ಫೋನ್ ಪೇಯಲ್ಲಿ ಕೆಲಸ ಮಾಡಲು ಮನಸ್ಸಿದ್ಯಾ? ಹಾಗಾದ್ರೆ ಶಿವಮೊಗ್ಗದಲ್ಲೇ ಇದೆ ಭರ್ಜರಿ ಉದ್ಯೋಗಾವಕಾಶ

ಪ್ರತಿಷ್ಠಿತ ಖಾಸಗಿ ಸಂಸ್ಥೆಗಳಲ್ಲಿ, ಅದರಲ್ಲೂ ಆರ್ಥಿಕ ವಲಯದಲ್ಲಿ ಕ್ರಾಂತಿ ಮಾಡುತ್ತಿರುವ ಫಿನ್‌ಟೆಕ್ ಕಂಪನಿಗಳಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಬೇಕು ಎಂಬ ಕನಸು ಹೊಂದಿರುವ ಯುವಕ-ಯುವತಿಯರಿಗೆ ಇಲ್ಲೊಂದು ಭರ್ಜರಿ ಅವಕಾಶವಿದೆ. ಜನಪ್ರಿಯ ಡಿಜಿಟಲ್ ಪೇಮೆಂಟ್ಸ್ ಆ್ಯಪ್ ಫೋನ್ ಪೇ ಇದೀಗ ಕರ್ನಾಟಕದ ಶಿವಮೊಗ್ಗದಲ್ಲಿ ಹೊಸ ಉದ್ಯೋಗಾವಕಾಶವನ್ನ ಪ್ರಕಟಿಸಿದೆ. ಫೋನ್ ಪೇ ಯಂತಹ ಅತಿದೊಡ್ಡ ಸಂಸ್ಥೆಯಲ್ಲಿ ಕೆಲಸ ಮಾಡಲು ನಿಮಗೆ ಮನಸ್ಸಿದ್ದರೆ, ಈ ಫುಲ್-ಟೈಮ್ ಉದ್ಯೋಗಕ್ಕೆ ಕೂಡಲೇ ಅರ್ಜಿ ಸಲ್ಲಿಸಬಹುದು.

ಕ್ಲಸ್ಟರ್ ಕಲೆಕ್ಷನ್ಸ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಇಂದೇ ಅರ್ಜಿ ಸಲ್ಲಿಸಬಹುದು.

Apply For PhonePe Cluster Collections Manager Position In Shivamogga Check Out The Job Details Here

ಹುದ್ದೆಯ ಜವಾಬ್ದಾರಿಗಳೇನು?

ಕ್ಲಸ್ಟರ್ ಕಲೆಕ್ಷನ್ಸ್ ಮ್ಯಾನೇಜರ್ ಆಗಿ ಆಯ್ಕೆಯಾಗುವ ಅಭ್ಯರ್ಥಿಗಳು ಪ್ರಮುಖವಾಗಿ ಕಲೆಕ್ಷನ್ ಎಕ್ಸಿಕ್ಯೂಟಿವ್‌ಗಳ ತಂಡವನ್ನ ಮುನ್ನಡೆಸುವ ಮತ್ತು ನಿರ್ವಹಿಸುವ ಜವಾಬ್ದಾರಿ ಹೊಂದಿರುತ್ತಾರೆ. ಜೊತೆಗೆ ಥರ್ಡ್ ಪಾರ್ಟಿ ರಿಕವರಿ ಏಜೆನ್ಸಿಗಳೊಂದಿಗೆ ಒಗ್ಗೂಡಿಕೊಂಡು ಕೆಲಸ ಮಾಡಬೇಕು.

ತಮ್ಮ ವ್ಯಾಪ್ತಿಗೆ ಬರುವ ಕ್ಲಸ್ಟರ್‌ನ ಬಾಕಿ ವಸೂಲಾತಿ ಪ್ರಕ್ರಿಯೆಯನ್ನ ನಿರ್ವಹಿಸುವುದು ಮತ್ತು ಪ್ರತಿ ದಿನದ ಕೆಲಸವನ್ನ ಮೇಲ್ವಿಚಾರಣೆ ಮಾಡುವುದು ಇವರ ಮುಖ್ಯ ಕೆಲಸವಾಗಿರುತ್ತದೆ. ಡಾಟಾ ಮತ್ತು ಪೋರ್ಟ್‌ಫೋಲಿಯೊವನ್ನ ವಿಶ್ಲೇಷಿಸಿ ಹೊಸ ಕಲೆಕ್ಷನ್ ಯೋಜಬೆ ರೂಪಿಸುವುದು ಹಾಗೂ ಪ್ರತಿದಿನದ ವರದಿಗಳನ್ನ ಹಿರಿಯ ಅಧಿಕಾರಿಗಳಿಗೆ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.

ಒಟ್ಟಿನಲ್ಲಿ ಈ ತಂಡವನ್ನ ಹುರಿದುಂಬಿಸಿ ನಿಗದಿತ ಗುರಿಗಳನ್ನ ತಲುಪುವುದೇ ಈ ಹುದ್ದೆಯ ಪ್ರಮುಖ ಸವಾಲು.

ಅಗತ್ಯವಿರುವ ವಿದ್ಯಾರ್ಹತೆ

1. ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.

2. ಕಲೆಕ್ಷನ್ಸ್ ವಿಭಾಗದಲ್ಲಿ ಕನಿಷ್ಠ 5 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು.

