ಬಳ್ಳಾರಿಯಲ್ಲಿ ಕೆಲಸ ಖಾಲಿ ಇದೆ; ಜೂನ್ 15ರೊಳಗೆ ಅರ್ಜಿ ಹಾಕಿ
ಬಳ್ಳಾರಿ, ಜೂನ್ 07; ಬಳ್ಳಾರಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಕರ್ನಾಟಕ ವಸತಿ ಶಿಕ್ಷಣದ ಸಂಸ್ಥೆಗಳ ಸಂಘದ ವಸತಿ ಶಾಲೆಗಳಲ್ಲಿ ಖಾಲಿ ಇರುವ ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಜೂನ್ 15ರೊಳಗೆ ಅರ್ಜಿ ಸಲ್ಲಿಸಬೇಕು.
ಈ ಕುರಿತು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ. ಹೆಚ್. ಸತೀಶ್ ಮಾಹಿತಿ ನೀಡಿದ್ದಾರೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಜೂನ್ 15ರೊಳಗಾಗಿ ನಗರದ ವಾಲ್ಮೀಕಿ ಭವನದ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಬಹುದು.

ಯಾವ-ಯಾವ ವಿಷಯಗಳು: ಕನ್ನಡ ವಿಷಯ 8, ಇಂಗ್ಲೀಷ್ ವಿಷಯ 7, ಹಿಂದಿ 5, ಗಣಿತ 9, ವಿಜ್ಞಾನ 7, ಸಮಾಜ ವಿಜ್ಞಾನ 2, ದೈಹಿಕ ಶಿಕ್ಷಕರು 7, ಗಣಕಯಂತ್ರ ಶಿಕ್ಷಕರು 7 ಸೇರಿ ಒಟ್ಟು 52 ಅತಿಥಿ ಶಿಕ್ಷಕರ ಹುದ್ದೆಗಳನ್ನು ಗೌರವಧನದ ಆಧಾರದ ಮೇಲೆ ಭರ್ತಿ ಮಾಡಲಾಗುತ್ತಿದೆ.
ಅರ್ಜಿಗಳನ್ನು ಸಲ್ಲಿಕೆ ಮಾಡುವ ಅಭ್ಯರ್ಥಿಗಳು ಬಿಎ, ಬಿಇಡಿ, ಬಿಎಸ್‍ಸಿ, ಟಿಇಟಿ, ಬಿಪಿಇಡಿ, ಬಿಎಸ್‌ಸಿ ಕಂಪ್ಯೂಟರ್, ಬಿಸಿಎ ಅರ್ಹತೆ ಹೊಂದಿರಬೇಕು. ಆಸಕ್ತ ಮತ್ತು ಅರ್ಹ ಶಿಕ್ಷಕರು ಅರ್ಜಿಗಳನ್ನು ಸಲ್ಲಿಸಬಹುದು.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 7760167576, 9844969858, 8310558003, 9886297280ಗೆ ಸಂಪರ್ಕಿಸಬಹುದು.
ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರವೇಶ ಮಾಹಿತಿ: ಕರ್ನಾಟಕ ರಾಜ್ಯದಲ್ಲಿ 270 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳು ಗ್ರಾಮೀಣ ಹಾಗೂ ನಗರ ಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಆಗಸ್ಟ್ 2024ರ ಸಾಲಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಪ್ರವೇಶಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಲಾಗಿದೆ.
ಬೆಂಗಳೂರು ವಿಭಾಗೀಯ ವ್ಯಾಪ್ತಿಗೆ ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ, ಶಿವಮೊಗ್ಗ, ಜಿಲ್ಲೆಗಳನ್ನು ಒಳಗೊಂಡಿದ್ದು ಈ ವಿಭಾಗೀಯ ವ್ಯಾಪ್ತಿಯಲ್ಲಿ 69 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಿದ್ದು ಇದರಲ್ಲಿ 7 ಮಹಿಳಾ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಶೇ.100 ಮಹಿಳೆಯರಿಗೆ ಮೀಸಲಾತಿ ಇರುತ್ತದೆ. ಉಳಿದ 62 ತರಬೇತಿ ಸಂಸ್ಥೆಗಳಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿ ಅನ್ವಯ ಪ್ರವೇಶಾವಕಾಶವಿರುತ್ತದೆ.
ಐಟಿಐಗಳಲ್ಲಿ 2024ನೇ ಶೈಕ್ಷಣಿಕ ಸಾಲಿನ ಆನ್‍ಲೈನ್ ಪ್ರವೇಶದ ಮೂಲಕ ಸರ್ಕಾರದ ನಿಯಮಾನುಸಾರ ಮೇರಿಟ್ ಮತ್ತು ಮೀಸಲಾತಿಯನ್ವಯ ಪಾರದರ್ಶಕವಾಗಿ ಪ್ರವೇಶ ಪ್ರಕ್ರಿಯೆ ನಡೆಯುತ್ತದೆ. ಡಿಜಿಟಿ ನವದೆಹಲಿ ನಿಯಮಾನುಸಾರ ಈ ಸಂಸ್ಥೆಗಳಲ್ಲಿ ಎನ್.ಸಿ.ವಿ.ಟಿ ಮಾನ್ಯತೆ ಹೊಂದಿರುವ ವಿವಿಧ ತಾಂತ್ರಿಕ ಮತ್ತು ತಾಂತ್ರಿಕೇತರ 1-2 ವರ್ಷದ ವೃತ್ತಿಗೆ ಪ್ರವೇಶಕ್ಕೆ ಅವಕಾಶವಿರುತ್ತದೆ.
