Apple Layoffs: ಆಪಲ್ ಕಂಪನಿಯ ನೂರಾರು ಉದ್ಯೋಗಿಗಳು ಔಟ್: ಅಪ್ಡೇಟ್
ನವದೆಹಲಿ, ಏಪ್ರಿಲ್ 05: ಕ್ಯಾಲಿಫೋರ್ನಿಯಾದಲ್ಲಿರುವ ಆಪಲ್ ಕಂಪನಿಯು ನೂರಾರು ಉದ್ಯೋಗಿಗಳ ವಜಾಗೊಳಿಸುವ ಮೂಲಕ ಆಘಾತ ನೀಡಿದೆ. ಈ ಮೂಲಕ ಐಟಿ ಕಂಪನಿಗಳ ಉದ್ಯೋಗಿಗಳ ವಜಾ ಪ್ರಕ್ರಿಯೆ ಮತ್ತೆ ಮುಂದುವರಿದಂತಿದೆ.
ಆಪಲ್ ಕಂಪನಿಯು ತನ್ನಲ್ಲಿನ 600 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ್ದು, ಕ್ಯಾಲಿಫೋರ್ನಿಯಾ ಉದ್ಯೋಗ ಅಭಿವೃದ್ಧಿ ಇಲಾಖೆಯೊಂದಿಗೆ ಫೈಲಿಂಗ್‌ಗಳ ಪ್ರಕಾರ ತನ್ನ ಕಾರು ಮತ್ತು ಸ್ಮಾರ್ಟ್‌ವಾಚ್ ಪ್ರದರ್ಶನ ಯೋಜನೆಗಳನ್ನು ಕಂಪನಿ ಮುಂದುವರೆಸದಿರಲು ನಿರ್ಧರಿಸಿದೆ. ಹೀಗಾಗಿ ಉದ್ಯೋಗಿಗಳ ವಜಾಗೊಳಿಸಿದೆ.

ವರ್ಕರ್ ಅಡ್ಜಸ್ಟ್‌ಮೆಂಟ್ ಮತ್ತು ಮರುತರಬೇತಿ ಅಧಿಸೂಚನೆ ಅಥವಾ ವಾರ್ನ್ ಪ್ರೋಗ್ರಾಂ ಅನ್ನು ಅನುಸರಿಸಲು ಎಂಟು ಪ್ರತ್ಯೇಕ ವರದಿಗಳನ್ನು ಆಪಲ್ ಕಂಪನಿಯು ಕ್ಯಾಲಿಫೋರ್ನಿಯಾದಲ್ಲಿ ತನ್ನ ರಾಜ್ಯಕ್ಕೆ ಸಲ್ಲಿಸಿತ್ತು.
ಇತರ ಉದ್ಯೋಗಿಗಳ ಕೆಲಸ ಮುಂದುವರಿಕೆ
ಈ ವಜಾಗೊಳಿಸುವ ಪ್ರಕ್ರಿಯೆಗಳಿಂದ ಪ್ರಭಾವಿತವಾಗಿರುವ ಉದ್ಯೋಗಿಗಳನ್ನು ಒಳಗೊಂಡಿರುವ ಪ್ರತಿ ಕ್ಯಾಲಿಫೋರ್ನಿಯಾ ವಿಳಾಸಕ್ಕೆ ಕಂಪನಿಗಳು ರಾಜ್ಯ ಏಜೆನ್ಸಿಗೆ ವರದಿ ಸಲ್ಲಿಸಬೇಕಿದೆ. ಆಪಲ್ ಇಲ್ಲಿನ ಒಟ್ಟು ಉದ್ಯೋಗಿಗಳ ಪೈಕಿ ಕನಿಷ್ಠ 87 ಜನರು ಅದರ ಮುಂದಿನ ಪೀಳಿಗೆಯ ಅಭಿವೃದ್ಧಿಗೆ ಆಪಲ್ ಸೌಲಭ್ಯಗಳ ಅನುಗುಣವಾದ ಕಾರ್ಯ ನಿರ್ವಹಿಸಿದ್ದಾರೆ. ಇತರರು ಈ ಮೊದಲಿನ ಯೋಜನೆಗೆ ಕೆಲಸ ಮುಂದುವರೆಸಿದ್ದಾರೆ.

