ICFRE ನೇಮಕಾತಿ 2021: 48 ಹುದ್ದೆಗಳಿಗೆ ಅರ್ಜಿ ಆಹ್ವಾನ
ನವದೆಹಲಿ, ಆಗಸ್ಟ್ 30: ಭಾರತೀಯ ಅರಣ್ಯ ಇಲಾಖೆ ಸೇವೆಗಳು (ನೇಮಕಾತಿ) (ತಿದ್ದುಪಡಿ) ನಿಯಮಗಳ ಅನ್ವಯ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯಲ್ಲಿನ ಹುದ್ದೆಗಳ ಕುರಿತಂತೆ ಅಧಿಸೂಚನೆ ಹೊರಡಿಸಿದೆ.
ಭಾರತೀಯ ಅರಣ್ಯ ಸಂಶೋಧನಾ ಹಾಗೂ ಶಿಕ್ಷಣ ಕೌನ್ಸಿಲ್ ಸಂಸ್ಥೆಯಲ್ಲಿ ಖಾಲಿ ಇರುವ ಗ್ರೂಪ್ - 'ಎ' ವೃಂದದ 48 ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಸಹಾಯಕ ಸಂರಕ್ಷಣಾಧಿಕಾರಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ, ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿ ಸಲ್ಲಿಸಲು ಅಕ್ಟೋಬರ್ 10, 2021 ಕೊನೆಯ ದಿನವಾಗಿದೆ.
ಸಂಸ್ಥೆ: Indian Council of Forestry Research & Education (ICFRE)
ಒಟ್ಟು ಹುದ್ದೆ: 48
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಹುದ್ದೆ ಹೆಸರು: Conservator of Forest, Dy. Conservator
ಹುದ್ದೆಗಳ ಸಂಖ್ಯೆ
Conservator of Forest: 28
Dy. Conservator:20

ವಯೋಮಿತಿ : ಅರ್ಜಿಯನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು 18 ವರ್ಷ ಪೂರೈಸಿರತಕ್ಕದ್ದು. ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗದವರಿಗೆ 30 ವರ್ಷ, ಪ್ರವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 33 ವರ್ಷ. ಪ.ಜಾ/ಪ.ಪಂ/ಪ್ರವರ್ಗ -1ರ ಅಭ್ಯರ್ಥಿಗಳಿಗೆ 35 ವರ್ಷ. ಹೆಚ್ಚಿನ ಮಾಹಿತಿಗೆ ಅಧಿಸೂಚನೆಯನ್ನು ಪರಿಶೀಲಿಸಿ.
ಅರ್ಜಿ ಶುಲ್ಕ : ಸಾಮಾನ್ಯ ಅರ್ಹತೆ, ಪ್ರವರ್ಗ 2 (ಎ), 2 (ಬಿ), 3 (ಎ), 3 (ಬಿ)ಗೆ ಸೇರಿದ ಅಭ್ಯರ್ಥಿಗಳಿಗೆ 500 ರೂ.
ಅರ್ಜಿ ಶುಲ್ಕವನ್ನು ಡಿಮ್ಯಾಂಡ್ ಡ್ರಾಫ್ಟ್ (ಡಿ.ಡಿ) ಮೂಲಕವೇ ಪಾವತಿಸಬೇಕು.
ಅರ್ಜಿಯ ಪ್ರತಿಯನ್ನು ಮತ್ತು ಶುಲ್ಕ ಸಂದಾಯ ಮಾಡಿದ ಚಲನ್ ವಿವರಗಳನ್ನು ಅಭ್ಯರ್ಥಿಗಳು ತಮ್ಮೊಂದಿಗೆ ಇಟ್ಟುಕೊಳ್ಳಬೇಕು. ಅಯೋಗವು ಅಪೇಕ್ಷಿಸಿದಾಗ ವಿವರಗಳನ್ನು ಹಾಜರುಪಡಿಸಬೇಕು.
ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ.
ಅರ್ಜಿ ಸಲ್ಲಿಸುವ ವಿಧಾನ:
ICFRE ನೇಮಕಾತಿ 2021ಗೆ ಅರ್ಹರಾದ ಅಭ್ಯರ್ಥಿಗಳು ಆಫ್ ಲೈನ್ ಹಾಗೂ ಆನ್ ಲೈನ್ ಎರಡು ಮೂಲಕವೂ ಅರ್ಜಿ ಸಲ್ಲಿಸಬಹುದು.
ನೇರವಾಗಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೆಳಕಂಡ ವಿಳಾಸಕ್ಕೆ ಅರ್ಜಿ
ಸೆಕ್ರೆಟರಿ,
Indian Council of Forestry Research and Education
ಅರಣ್ಯ ಇಲಾಖೆ ಅಂಚೆ ಕಚೇರಿ
ಡೆಹ್ರಾಡೂನ್, ಉತ್ತರಾಖಂಡ್
248006
ಆನ್ ಲೈನ್ ಅರ್ಜಿ ಸಲ್ಲಿಸುವ ವಿಧಾನ:
* ICFRE ಅಧಿಕೃತ ವೆಬ್ ತಾಣಕ್ಕೆ ಭೇಟಿ ನೀಡಿ, ನೇಮಕಾತಿ ಕುರಿತ ಲಿಂಕ್ ಕ್ಲಿಕ್ ಮಾಡಿ
* ನಿಮ್ಮ ಸರಿಯಾದ ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ಐಡಿ ಪ್ರೂಫ್, ವಯೋಮಿತಿ, ವಿದ್ಯಾರ್ಹತೆ ಕುರಿತ ದಾಖಲೆ ಒದಗಿಸಿ
* ಭರ್ತಿಯಾದ ಅರ್ಜಿ ಪ್ರಿಂಟ್ ತೆಗೆದುಕೊಳ್ಳಿ
* ಅರ್ಜಿ ಶುಲ್ಕ ಸಲ್ಲಿಸುವ ಮಾದರಿಯಲ್ಲೇ ಅರ್ಜಿ ಜೊತೆಗೆ ಲಗತ್ತಿಸಿ ಮೇಲ್ಕಂಡ ವಿಳಾಸಕ್ಕೆ ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್ ಮೂಲಕ ಅಕ್ಟೋಬರ್ 10, 2021ರೊಳಗೆ ಕಳಿಸಿ.












Click it and Unblock the Notifications