ಸರ್ಕಾರಿ ಸಂಸ್ಥೆಗಳಲ್ಲಿ ವಾರ್ಷಿಕ ರೂ.1200ಗಳು ಮಾತ್ರ ಬೋಧನ ಶುಲ್ಕವಿರುತ್ತದೆ. ಸರ್ಕಾರದ ನಿಯಾಮಾನುಸಾರ ಈ ಸಂಸ್ಥೆಗಳಲ್ಲಿ ಪ್ರವೇಶ ಹೊಂದುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ತರಬೇತಿ ಅನುಕೂಲವಾಗುವ ಉಚಿತ ಪರಿಕರಗಳನ್ನು ವಿತರಿಸಲಾಗುವುದು.
ವೆಲ್ಡರ್, ಕಾರ್ಪೆಂಟರ್, ಸೀಟ್ ಮೆಟಲ್ ವರ್ಕ್‍ರ್, ಸರ್ಫಸ್ ಒರನಾಮೆಷನ್ ಟೆಕ್ನಿಕ್, ವೈರ್ ಮ್ಯಾನ್, ಡ್ರೇಸ್ ಮೇಕಿಂಗ್, ಸ್ವೀಂಗ್ ಟೆಕ್ನಲಾಜಿ, ಮಾಸನ್, ಪ್ಲಂಬರ್ ಇತ್ಯಾದಿ ವೃತ್ತಿಗಳಿಗೆ 8ನೇ ತರಗತಿ ಉತ್ತೀರ್ಣರಾಗಿರಬೇಕು ಅಥವಾ 10ನೇ ತರಗತಿ ಅನುತ್ತೀರ್ಣ ಅಂಕಪಟ್ಟಿಯನ್ನು ಹೊಂದಿರುವ ವಿದ್ಯಾರ್ಥಿಗಳಿಗೂ ಸಹ ಐಟಿಐ ಗಳಲ್ಲಿ ತರಬೇತಿ ಹೊಂದಲು ಅವಕಾಶವಿರುತ್ತದೆ. ಉಳಿದಂತಹ ಇತರೆ ವಿವಿಧ ವೃತ್ತಿಗಳಿಗೆ 10ನೇ ತರಗತಿ ಉತ್ತೀರ್ಣರಾಗಿರಬೇಕು.
ಬೆಂಗಳೂರು ವಿಭಾಗೀಯ ವ್ಯಾಪ್ತಿಯಲ್ಲಿ ಹಲವಾರು ಸರ್ಕಾರಿ ಐಟಿಐ ಗಳು ಕೈಗಾರಿಕೆ 4.0ಗೆ ತಕ್ಕಂತೆ ಅಧುನಿಕ ಸೌಲಭ್ಯಗಳನ್ನು ಒಳಗೊಂಡ ವಿವಿಧ ವೃತ್ತಿಗಳನು ಉದ್ಯೋಗ ಕಾರ್ಯಕ್ರಮದಡಿಯಲ್ಲಿ ಪ್ರಾರಂಭಿಸಿದ್ದು ಆಯಾ ಜಿಲ್ಲೆ ತಾಲೂಕುಗಳಲ್ಲಿರುವ ವಿವಿಧ ಉದ್ದಿಮೆ ಮತ್ತು ಕೈಗಾರಿಕೆಗಳಲ್ಲಿ ಉದ್ಯೋಗಾವಕಾಶಗಳನ್ನು ಹೊಂದಲು ಸಹಕಾರಿಯಾಗಲಿದೆ.
ಬೆಂಗಳೂರು ವಿಭಾಗೀಯ ವ್ಯಾಪ್ತಿಯ ಹಲವಾರು ಐಟಿಐಗಳಲ್ಲಿ ಉಭಯ ತರಬೇತಿ ವ್ಯವಸ್ಥೆ (ಡಿಎಸ್‍ಟಿ) ಅಡಿಯಲ್ಲಿ ವಿವಿಧ ಕೈಗಾರಿಕೆಗಳ ಸಹಭಾಗಿತ್ವದಲ್ಲಿ ವೃತ್ತಿ ತರಬೇತಿಗಳನ್ನು ಪ್ರಾರಂಭಿಸಿದ್ದು ಅಪ್ರೆಂಟಿಶಿಪ್ ಮತ್ತು ಉದ್ಯೋಗಾವಕಾಶಗಳನ್ನು ಹೊಂದುವಲ್ಲಿ ನೆರವಾಗಲಿದೆ. ರಾಜ್ಯದ ಯುವ ಜನತೆಯೂ ಐಟಿಐಗಳಲ್ಲಿ ಪ್ರವೇಶ ಹೊಂದುವ ಮೂಲಕ ಉದ್ಯೋಗಸ್ಥರಾಗಿ ಸಮಾಜದ ಮುಖ್ಯವಾಹಿನಿಗೆ ಬರುವಲ್ಲಿ ಇಲಾಖೆಯೂ ಸಹಕಾರಿಯಾಗಲಿದೆ.
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ












Click it and Unblock the Notifications