ಹಾವೇರಿಯಲ್ಲಿ ಕೆಲಸ ಖಾಲಿ ಇದೆ; ಫೆ. 20ರೊಳಗೆ ಅರ್ಜಿ ಹಾಕಿ

ಹಾವೇರಿ, ಫೆಬ್ರವರಿ 08; ಹಾವೇರಿ ಜಿಲ್ಲೆಯಲ್ಲಿ ರಾಷ್ಟ್ರೀಯ ಯುವ ಕಾರ್ಯಕರ್ತ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಒಂದು ವರ್ಷದ ಅವಧಿಗೆ ತಾತ್ಕಾಲಿಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತರು ಫೆಬ್ರವರಿ 20ರೊಳಗೆ ಅರ್ಜಿ ಸಲ್ಲಿಸಬಹುದು.

ಭಾರತ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರದ ವತಿಯಿಂದ ಈ ಹುದ್ದೆ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಹಾವೇರಿ ಜಿಲ್ಲೆಯ 8 ತಾಲೂಕುಗಳಿಗೆ ತಲಾ ಇಬ್ಬರಂತೆ ಹಾಗೂ ಹಾವೇರಿ ನೆಹರು ಯುವ ಕೇಂದ್ರದ ಕಚೇರಿಗೆ ಇಬ್ಬರು ಕಂಪ್ಯೂಟರ್ ಕೆಲಸಕ್ಕೆ ಅರ್ಜಿ ಕರೆಯಲಾಗಿದೆ.

ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು ಎಸ್. ಎಸ್. ಎಲ್. ಸಿ ಉತ್ತೀರ್ಣರಾಗಿರಬೇಕು ಹಾಗೂ ದಿನಾಂಕ 1-4-2021ಕ್ಕೆ 18 ವರ್ಷವಾಗಿರಬೇಕು ಹಾಗೂ 29ವರ್ಷದೊಳಗಿರಬೇಕು (01-04-1992ರೊಳಗೆ ಜನಸಿರಬೇಕು).

Apply For National Youth Volunteer Jobs Haveri

ಶಿಸ್ತಿನಿಂದ ಕೂಡಿದ ಅರ್ಪಣಾ ಮನೋಭಾವದ ಯುವ ಸ್ವಯಂ ಸೇವಕರು, ಆರೋಗ್ಯ, ಸಾಕ್ಷರತೆ, ನೈರ್ಮಲ್ಯ, ಯುವಕ, ಯುವತಿ, ಮಹಿಳಾ ಮಂಡಳ ರಚನೆ,ಯುವ ಕಾರ್ಯಕ್ರಮಗಳ ಹಾಗೂ ಲಿಂಗ ಮತ್ತಿತರ ಸಾಮಾಜಿಕ ವಿಷಯಗಳ ಬಗ್ಗೆ ಪ್ರಚಾರ ಮಾಡುವ ಕೆಲಸವಾಗಿರುತ್ತದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 5 ಸಾವಿರ ರೂ. ಗೌರವಧನ ನೀಡಲಾಗುತ್ತದೆ. ಆಸಕ್ತರು ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾ ಯುವ ಸಮನ್ವಯ ಅಧಿಕಾರಿಗಳು, ನೆಹರು ಯುವ ಕೇಂದ್ರ, ಕೆ/ಓ ಎ.ಎಲ್.ಕಾಮತ, ವಿದ್ಯಾನಗರ 3ನೇ ಅಡ್ಡರಸ್ತೆ ಹಾವೇರಿ ಇಲ್ಲಿ ಪಡೆದುಕೊಳ್ಳಬಹುದು.

ಆಸಕ್ತರು ಅರ್ಜಿಗಳನ್ನು ಭರ್ತಿ ಮಾಡಿ 20-02-2021ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08375-233162 ಅಥವಾ 8074664539 ಸಂಪರ್ಕಿಸಲು ಕೋರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+