಂಕಗಳಂತೆ ಗರಿಷ್ಠ 16 ವರ್ಷಗಳ ಕೃಪಾಂಕ ನೀಡಿಕೆ ಸಮಂಜಸವಾಗಿದೆ. ಈ ಕುರಿತು 2022ರ ಜ.17ರಂದು ಹೊರಡಿಸಿರುವ ಆದೇಶ ಸರಿ ಇದೆ ಎಂದು ಏಕಸದಸ್ಯ ಪೀಠ ಹೇಳಿದೆ.

ಯುಜಿಸಿ ಪರ ವಕೀಲರು, ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಶಿಕ್ಷಕರು ಮತ್ತು ಇತರೆ ಶೈಕ್ಷಣಿಕ ಸಿಬ್ಬಂದಿ ನೇಮಕ ಸಂಬಂಧ ಕನಿಷ್ಠ ವಿದ್ಯಾರ್ಹತೆ ಕುರಿತ ಯುಜಿಸಿ ನಿಯಮಾವಳಿ ನಿಯಮ 13 ಹಾಗೂ ಉನ್ನತ ಶಿಕ್ಷಣದಲ್ಲಿಗುಣಮಟ್ಟ ಕಾಯ್ದುಕೊಳ್ಳುವ ಮಾನದಂಡಗಳು 2018 ನಲ್ಲಿಅತಿಥಿ ಉಪನ್ಯಾಸಕರ ನೇಮಕಕ್ಕೆ ಕನಿಷ್ಠ ವಿದ್ಯಾರ್ಹತೆಗಳನ್ನು ನಿಗದಿಪಡಿಸಲಾಗಿದೆ. ಹಾಗಾಗಿ ಅವುಗಳನ್ನು ಪಾಲನೆ ಮಾಡಬೇಕಿದೆ ಎಂದು ವಾದಿಸಿದ್ದರು.

ಅರ್ಜಿದಾರರ ಪರ ವಕೀಲರು, ಅತಿಥಿ ಉಪನ್ಯಾಸಕರಿಗೆ ಯುಜಿಸಿ ನಿಯಮದಂತೆ ಕನಿಷ್ಠ ವಿದ್ಯಾರ್ಹತೆ ಹೊಂದಬೇಕು, ಆದರೆ ಸರಕಾರ ಆ ನಿಯಮಗಳನ್ನು ಪಾಲಿಸದೆ ವಿದ್ಯಾರ್ಹತೆ ಹೊಂದಲು ನೇಮಕಗೊಂಡ ಮೂರು ವರ್ಷಗಳವರೆಗೆ ಕಾಲಾವಕಾಶ ನೀಡಿದೆ ಮತ್ತು ಕೃಪಾಂಕ ನೀಡಿಕೆ ಕ್ರಮ ಸರಿಯಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು.

ಪ್ರಕರಣದ ವಿವರ: ಸರ್ಕಾರ 2022ರ ಜ.14ರಂದು ಯುಜಿಸಿ ನಿಗದಿಪಡಿಸಿದ ಕನಿಷ್ಠ ಶೈಕ್ಷಣಿಕ ಅರ್ಹತೆ ಇಲ್ಲದಿದ್ದ ಅಭ್ಯರ್ಥಿಗಳೂ ಸಹ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಸಲ್ಲಿಸಬಹುದು.ಆದರೆ ಆ ವಿದ್ಯಾರ್ಹತೆಗಳನ್ನು ನೇಮಕವಾದ ಮೂರು ವರ್ಷಗಳೊಳಗೆ ಹೊಂದಬೇಕೆಂದು ಆದೇಶ ಹೊರಡಿಸಿತ್ತು.ಅದನ್ನು ಮತ್ತು ಕೃಪಾಂಕ ನೀಡಿಕೆಯನ್ನು ಅರ್ಜಿದಾರರು ಪ್ರಶ್ನಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+