ಬೆಳಗಾವಿಯಲ್ಲಿ ಕೆಲಸ ಖಾಲಿ ಇದೆ; ಜುಲೈ 28ರೊಳಗೆ ಅರ್ಜಿ ಹಾಕಿ
ಬೆಳಗಾವಿ, ಜುಲೈ 21; ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಶಾಖೆ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಬೆಳಗಾವಿ ಖಾಲಿ ಹುದ್ದೆಗಳ ನೇಮಕಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹರು 28/7/2023ರ ಒಳಗೆ ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯ ತನಕ ಅರ್ಜಿಗಳನ್ನು ಸಲ್ಲಿಸಬಹುದು.
ರೆಡ್ ಕ್ರಾಸ್ ಸಂಸ್ಥೆಯ ಮೇಲುಸ್ತುವಾರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ತಾತ್ಕಾಲಿಕವಾಗಿ ಗೌರವಧನದ ಆಧಾರದ ಮೇಲೆ ತುಂಬಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ನೋಡೆಲ್ ಅಧಿಕಾರಿ/ ಸಾಮಾಜಿಕ ಕಾರ್ಯಕರ್ತರು 1, ಕೃತಕಾಂಗ ಜೋಡಣೆ (ಪಿ&ಓ) ಅಭಿಯಂತರರು 1, ಕ್ಲಿನಿಕಲ್ ಸೈಕಾಲೋಜಿಸ್ಟ್ 1, ಸ್ವೀಚ್ ಥೆರಪಿಸ್ಟ್/ ಆಡಿಯೋಲಾಜಿಸ್ಟ್ 1, ಫಿಜಿಯೋ ಥೆರಪಿಸ್ಟ್/ ಆಕ್ಯುಪೇಶನಲ್ ಥೆರಪಿಸ್ಟ್ 1, ಅಕೌಂಟೆಟ್ ಕಂ ಕ್ಲರ್ಕ್ ಕಂ ಸ್ಟೋರ್ ಕೀಪರ್ 1, ಕೃತಕಾಂಗ ತಾಂತ್ರಿಕ 1, ಕಂಪ್ಯೂಟರ್ ಆಪರೇಟರ್ 1, ಲೆದರ್ ವರ್ಕರ್/ ಶ್ಯೂ ಮೇಕರ್ 1, ಮೊಬಿಲಿಟಿ ಇನ್‌ಸ್ಟ್ರಕ್ಟರ್ 1, ಇಯರ್ ಮೋಲ್ಡ್ ಟೆಕ್ನಿಶಿಯನ್ 1, ಕಚೇರಿ ಸೇವಕ 1 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ವೇತನ ಎಷ್ಟು?; ನೋಡೆಲ್ ಅಧಿಕಾರಿ/ ಸಾಮಾಜಿಕ ಕಾರ್ಯಕರ್ತರು, ಕೃತಕಾಂಗ ಜೋಡಣೆ (ಪಿ&ಓ) ಅಭಿಯಂತರರು, ಕ್ಲಿನಿಕಲ್ ಸೈಕಾಲೋಜಿಸ್ಟ್, ಸ್ವೀಚ್ ಥೆರಪಿಸ್ಟ್/ ಆಡಿಯೋಲಾಜಿಸ್ಟ್, ಫಿಜಿಯೋ ಥೆರಪಿಸ್ಟ್/ ಆಕ್ಯುಪೇಶನಲ್ ಥೆರಪಿಸ್ಟ್ ಹುದ್ದೆಗೆ 25,000 ರೂ. ವೇತನ ನಿಗದಿ ಮಾಡಲಾಗಿದೆ.
ಅಕೌಂಟೆಟ್ ಕಂ ಕ್ಲರ್ಕ್ ಕಂ ಸ್ಟೋರ್ ಕೀಪರ್, ಕೃತಕಾಂಗ ತಾಂತ್ರಿಕ ಹುದ್ದೆಗೆ 12,000 ವೇತನವಿದೆ. ಕಂಪ್ಯೂಟರ್ ಆಪರೇಟರ್ 9 ಸಾವಿರ ರೂ., ಲೆದರ್ ವರ್ಕರ್/ ಶ್ಯೂ ಮೇಕರ್, ಮೊಬಿಲಿಟಿ ಇನ್‌ಸ್ಟ್ರಕ್ಟರ್, ಇಯರ್ ಮೋಲ್ಡ್ ಟೆಕ್ನಿಶಿಯನ್ ಹುದ್ದೆಗೆ 8 ಸಾವಿರ ರೂ. ಹಾಗೂ ಕಚೇರಿ ಸೇವಕ ಹುದ್ದೆಗೆ 7 ಸಾವಿರ ರೂ. ವೇತನವಿದೆ.
ಅರ್ಜಿ ಸಲ್ಲಿಕೆ ಹೇಗೆ?; ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಶೈಕ್ಷಣಿಕ ಮತ್ತು ಅನುಭವದ ದಾಖಲಾತಿಗಳೊಂದಿಗೆ ಕೈಬರಹದ ಅರ್ಜಿಯನ್ನು ದಿನಾಂಕ 28/07/2023ರ ಒಳಗಾಗಿ 9 ರಿಂದ ಸಂಜೆ 4 ಗಂಟೆಯ ಕಚೇರಿ ಸಮಯದಲ್ಲಿ ಸಲ್ಲಿಸತಕ್ಕದ್ದು.
ಅರ್ಜಿಗಳನ್ನು ಸಲ್ಲಿಕೆ ಮಾಡಲು ವಿಳಾಸ; ವೈಸ್-ಚೇರಮನ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ, ಜಿಲ್ಲಾ ಆಸ್ಪತ್ರೆ ಆವರಣ, ಬೆಳಗಾವಿ.












Click it and Unblock the Notifications