AI: 'ಎಐ'ನಿಂದ ಉದ್ಯೋಗಕ್ಕೆ ಕುತ್ತು ಬರಲ್ಲ: ಹೊಸ ತಂತ್ರಜ್ಞಾನಗಳಿಂದಲೇ 1 ಮಿಲಿಯನ್ ಉದ್ಯೋಗ ಸೃಷ್ಟಿ
ನವದೆಹಲಿ, ಜನವರಿ 01: ತಾಂತ್ರಿಕ ಯುಗದಲ್ಲಿರುವ ಮನುಷ್ಯನಿಗೆ ಕೃತಕ ಬುದ್ಧಿಮತ್ತೆ (AI) ಇನ್ನಿತರ ತಂತ್ರಜ್ಞಾನಗಳಿಂದ ಉದ್ಯೋಗ ಕೊರತೆ ಆಗಬಹದು. ನಮ್ಮ ಜಾಗದಲ್ಲಿ ತಂತ್ರಜ್ಞಾನಗಳು ಬಂದು ಬಿಡುಬಹುದು ಎಂಬ ಆತಂಕ ಇದ್ದೆ ಇದೆ. ಈ ನಡುವೆ ಅದೇ ಎಐ, ಡೇಟಾ ಸೈನ್ಸ್ ಸೇರಿದಂತೆ ವಿವಿಧ ತಂತ್ರಜ್ಞಾನಗಳ ವಲಯದಲ್ಲಿಯೇ ಕೋಟ್ಯಾಂತರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂಬ ಭರವಸೆ ಸಿಕ್ಕಿದೆ.
ಹೌದು, ಕ್ವೆಸ್ ಐಟಿ ಸ್ಟಾಫಿಂಗ್ ವರದಿ ಪ್ರಕಾರ, ಕೃತಕ ಬುದ್ಧಿಮತ್ತೆ (AI), ಡೇಟಾ ಸೈನ್ಸ್, ಸೈಬರ್ ಸೆಕ್ಯುರಿಟಿ, ಕ್ಲೌಡ್ ಕಂಪ್ಯೂಟಿಂಗ್ ಸೇರಿದಂತೆ ಇನ್ನಿತರ ದಯೋನ್ಮುಖ ತಂತ್ರಜ್ಞಾನಗಳಿಂದಲೇ ಮುಂದಿನ ಐದೇ ವರ್ಷದಲ್ಲಿ 1 ಮಿಲಿಯನ್ ಉದ್ಯೋಗಗಳು ಸೃಷ್ಟಿಯಾಗುವ ಸಾಧ್ಯತೆ ಇದೆ.

