ಪಿಯುಸಿ ಪಾಸ್ ಆಗಿದ್ಯಾ. ಬೇಡಿಕೆ ಇರುವ ಈ ಕೋರ್ಸ್‌ಗೆ ಅರ್ಜಿ ಹಾಕಿ
ಬೆಂಗಳೂರು, ಸೆಪ್ಟೆಂಬರ್ 17: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದ ಸರ್ಟಿಫಿಕೇಟ್ ಕೋರ್ಸ್‌ಗೆ ಅಧಿಸೂಚನೆ ಹೊರಡಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮತ್ತು ಆಫ್‌ಲೈನ್‌ನ ಈ ಕೋರ್ಸ್‌ಗೆ 7/10/2024ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕಿದೆ. 2024-25ನೇ ಸಾಲಿನ ಪ್ರವೇಶ ಅಧಿಸೂಚನೆ ಇದಾಗಿದ್ದು, ವಿವರಗಳನ್ನು ನೀಡಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗ 2024-25ನೇ ಸಾಲಿಗೆ 6 ತಿಂಗಳ ಆಫ್ ಲೈನ್/ ಆನ್‌ಲೈನ್ ತರಗತಿಗಳ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದ ಸರ್ಟಿಫಿಕೇಟ್ ಕೋರ್ಸ್ ಪಿಯುಸಿ/ 10+2 ತರಗತಿಯಲ್ಲಿ ಉತ್ತಿರ್ಣರಾದ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಪೂರ್ಣಗೊಂಡು, ಅಭ್ಯರ್ಥಿಗಳ ಆಯ್ಕೆಯಾದ ಬಳಿಕ 21/10/2024ರಿಂದ ಕೋರ್ಸ್‌ನ ತರಗತಿಗಳು ಆರಂಭವಾಗಲಿವೆ.

ಸರ್ಟಿಫಿಕೇಟ್ ಕೋರ್ಸ್ ವಿವರ: ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದ ಸರ್ಟಿಫಿಕೇಟ್ ಕೋರ್ಸ್ (Certificate Course in "Library and Information Science). ಅರ್ಜಿ ನಮೂನೆ ಮತ್ತು ಅರ್ಹತೆ, ಪ್ರೋಗ್ರಾಮ್ ಶುಲ್ಕದ ಮಾಹಿತಿಯನ್ನು ವಿಶ್ವವಿದ್ಯಾಲಯದ ವೆಬ್ www.ksrdpru.ac.in ನಲ್ಲಿ ನೋಡಿ ಪ್ರವೇಶ ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.
ಸಾಮಾನ್ಯ ವರ್ಗದ ಅಭ್ಯರ್ಥಿಗಳು ರೂ. 200 ಹಾಗೂ ಪ.ಜಾ/ ಪ.ಪಂಗಡ/ ಪ್ರವರ್ಗ-1/ ವಿಕಲಚೇತನರು ರೂ.100 ಅರ್ಜಿ ಶುಲ್ಕವನ್ನು ಹಣಕಾಸು ಅಧಿಕಾರಿಗಳು, ಕೆ.ಎಸ್.ಆರ್.ಡಿ.ಪಿ.ಆರ್.ಯು. ಗದಗ ಇವರ ಹೆಸರಿಗೆ ಡಿ.ಡಿ ಪಡೆದು, ಡಿ.ಡಿ ಹಿಂಭಾಗದಲ್ಲಿ ಅಭ್ಯರ್ಥಿಯ ಹೆಸರು, ಹಾಗೂ ಮೊಬೈಲ್ ನಂಬರ್ ನಮೂದಿಸಿ, ಭರ್ತಿ ಮಾಡಿ ಅಥವಾ ಅರ್ಜಿ ಶುಲ್ಕವನ್ನು ಆನ್-ಲೈನ್‌ಲ್ಲಿ ಸಹ ಪಾವತಿಸಿ Transaction ID screen shot print-outನ 2 ಪ್ರತಿಗಳನ್ನು ಹಾಗೂ ಸೂಕ್ತ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಯೊಂದಿಗೆ ಲಗತ್ತಿಸಿ, ಅರ್ಜಿಯನ್ನು ಸಲ್ಲಿಸಬೇಕು.