3. ಕನಿಷ್ಠ 1-2 ವರ್ಷಗಳ ಕಾಲ ಟೀಮ್ ಲೀಡ್ ಅಥವಾ ಸೂಪರ್‌ವೈಸರ್ ಆಗಿ ಕಾರ್ಯನಿರ್ವಹಿಸಿದ ಅನುಭವ ಕಡ್ಡಾಯ.

4. ಬ್ಯಾಂಕ್, ಎನ್‌ಬಿಎಫ್‌ಸಿ (NBFC) ಅಥವಾ ಫಿನ್‌ಟೆಕ್ ಕಂಪನಿಯಲ್ಲಿ ಕೆಲಸ ಮಾಡಿದ ಪೂರ್ವಾನುಭವ ಹೊಂದಿರುವವರಿಗೆ ಮೊದಲ ಆದ್ಯತೆ.

5. ತಂಡವನ್ನ ಮುನ್ನಡೆಸುವ ಹಾಗೂ ಅತ್ಯುತ್ತಮ ಸಂವಹನ ಕೌಶಲ್ಯ ಹೊಂದಿರಬೇಕು.

ಉದ್ಯೋಗಿಗಳಿಗೆ ಸಿಗುವ ಸೌಲಭ್ಯಗಳು

ಫೋನ್ ಪೇ ಸಂಸ್ಥೆಯು ತನ್ನ ಉದ್ಯೋಗಿಗಳಿಗೆ ಆಕರ್ಷಕ ಸೌಲಭ್ಯಗಳನ್ನ ಒದಗಿಸುತ್ತದೆ. ಇದರಲ್ಲಿ ವೈದ್ಯಕೀಯ ವಿಮೆ, ಕ್ರಿಟಿಕಲ್ ಇಲ್ನೆಸ್ ವಿಮೆ, ಅಪಘಾತ ಮತ್ತು ಜೀವ ವಿಮೆಗಳು ಸೇರಿವೆ. ಜೊತೆಗೆ ವೆಲ್‌ನೆಸ್ ಪ್ರೋಗ್ರಾಮ್, ಆನ್‌ಸೈಟ್ ಮೆಡಿಕಲ್ ಸೆಂಟರ್, ಪೋಷಕರಿಗೆ ಬೆಂಬಲ (ಹೆರಿಗೆ ರಜೆ, ಪಿತೃತ್ವ ರಜೆ, ಡೇ-ಕೇರ್ ಸಪೋರ್ಟ್) ಮತ್ತು ಸ್ಥಳಾಂತರ ಭತ್ಯೆಗಳನ್ನ ನೀಡಲಾಗುತ್ತದೆ.

ನಿವೃತ್ತಿ ಯೋಜನಗಳಾದ ಪಿಎಫ್, ಗ್ರಾಚ್ಯುಟಿ ಮತ್ತು ಎನ್‌ಪಿಎಸ್ ಸೌಲಭ್ಯಗಳೂ ಸಹಯಿದೆ.

ಫೋನ್ ಪೇ ಕಂಪನಿಯ ಬಗ್ಗೆ

ಭಾರತದಲ್ಲಿ ಡಿಜಿಟಲ್ ಫೈನಾನ್ಸ್ ಭವಿಷ್ಯವನ್ನ ನಿರ್ಮಿಸುತ್ತಿರುವ ಫೋನ್ ಪೇ, 2016ರ ಆಗಸ್ಟ್‌ನಲ್ಲಿ ಪ್ರಾರಂಭವಾಯಿತು. ಪ್ರಸ್ತುತ 60 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರನ್ನು ಮತ್ತು 4 ಕೋಟಿಗೂ ಅಧಿಕ ಮರ್ಚೆಂಟ್ ನೆಟ್‌ವರ್ಕ್ ಹೊಂದಿರುವ ಇದು ಭಾರತದ ಅತಿದೊಡ್ಡ ಡಿಜಿಟಲ್ ಪಾವತಿ ವೇದಿಕೆಯಾಗಿದೆ.

ಪ್ರತಿದಿನ 33 ಕೋಟಿಗೂ ಹೆಚ್ಚು ವಹಿವಾಟುಗಳನ್ನ ಈ ಆ್ಯಪ್ ನಿರ್ವಹಿಸುತ್ತದೆ. ಕೇವಲ ಯುಪಿಐ ಪಾವತಿಗಳಷ್ಟೇ ಅಲ್ಲದೆ, ವೈಯಕ್ತಿಕ ಸಾಲ, ವಿಮೆ, ಸಂಪತ್ತು ನಿರ್ವಹಣೆ, ಶೇರ್ ಮಾರ್ಕೆಟ್ ಮತ್ತು ಇಂಡಸ್ ಆಪ್‌ಸ್ಟೋರ್‌ನಂತಹ ಹೊಸ ಹೊಸ ಸೇವೆಗಳೊಂದಿಗೆ ಫೋನ್ ಪೇ ತನ್ನ ಜಾಲವನ್ನು ವಿಸ್ತರಿಸುತ್ತಿದೆ.

ಪ್ರತಿಯೊಬ್ಬ ಭಾರತೀಯನಿಗೂ ಆರ್ಥಿಕ ಸೇವೆಗಳನ್ನ ಸರಳ, ಸುರಕ್ಷಿತ ಮತ್ತು ಸುಲಭವಾಗಿ ತಲುಪಿಸುವುದು ಈ ಸಂಸ್ಥೆಯ ಮುಖ್ಯ ಗುರಿಯಾಗಿದೆ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಬಳಸಿ:
https://www.linkedin.com/jobs/view/4459200364/

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+