2030ರ ವೇಳೆಗೆ ಸುಮಾರು 1 ಮಿಲಿಯನ್ ಉದ್ಯೋಗಗಳು ತಾಂತ್ರಿಕ ರಂಗದಲ್ಲಿ ನಿರ್ಮಾಣವಾಗಿ, ನಿರುದ್ಯೋಗ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಈ ಉದಯೋನ್ಮುಖ ತಂತ್ರಜ್ಞಾನಗಳಿಂದ ದೇಶದ ಆರ್ಥಿಕತೆಗೂ ಮಹತ್ವದ ಕೊಡುಗಡೆ ಆ ಹೊತ್ತಿಗೆ ದೊರೆಯಲಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಉದ್ಯೋಗ ಸೃಷ್ಟಿ ಮಾತ್ರವಲ್ಲದೇ ನವೀನ ತಂತ್ರಜ್ಞಾನಗಳಿಂದ ಭಾರತದ ಆರ್ಥಿಕತೆಗೆ 2030 ರಲ್ಲಿಸುಮಾರು $150 ಶತಕೋಟಿಗಿಂತ ಹೆಚ್ಚಿನ ಕೊಡುಗೆ ನಿರೀಕ್ಷೆ ಇದೆ ಎಂದು ಡಿಸೆಂಬರ್ 2024ರಲ್ಲಿ ಪ್ರಕಟಗೊಂಡ ವರದಿಯಿಂದ ಮಾಹಿತಿ ಲಭ್ಯವಾಗಿದೆ.
ಭಾರತದಲ್ಲಿ ಆರ್ಥಿಕತೆ, ಉದ್ಯೋಗ ರಂಗದಲ್ಲಿ ಪರಿವರ್ತನೆ
'ಕ್ವೆಸ್ ಐಟಿ ಸ್ಟಾಪಿಂಗ್' ಸಿಇಒ ಕಪಿಲ್ ಜೋಶಿ ಅವರು ಪ್ರತಿಕ್ರಿಯಿಸಿ, ಭಾರತದಲ್ಲಿ ತಂತ್ರಜ್ಞಾನಗಳು ಉದ್ಯೋಗ ರಂಗದಲ್ಲಿ, ಆಥಿರ್ಕತೆಯಲ್ಲಿ ಮಹತ್ವದ ಪರಿವರ್ತನೆ ತರಲಿವೆ. ಇದಕ್ಕೆ ಭಾರತ ಮುಂದಿನ ವರ್ಷಗಳಲ್ಲಿ ಸಾಕ್ಷಿಯಾಗಲಿದೆ. ಕೃತಕ ಬುದ್ಧಿಮತ್ತೆ ಹಾಗೂ ಎಂಎಲ್ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್ ರೀತಿಯ ಮಹತ್ವದ ತಂತ್ರಜ್ಞಾನ ಎಂಟರ್‌ಪ್ರೈಸ್ ಸಂಪನ್ಮೂಲ ಯೋಜನೆ (ಇಆರ್‌ಪಿ) ಸಹ ವಿಫುಲ ಉದ್ಯೋಗ ಅವಕಾಶ ನೀಡುವ ವಿಶ್ವಾಸ ಮೂಡಿಸಿದೆ ಎಂದು ಹೇಳಿದರು.

ಐಟಿ ಉದ್ಯೋಗಿಗಳ ಸಂಖ್ಯೆ 7.5 ಮಿಲಿಯನ್ ಹೆಚ್ಚಳ
ಹೊಸ ಉದ್ಯೋಗ ಸೃಷ್ಟಿ, ಹಾಲಿ ಐಟಿ ಉದ್ಯೋಗಿಗಳ ಸಂಖ್ಯೆ 2030ರ ವೇಳೆಗೆ ಭಾರತದಲ್ಲಿ 5.4 ಮಿಲಿಯನ್‌ನಿಂದ ಸರಿಸುಮಾರು 7.5 ಮಿಲಿಯನ್‌ಗೆ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಉದ್ಯೋಗ ಸೃಷ್ಟಿಯಲ್ಲಿ ಸುರಕ್ಷಿತ ವಹಿವಾಟುಗಳು, ವಂಚನೆ ತಡೆ, ಬ್ಯಾಂಕಿಂಗ್, ಹಣಕಾಸು ಸೇವೆಗಳು ಹಾಗೂ ವಿಮೆ ಇನ್ನಿತರ ಸೈಬರ್ ಭದ್ರತಾ ತಂತ್ರಜ್ಞಾನಗಳು ಮಹತ್ವದ ಪಾತ್ರ ವಹಿಸಲಿವೆ ಎಂದರು.
ವಿಶ್ವದಾದ್ಯಂತ ಬ್ಲಾಕ್‌ಚೈನ್ ನೇಮಕಾತಿಗೆ ಬೇಡಿಕೆ ಇದೆ. ಇದರಲ್ಲಿ 2021ರಿಂದ ವರ್ಷದಿಂದ ವರ್ಷಕ್ಕೆ ನೇಮಕಾತಿಯಲ್ಲಿ ಹೆಚ್ಚಾಗುತ್ತಲೇ ಬಂದಿದೆ. 2021 ಮತ್ತು 2023 ರ ನಡುವೆ 60ರಷ್ಟು ಏರಿಕೆ ಆಗಿದೆ. 2023 ರಲ್ಲಿ ಶೇಕಡಾ 76 ರಷ್ಟು ನೇಮಕಾತಿ ಪ್ರಮಾಣ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.












Click it and Unblock the Notifications