ಇದೇ ವರ್ಷ ಫೆಬ್ರವರಿ ಕೊನೆಯ ವಾರ ಆಪಲ್ ಕಂಪನಿಯ ತಂತ್ರಜ್ಞಾನಗಳನ್ನು ಮುನ್ನಡೆಸಲು ಅಥವಾ ಗಣನೀಯವಾಗಿ ಹೊಸ ಕ್ಷೇತ್ರಗಳಿಗೆ ಕಾಯುವ ಉಪಕ್ರಮದ ಭಾಗವಾಗಿ ಪ್ರಮುಖ ಹೊಸ ಯೋಜನೆಗಳನ್ನು, ಆರ್ಥಿಕ ವೆಚ್ಚ ಹೆಚ್ಚಳವಾಗುವ ಯೋಜನೆಗಳನ್ನು ಎರಡೂ ಉಪಕ್ರಮಗಳನ್ನು ಸ್ಥಗಿತಗೊಳಿಸಲು ತೀರ್ಮಾನಿಸಿದೆ. ಆ ಯೋಜನೆ ಉದ್ಯೋಗಿಗಳು ಹೊರ ನಡೆಯುತ್ತಿದ್ದಾರೆ ಎಂದು ವರದಿ ಆಗಿದೆ.
ವೆಚ್ಚದ ಸವಾಲು ಎದುರಿಸುತ್ತಿವೆ ಕಂಪನಿ?
ಯೋಜನೆ ಸ್ಥಗಿತ ಜೊತೆಗೆ ಉದ್ಯೋಗಿ ವಜಾಗೆ ಕಂಪನಿ ಮುಖ್ಯಸ್ಥರ ನಿರ್ದೇಶನ ನೀಡಿದೆ. ಜೊತೆಗೆ ವೆಚ್ಚದ ಕಾಳಜಿಗಳ ಬಗ್ಗೆ ಕಾರ್ಯ ನಿರ್ವಾಹಕರು ಯೋಜನೆ ಅಂತ್ಯಗೊಳಿಸುವ ಜೊತೆಗೆ ವಜಾದ ನಿರ್ಣಯ ಕೈಗೊಂಡಿದ್ದಾರೆ. ಇಂಜಿನಿಯರಿಂಗ್, ಪೂರೈಕೆದಾರ ಮತ್ತು ವೆಚ್ಚದ ಸವಾಲುಗಳಿಂದಾಗಿ ಪ್ರದರ್ಶನ ಕಾರ್ಯಕ್ರಮ ಸ್ಥಗಿತಗೊಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
ವರದಿಗಳ ಪ್ರಕಾರ, ಕ್ಯಾಲಿಫೋರ್ನಿಯಾದ ಸಾಂತ ಕ್ಲಾರಾದಲ್ಲಿರುವ ಆಪಲ್‌ನ ಕಚೇರಿಯಲ್ಲಿ ಈಗಾಗಲೇ ಒಟ್ಟು 371 ಉದ್ಯೋಗಿಗಳನ್ನು ಕೆಲಸದಿಂದ ಬಿಡಿಸಲಾಗಿದೆ. ಇದರೊಂದಿಗೆ ಬೇರೆ ಬೇರೆಯ ಉಪ ಕಚೇರಿಗಳಲ್ಲಿ ಹಲವು ಡಜನ್ ಉದ್ಯೋಗಿಗಳನ್ನು ವಜಗೊಳಿಸಲಾಗಿದೆ.
ಕೆಲವು ಸಂದರ್ಭಗಳಲ್ಲಿ, ಆಪಲ್ ಕಾರ್ ಗುಂಪಿನ ಸದಸ್ಯರನ್ನು ಬೇರೆ ಕಚೇರಿಗಳಿಗೆ ಸ್ಥಳಾಂತರಿಸಲಾಗಿದೆ. ಅಂಧರೆ ಕೃತಕ ಬುದ್ಧಿಮತ್ತೆ ಇಲ್ಲವೇ ವೈಯಕ್ತಿಕ ರೊಬೊಟಿಕ್ಸ್‌ನಲ್ಲಿ ಕೆಲಸ ಮಾಡುವ ಉದ್ಯೋಗಿಗಳನ್ನು ಬೇರೆಡೆ ವರ್ಗಾಯಿಸಲಾಗಿದೆ. ಉದ್ಯೋಗಿಗಳ ವಜಾ ಕುರಿತು ಆಪಲ್ ಕಂಪನಿ ವಕ್ತಾರರು ಉದ್ಯೋಗ ಕಡಿತದಿಂದ ಪ್ರಭಾವಿತರಾದರು.












Click it and Unblock the Notifications