ರಾಯಚೂರಿನಲ್ಲಿ ಕೆಲಸ ಖಾಲಿ ಇದೆ, ಡಿ. 3ರೊಳಗೆ ಅರ್ಜಿ ಹಾಕಿ

ರಾಯಚೂರು, ನವೆಂಬರ್ 29; ಜಿಲ್ಲಾ ಪಂಚಾಯಿತಿ ರಾಯಚೂರು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನಕ್ಕೆ ತಾಂತ್ರಿಕ ಸಹಾಯಕರ ಸೇವೆ ಒದಗಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಲು 3-12-2022 ಕೊನೆಯ ದಿನವಾಗಿದೆ. ಅರ್ಜಿಗಳನ್ನು ಸಲ್ಲಿಕೆ ಮಾಡಿದವರು ಮೂಲ ದಾಖಲೆಗಳ ಪರಿಶೀಲನೆಗೆ ಜಿಲ್ಲಾ ಪಂಚಾಯಿತಿ ಕಾರ್ಯಾಲಯಕ್ಕೆ 12-12-2022ರಂದು ಹಾಜರಾಗಬೇಕಿದೆ.

ತಾಂತ್ರಿಕ ಸಹಾಯಕರು (ಸಿವಿಲ್) 2 ಹುದ್ದೆಗಳು. ವಯೋಮಿತಿ 21 ರಿಂದ 40 ವರ್ಷಗಳು. ತಾಂತ್ರಿಕ ಸಹಾಯಕರು (ತೋಟಗಾರಿಕೆ) 1 ಹುದ್ದೆ. ತಾಂತ್ರಿಕ ಸಹಾಯಕರು (ಅರಣ್ಯ) 2 ಹುದ್ದೆಗಳು. ತಾಂತ್ರಿಕ ಸಹಾಯಕರು (ಕೃಷಿ) 6 ಹುದ್ದೆಗಳು.

Apply For Various Post At Raichur Zilla Panchayat

ಆಯ್ಕೆಯಾದ ಅಭ್ಯರ್ಥಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಮಾನವ ಸಂಪನ್ಮೂಲ ಸಂಸ್ಥೆಯ ಮೂಲಕ ಸೇವೆಗೆ ಪಡೆಯಲಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ನಮೂನೆಯಲ್ಲಿ ನಮೂದಿಸಿರುವ ದಾಖಲೆಗಳಾದ ವಿದ್ಯಾರ್ಹತೆ/ ಸೇವಾನುಭವಕ್ಕೆ ಸಂಬಂಧಪಟ್ಟ ಎಲ್ಲಾ ಮೂಲ ಪ್ರಮಾಣ ಪತ್ರ/ ದಾಖಲೆಗಳನ್ನು ಪರಿಶೀಲನಾ ಸಮಯದಲ್ಲಿ ಕಡ್ಡಾಯವಾಗಿ ಹಾಜರುಪಡಿಸುವುದು. ತಪ್ಪಿದಲ್ಲಿ ಅಭ್ಯರ್ಥಿಯ ಅರ್ಜಿ ತಿರಸ್ಕಾರ ಮಾಡಲಾಗುತ್ತದೆ.

ದಾಖಲಾತಿ ಪರಿಶೀಲನೆಯಲ್ಲಿ ಅರ್ಹಗೊಂಡ ಅಭ್ಯರ್ಥಿಗಳನ್ನು ವಿದ್ಯಾರ್ಹತೆ ಹೊಂದಿದ ಅಂಕಗಳು ಹಾಗೂ ಪಡೆದ ಸೇವಾ ಅನುಭವ ಆಧಾರದ ಮೇಲೆ ಅರ್ಹತಾ ಪಟ್ಟಿಯನ್ನು ತಯಾರಿಸಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಹೊರಡಿಸಲಾಗುತ್ತದೆ.

ಹುದ್ದೆಗಳ ನೇಮಕಾತಿಗೆ ಯಾವುದೇ ಸಂದರ್ಶನ ಇರುವುದಿಲ್ಲ. ಖಾಲಿ ಹುದ್ದೆಗಳನ್ನು ಹೆಚ್ಚಿಸುವ ಅಥವ ಕಡಿಮೆ ಮಾಡುವ ಅಧಿಕಾರವು ನೇಮಕಾತಿ ಪ್ರಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯಿತಿ ರಾಯಚೂರು ಇವರು ಹೊಂದಿರುತ್ತಾರೆ.

ವೇತನ ವಿವರ; ತಾಂತ್ರಿಕ ಸಹಾಯಕ (ಸಿವಿಲ್) ಹುದ್ದೆಗೆ ಮಾಸಿಕ ಸಂಭಾವನೆ 24 ಸಾವಿರ (ಡಿಪ್ಲೊಮಾ ಅಭ್ಯರ್ಥಿಗಳಿಗೆ ರೂ. 22 ಸಾವಿರ. ಪ್ರಯಾಣ ಭತ್ಯೆ ರೂ. 2 ಸಾವಿರ).

ತಾಂತ್ರಿಕ ಸಹಾಯಕ (ಕೃಷಿ, ಅರಣ್ಯ, ತೋಟಗಾರಿಕಾ) ಹುದ್ದೆಗೆ ಮಾಸಿಕ ಸಂಭಾವನೆ ರೂ. 24 ಸಾವಿರ (ಪ್ರಯಾಣ ಭತ್ಯೆ ರೂ. 2 ಸಾವಿರ).

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಕೆ ಮಾಡಲು ವೆಬ್‌ಸೈಟ್‌ ವಿಳಾಸ zpraichur.kar.nic.in

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+