ಹಾಸನ, ಕೊಡಗು ಜಿಲ್ಲೆಯಲ್ಲಿ ಕೆಲಸ ಖಾಲಿ ಇದೆ, ಆಸಕ್ತರು ಅರ್ಜಿ ಹಾಕಿ
ಹಾಸನ, ಸೆಪ್ಟೆಂಬರ್ 01: ಹಾಸನ, ಕೊಡಗು ಜಿಲ್ಲೆಯಲ್ಲಿ ಕೆಲಸ ಖಾಲಿ ಇದೆ. ಉದ್ಯೋಗ ಹುಡುಕುತ್ತಿರುವ ಆಸಕ್ತ, ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು. ಹಾಸನದಲ್ಲಿ ಆಪ್ತ ಸಮಾಲೋಚಕ ಮತ್ತು ಕೊಡಗು ಜಿಲ್ಲೆಯಲ್ಲಿ ಇಂಟರ್ನಶಿಪ್ ತರಬೇತಿಗೆ ಅರ್ಜಿಗಳನ್ನು ಕರೆಯಲಾಗಿದೆ. ಅಭ್ಯರ್ಥಿಗಳ ಅರ್ಹತೆ ಸೇರಿದಂತೆ ಉದ್ಯೋಗದ ವಿವಿಧ ಅರ್ಹತೆಗಳನ್ನು ಇಲ್ಲಿ ನೀಡಲಾಗಿದೆ.
ರಾಷ್ಟ್ರೀಯ ಏಡ್ಸ್ ನಿಯಂತ್ರಣ ಮಂಡಳಿ, ನವದೆಹಲಿ ಇವರಿಂದ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿಗೆ NACP-V ಅಡಿಯಲ್ಲಿ ಮಂಜೂರಾಗಿರುವ ಮತ್ತು ಪ್ರಸ್ತುತ ಖಾಲಿ ಇರುವ ಡೆಸಿಗ್ನೇಟೆಡ್ ಎಸ್.ಟಿ.ಐ/ ಆರ್.ಟಿ.ಐ ಕ್ಲಿನಿಕ್‌ಗಳಲ್ಲಿ ಖಾಲಿ ಇರುವ ಆಪ್ತ ಸಮಾಲೋಚಕರು ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಜಿ ಕರೆಯಲಾಗಿದೆ.

ಆಪ್ತಸಮಾಲೋಚಕರ ಹುದ್ದೆ 1 ( ಗುತ್ತಿಗೆ ಆಧಾರದ ಮೇಲೆ ವರ್ಷದ ಗುತ್ತಿಗೆ ಆಧಾರ), ವೇತನಶ್ರೇಣಿಯ ಸಂಚಿತ ಮೊತ್ತ ಮಾಸಿಕ 21 ಸಾವಿರ ರೂ.ಗಳು. ಅರ್ಜಿ ಸಲ್ಲಿಸುವವರು ಮನೋವಿಜ್ಞಾನದಲ್ಲಿ ಪದವಿ ಪಡೆದವರು/ ಸಾಮಾಜಿಕ ಕೆಲಸ/ ಸಮಾಜಶಾಸ್ತ್ರ/ ಮಾನವ ಶಾಸ್ತ್ರ/ ಮಾನವಭಿವೃದ್ಧಿ/ ಕೌನ್ಸೆಲಿಂಗ್‌ನಲ್ಲಿ 3 ವರ್ಷಗಳ ಅನುಭವದೊಂದಿಗೆ ನರ್ಸಿಂಗ್/ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿರಬೇಕು.
ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ/ ಸಾಮಾಜಿಕ ಕೆಲಸ/ ಸಮಾಜ ಶಾಸ್ತ್ರ/ ಮಾನವ ಶಾಸ್ತ್ರ/ ಮಾನವ ಅಭಿವೃದ್ಧಿ/ ಶೂಶ್ರೂಷೆ ಅಭ್ಯರ್ಥಿಯು ಹೆಚ್‌ಐವಿ/ ಏಡ್ಸ್ (PLHIV)ಯಾಗಿದಲ್ಲಿ ಮನೋವಿಜ್ಞಾನದಲ್ಲಿ ಪದವಿ ಪಡೆದವರು/ ಸಾಮಾಜಿಕ ಕೆಲಸ/ ಸಮಾಜಶಾಸ್ತ್ರ/ ಮಾನವಶಾಸ್ತ್ರ/ ಮಾನವ ಅಭಿವೃದ್ಧಿ/ ಕೌನ್ಸಿಲಿಂಗ್‌ನಲ್ಲಿ 1 ವರ್ಷದ ಅನುಭವದೊಂದಿಗೆ ನರ್ಸಿಂಗ್/ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿರಬೇಕು.
ರಾಷ್ಟ್ರೀಯ ಏಡ್ಸ್ ನಿಯಂತ್ರಣ ಮತ್ತು ಎಸ್‌ಟಿಡಿ ನಿಯಂತ್ರಣ ಕಾರ್ಯಕ್ರಮ (NACP) ಸೌಲಭ್ಯ ಅಥವಾ ಸಮುದಾಯ ಸೆಟ್ಟಿಂಗ್‌ಗಳ ಅಡಿಯಲ್ಲಿ ಕೆಲಸ ಮಾಡಿದ ಅನುಭವ ಇರುವವರಿಗೆ ಆದ್ಯತೆ ನೀಡುವುದು.
