• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಾವೇರಿಯಲ್ಲಿ ಯೋಗ ತರಬೇತುದಾರ ಹುದ್ದೆಗೆ ಅರ್ಜಿ ಆಹ್ವಾನ

|

ಬೆಂಗಳೂರು, ಜನವರಿ 04: ಹಾವೇರಿ ಜಿಲ್ಲೆಯಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರ (ಎಸ್.ಸಿ ಮತ್ತು ಪಿ.ಎಚ್.ಪಿ)ಗಳ ಮೂಲಕ ಯೋಗ ಶಿಬಿರ ನಡೆಸಲು ಅರೆಕಾಲಿಕ ಯೋಗ ತರಬೇತಿದಾರರ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಯು ಕನಿಷ್ಠ ಪಿಯುಸಿ ಉತ್ತೀರ್ಣರಾಗಿರಬೇಕು ಹಾಗೂ ಯೋಗ ತರಬೇತಿ ಸಂಸ್ಥೆಗಳಿಂದ ಅಧಿಕೃತವಾಗಿ ತರಬೇತಿ ಪಡೆದ ಆಯೋಗ ಶಿಕ್ಷಕರಾಗಿರಬೇಕು ಅಥವಾ ಪತಂಜಲಿ ಯೋಗ ತರಬೇತಿ ಕೇಂದ್ರದಲ್ಲಿ ಕನಿಷ್ಠ 100 ಗಂಟೆಗಳ ಕಾಲ ಯೋಗ ತರಬೇತಿ ಪಡೆದ ಅಭ್ಯರ್ಥಿಯಾಗಿರಬೇಕು ಅಥವಾ ಮಾನ್ಯತೆ ಹೊಂದಿದ ವಿಶ್ವ ವಿದ್ಯಾಲಯಗಳಲ್ಲಿ ಯೋಗ ತರಬೇತಿ ಹೊಂದಿದ ಅಭ್ಯರ್ಥಿ ಆಗಿರಬೇಕು.

ಧಾರವಾಡ ವಿವಿಯಲ್ಲಿ ಕೆಲಸ ಖಾಲಿ ಇದೆ; ಅರ್ಜಿ ಹಾಕಿ

ಅರ್ಜಿ ನಮೂನೆಗಳನ್ನು ದಿನಾಂಕ 12-01-2021ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1ಗಂಟೆವರೆಗೆ ಜಿಲ್ಲಾ ಸರ್ವೇಕ್ಷಣಾ ಘಟಕ, ಜಿಲ್ಲಾ ಆಸ್ಪತ್ರೆ ಹಾವೇರಿ ಈ ವಿಳಾಸದಲ್ಲಿ ಸ್ವತಃ ಅಭ್ಯರ್ಥಿಗಳು ಪಡೆದು ಅರ್ಜಿಯೊಂದಿಗೆ ಮೂಲ ದಾಖಲಾತಿಗಳ ದೃಢೀಕರಿಸಿದ ಝರಾಕ್ಸ್ ಪ್ರತಿ ಹಾಗೂ ಇತ್ತೀಚಿನ ಭಾವಚಿತ್ರದ ಎರಡು ಪ್ರತಿಗಳನ್ನು ಲಗತ್ತಿಸಿ ಅದೇ ದಿನ ಸಲ್ಲಿಸಬೇಕು.

ಅಂಚೆ ಇಲಾಖೆಯಲ್ಲಿ ಡಾಕ್ ಸೇವಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರೆಕಾಲಿಕ ಯೋಗ ತರಬೇತಿದಾರರ ನೇಮಕಾತಿಗೆ ಸಂಬಂಧಿಸಿದ ಪೂರ್ಣ ಪ್ರಮಾಣದ ಹಕ್ಕನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಕಾಯ್ದಿಡಿಸಿಕೊಂಡಿದೆ.

RDPR ನೇಮಕಾತಿ 2021: 30 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸರ್ವೇಕ್ಷಣಾ ಘಟಕ, ಜಿಲ್ಲಾ ಆಸ್ಪತ್ರೆ ಹಾವೇರಿ ದೂರವಾಣಿ ಸಂಖ್ಯೆ 08375-297218 ಅಥವಾ ಕಚೇರಿ ಸೂಚನಾ ಫಲಕನ್ನು ನೋಡಬಹುದು ಎಂದು ತಿಳಿಸಲಾಗಿದೆ.

English summary
Apply for yoga trainer jobs in Haveri district. Candidates can submit applications on January 12, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X