ಧಾರವಾಡ; ಜಿಲ್ಲಾ ಸಂಪನ್ಮೂಲ ವ್ಯಕ್ತಿ ಹುದ್ದೆಗೆ ಅರ್ಜಿ ಹಾಕಿ
ಬೀದರ್, ಜೂನ್ 04; ಆತ್ಮ ನಿರ್ಭರ ಭಾರತ ಅಭಿಯಾನದ ಭಾಗವಾಗಿ ಕೇಂದ್ರ ಸರ್ಕಾರದ ಆಹಾರ ಸಂಸ್ಕರಣ ಉದ್ದಿಮೆಗಳ ಮಂತ್ರಾಲಯವು ಪಿಎಂಎಫ್‍ಎಂಇ ಯೋಜನೆ ಅನುಷ್ಠಾನಗೊಳಿಸುತ್ತಿದೆ. ಧಾರವಾಡದಲ್ಲಿ ಯೋಜನೆ ಅನುಷ್ಠಾನಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ.
ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣ ಉದ್ದಿಮೆಗಳ ನಿಯಮ ಬದ್ದಗೊಳಿಸುವಿಕೆ ಯೋಜನೆಯನ್ನು ಹೊಸದಾಗಿ ಪ್ರಾರಂಭಿಸಲಾಗಿದೆ. ಯೋಜನೆಯ ಅನುಷ್ಠಾನದಲ್ಲಿ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳು ಮಹತ್ತರ ಪಾತ್ರ ನಿರ್ವಹಣೆ ಮಾಡಬೇಕು. ಇದಕ್ಕಾಗಿ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಂಪನ್ಮೂಲ ವ್ಯಕ್ತಿಗಳಿಗೆ ಯಾವುದೇ ನಿಗದಿತ ವೇತನ ನೀಡಲಾಗುವುದಿಲ್ಲ. ಆದರೆ ಸಂಪನ್ಮೂಲ ವ್ಯಕ್ತಿಗಳಿಗೆ ನೀಡಲಾಗುವ ಹಣ ಪಾವತಿಯನ್ನು ಅವರು ಬೆಂಬಲಿಸಿರುವಂತಹ ಪ್ರತಿ ಫಲಾನುಭವಿಯನ್ನು ಆಧರಿಸಿ ಬ್ಯಾಂಕ್‍ನಿಂದ ಸಾಲ ಮಂಜೂರಾತಿ ಆದ ನಂತರ ಬ್ಯಾಂಕ್‍ನಿಂದ ಮಂಜೂರಾದ ಪ್ರತಿ ಸಾಲವನ್ನು ಆಧರಿಸಿ ಗರಿಷ್ಠ 20 ಸಾವಿರಗಳನ್ನು 2 ಕಂತುಗಳಲ್ಲಿ ಪಾವತಿಸಲಾಗುವುದು.

ಈ ಪೈಕಿ 50% ಮೊತ್ತವನ್ನು ಬ್ಯಾಂಕಿನಿಂದ ಸಾಲ ಮಂಜೂರಾದ ನಂತರ ಹಾಗೂ ಉಳಿದ ಶೇ.50 ಹಣವನ್ನು ಘಟಕಗಳು ಜಿ.ಎಸ್.ಟಿ ಮತ್ತು ಉದ್ಯೋಗ ಆಧಾರ್ ನೋಂದಣಿಗಳನ್ನು ಹೊಂದಿ ಎಫ್.ಎಸ್.ಎಸ್.ಎ.ಐ. ವತಿಯಿಂದ ಪ್ರಮಾಣಿತ ಅನುಸರಣೆಯನ್ನು ಪಡೆದ ನಂತರ ನೀಡಲಾಗುವುದು.
ಅರ್ಜಿಗಳನ್ನು ಸಲ್ಲಿಸುವವರು ಆಹಾರ ತಂತ್ರಜ್ಞಾನ, ಆಹಾರ ಇಂಜಿನಿಯರಿಂಗ್‌ನಲ್ಲಿ ಡಿಪ್ಲೋಮ, ಪದವಿ ಪಡೆದಿರಬೇಕು. ಆಹಾರ ಸಂಸ್ಕರಣ ಕೈಗಾರಿಕೆಗಳಿಗೆ ತಂತ್ರಜ್ಞಾನ ಉನ್ನತೀಕರಣ, ಹೊಸ ಉತ್ಪನ್ನ ಅಭಿವೃದ್ದಿ, ಗುಣಮಟ್ಟದ ಖಾತ್ರಿ, ಆಹಾರ ಭದ್ರತಾ ನಿರ್ವಹಣೆಗಾಗಿ ಸಲಹಾ ಸೇವೆಗಳನ್ನು ಒದಗಿಸಿದ 3 ರಿಂದ 5 ವರ್ಷಗಳ ಅನುಭವವಿರಬೇಕು.
ಆಹಾರ ಸಂಸ್ಕರಣ ಕೈಗಾರಿಕೆ, ಬ್ಯಾಂಕಿಂಗ್, ಡಿಪಿಆರ್ ಸಿದ್ದಪಡಿಸುವಿಕೆ ಹಾಗೂ ತರಬೇತಿಯಲ್ಲಿ ಅನುಭವವುಳ್ಳ ವ್ಯಕ್ತಿಗಳಿಗೆ ಆದ್ಯತೆ ನೀಡಲಾಗುತ್ತದೆ. ಆಸಕ್ತರು ಜೂನ್ 6 ರೊಳಗೆ ಅರ್ಜಿಯನ್ನು ಧಾರವಾಡ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಆಯಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.












Click it and Unblock the Notifications