ಅರ್ಜಿಗಳನ್ನು ಕುಲಸಚಿವರು, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಜನರಲ್ ಕಾರ್ಯಪ್ಪ ವೃತ್ತ, ಗದಗ ಅಥವಾ ಗ್ರಾಮ ಗಂಗೋತ್ರಿ ಕೌಶಲ್ಯ ವಿಕಾಸ ಭವನ, ನಾಗಾವಿ ಹತ್ತಿರ, ಗದಗ ಇವರಿಗೆ ಖುದ್ದಾಗಿ/ ಸ್ಪೀಡ್ ಪೋಸ್ಟ್/ ಕೋರಿಯರ್ ಮೂಲಕ ದಿನಾಂಕ 07-10-2024 ಒಳಗಾಗಿ ಸಲ್ಲಿಸಬೇಕು.
ಅಪೂರ್ಣ ಅರ್ಜಿಗಳಿದ್ದಲ್ಲಿ (ಪೂರಕ ದಾಖಲೆಗಳು ಇಲ್ಲದ ಪ್ರಕರಣಗಳಿದ್ದಲ್ಲಿ) ಯಾವುದೇ ಮುನ್ಸೂಚನೆ ನೀಡದೇ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಈ ಕುರಿತು ಹೆಚ್ಚಿನ ಮಾಹಿತಿಗೆ ಸಂಯೋಜಕರನ್ನು ಸಂಪರ್ಕಿಸಬಹುದಾಗಿದೆ. ಮೊಬೈಲ್ ನಂಬರ್ 9035536764. ಪ್ರವೇಶಾತಿ ಮಾಹಿತಿ ಕೇಂದ್ರದ ಸಂಖ್ಯೆ 7975202206/ 775100729.
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸುವ ಕೊನೆಯ ದಿನಾಂಕ 7/10/2024. ತಾತ್ಕಾಲಿಕ ಜೇಷ್ಠತಾ ಪಟ್ಟಿ ಪ್ರಕಟಿಸುವ ದಿನಾಂಕ 9/10/2024, ತಾತ್ಕಾಲಿಕ ಜೇಷ್ಠತಾ ಪಟ್ಟಿಯಲ್ಲಿನ ದೋಷಗಳ ಬಗ್ಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 10/10/2024. ಅಂತಿಮ ಜೇಷ್ಠತಾ ಪಟ್ಟಿ ಪ್ರಕಟಿಸುವ ದಿನಾಂಕ ಹಾಗೂ ಕೌನ್ಸೆಲಿಂಗ್ ಮತ್ತು ಪ್ರವೇಶ ಪ್ರಕ್ರಿಯೆ ಪ್ರಾರಂಭ ಹಾಗೂ ಕೊನೆಯ ದಿನಾಂಕ 14/10/2024 ರಿಂದ 16/10/2024. ನೀರೀಕ್ಷಣಾ ಪಟ್ಟಿ ಪ್ರಕಟಿಸುವ ದಿನಾಂಕ ಹಾಗೂ ಕೌನ್ಸೆಲಿಂಗ್ ಮತ್ತು ಪ್ರವೇಶ ಪ್ರಕ್ರಿಯೆ ಪ್ರಾರಂಭ ಹಾಗೂ ಕೊನೆಯ ದಿನಾಂಕ 18/10/2024 ರಿಂದ 19/10/2024. ತರಗತಿಗಳು ಪ್ರಾರಂಭವಾಗುವ ದಿನಾಂಕ 21/10/2024.
ಕಾಶ್ಮೀರಿ ವಲಸಿಗರು ಮತ್ತು ಕಾಶ್ಮೀರಿ ಪಂಡಿತರು/ ಕಾಶ್ಮೀರಿ ಹಿಂದೂ ಕುಟುಂಬಗಳ ವಲಸೆರಹಿತರು ಕಾಶ್ಮೀರಿ ಕಣಿವೆಯಲ್ಲಿ ವಾಸಿಸುವವರ ಮಕ್ಕಳಿಗೆ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದ ಸರ್ಟಿಫಿಕೇಟ್ ಕೋರ್ಸ UGC ಹಾಗೂ ಭಾರತ ಸರ್ಕಾರದ ಆದೇಶದಂತೆ ಪ್ರವೇಶಾತಿಯಲ್ಲಿ ಮೀಸಲಾತಿ ನೀಡಲಾಗುತ್ತದೆ.












Click it and Unblock the Notifications