ಅಭ್ಯರ್ಥಿಯು ಎಂಎಸ್ ಆಫೀಸ್ ಇಂಟರ್ನೆಟ್ ಬಳಕೆ ಮತ್ತು ಎಲೆಕ್ಟ್ರಾನಿಕ್ ಮೇಲ್‌ನ ಕೆಲಸದ ಜ್ಞಾನದೊಂದಿಗೆ ಕಂಪ್ಯೂಟರ್ ಸಾಕ್ಷರರಾಗಿರಬೇಕು. ತಂಡಗಳಲ್ಲಿ ಕೆಲಸ ಮಾಡುವ ಸಾಮರ್ಥ್ಯ ಮತ್ತು ಕಾರ್ಯಕ್ರಮದ ಅಗತ್ಯಕ್ಕೆ ಅನುಗುಣವಾಗಿ ಕೆಲಸ ಮಾಡುವ ಹೊಂದಿಕೊಳ್ಳುವ ಸಾಮರ್ಥ್ಯವಿರಬೇಕು.
ಅಭ್ಯರ್ಥಿಗಳು ಅರ್ಜಿಗಳನ್ನು ಸೆಪ್ಟೆಂಬರ್ 17ರ ಸಂಜೆ 5 ಗಂಟೆಯೊಳಗೆ ಮೂಲ ದಾಖಲಾತಿಗಳ ಜೊತೆ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ, 2ನೇ ಮಹಡಿ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಕಟ್ಟಡ, ಹಾಸನಾಂಬ ಒಳ ಕ್ರೀಡಾಂಗಣದ ಹತ್ತಿರ, ಸಾಲಗಾಮೆ ರಸ್ತೆ, ಹಾಸನ ಇಲ್ಲಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08172 250662, 9449846976ಗೆ ಸಂಪರ್ಕಿಸಬಹುದು.
ಇಂಟರ್ನಶಿಪ್ ತರಬೇತಿಗೆ ಅರ್ಜಿ ಆಹ್ವಾನ: ಮಡಿಕೇರಿ ನಗರಸಭೆ ಕಚೇರಿ ವ್ಯಾಪ್ತಿಯಲ್ಲಿ ಬರುವ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದ ದಿ ಅರ್ಬನ್ ಇಂಟರ್ನಶಿಪ್ ಲರ್ನಿಂಗ್ ಪ್ರೋಗ್ರಾಮ್ (ಟಿಯುಎಲ್‍ಐಪಿ) ಕಾರ್ಯಕ್ರಮದಡಿ ನಗರಸಭೆ ವತಿಯಿಂದ ಡೇ-ನಲ್ಮ್ ಅಭಿಯಾನ ಮತ್ತು ಪಿಎಂ ಸ್ವನಿಧಿ ಯೋಜನೆಯಡಿ 8 ರಿಂದ 12 ವಾರಗಳ ಅವಧಿಯ ಇಂಟರ್ನಶಿಪ್ ತರಬೇತಿಗಾಗಿ ಪದವಿ ಸ್ನಾತಕೋತರ ಪದವಿ, ಡಿಪ್ಲೊಮಾ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ನಗರ ಕಲಿಕ ಪ್ರಾಯೋಗಿಕ ತರಬೇತಿ ಕಾರ್ಯಕ್ರಮ 2024-25ನೇ ಸಾಲಿಗೆ ಅನುಷ್ಠಾನಗೊಳಿಸಲಾಗುತ್ತಿದ್ದು, ಡೇ-ನಲ್ಮ್ ಅಭಿಯಾನದ ಉಪ ಘಟಕಗಳು ಮತ್ತು ಪಿಎಂ ಸ್ವನಿಧಿ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳ ಕುರಿತು ಅಧ್ಯಯನ ಮಾಡಿ ಜ್ಞಾನ ಮತ್ತು ಕೌಶಲ್ಯ ವೃದ್ದಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಿ ಕೊಡುವುದು ತರಬೇತಿಯ ಉದ್ದೇಶವಾಗಿದೆ. ಸ್ಥಳೀಯರಿಗೆ ಮೊದಲ ಆದ್ಯತೆ ನೀಡಲಾಗುವುದು ಹಾಗೂ ಸರ್ಕಾರದ ನಿಯಾಮನುಸಾರ ಸ್ಟೈಫಂಡ್ ಪಾವತಿಸಲಾಗುವುದು.
ಆಸಕ್ತರು ತಮ್ಮ ಶೈಕ್ಷಣಿಕ ದಾಖಲೆಗಳೊಂದಿಗೆ ಸೆಪ್ಟೆಂಬರ್ 20ರೊಳಗೆ ಅರ್ಜಿಯನ್ನು ನಗರಸಭೆ, ಮಡಿಕೇರಿ ಡೇ-ನಲ್ಮ್ ಶಾಖೆಗೆ ಸಲ್ಲಿಸಬೇಕು. ಈ ಕುರಿತು ಹೆಚ್ಚಿನ ಮಾಹಿತಿಗೆ ನಗರಸಭೆ, ಮಡಿಕೇರಿ ಡೇ-ನಲ್ಮ್ ಶಾಖೆಯನ್ನು ಸಂಪರ್ಕಿಸಬಹುದು.












Click it and Unblock the Notifications