Agniveer Recruitment 2023; ವಾಯುಪಡೆಯಲ್ಲಿ ಅಗ್ನಿವೀರರ ನೇಮಕಕ್ಕೆ ಅರ್ಹರಿಂದ ಅರ್ಜಿ ಆಹ್ವಾನ
ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ವತಿಯಿಂದ ಭಾರತೀಯ ವಾಯುಸೇನೆ ಅವಿವಾಹಿತ ಯುವಕ ಯುವತಿಯರಿಗೆ ವಿಜ್ಞಾನ ಮತ್ತು ವಿಜ್ಞಾನೇತರ ವಿಭಾಗದ ಹುದ್ದೆಗಳಿಗೆಗ ಕೂಡಲೇ ಅರ್ಜಿ ಸಲ್ಲಿಸಿದೆ.
ಬೆಂಗಳೂರು, ಮಾರ್ಚ್ 21: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ವತಿಯಿಂದ ಭಾರತೀಯ ವಾಯುಪಡೆಯಯಲ್ಲಿ ಅವಿವಾಹಿತ ಯುವಕ ಯುವತಿಯರಿಗೆ ವಿಜ್ಞಾನ ಮತ್ತು ವಿಜ್ಞಾನೇತರ ವಿಭಾಗದಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ.
ಈ ನೇಮಕಾತಿ ಪ್ರಕ್ರಿಯೆಯು ಅಗ್ನಿಪಥ್ ಯೋಜನೆಯಡಿ ನಡೆಯಲಿದೆ. ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಈ ಕೂಡಲೇ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಂಡು ನಿಗದಿತ ದಾಖಲೆಗಳ ಸಹಿತ ಅರ್ಜಿಗಳನ್ನು ಸಲ್ಲಿಸಬಹುದು.

ಈ ಹುದ್ದೆಗಳನ್ನು ಅಲಂಕರಿಸಲು ಇಚ್ಛಿಸುವವರು ಅರ್ಜಿ ಸಲ್ಲಿಕೆಗೂ ಮುನ್ನ ಮೊದಲು ವಿಧಾನ, ವಯೋಮಿತಿ, ಶೈಕ್ಷಣಿಕ ಅರ್ಹತೆ ಇನ್ನಿತರ ಅಂಶಗಳನ್ನು ಇಲ್ಲಿ ತಿಳಿಯಿರಿ.
ಶೈಕ್ಷಣಿಕ ವಯೋಮಿತಿ
ದ್ವಿತೀಯ ಪಿ.ಯು.ಸಿ ತರಗತಿಯಲ್ಲಿ ಗಣಿತ, ಭೌತಶಾಸ್ತ್ರ ಹಾಗೂ ಇಂಗ್ಲೀಷ್ ವಿಷಯ ಗಳನ್ನೊಳಗೊಂಡಂತೆ ಶೇಕಡಾ 50 ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು. ಇಂಗ್ಲೀಷ್ ವಿಷಯದಲ್ಲಿ ಕನಿಷ್ಠ 50 ಅಂಕ ಪಡೆದಿರಬೇಕು. ಇಲ್ಲವೇ 3 ವರ್ಷಗಳ ಡಿಪ್ಲೋಮಾ ಇನ್ ಇಂಜಿನಿಯರಿಂಗ್ ನಲ್ಲಿ ಶೇಕಡ 50 ಅಂಕ ಸಹಿತ ಉತ್ತೀರ್ಣರಾಗಿರಬೇಕು.

ಈ ಡಿಪ್ಲೋಮ್ ಇಂಜಿನಿಯರಿಂಗ್‌ನಲ್ಲಿ ಮೆಕಾನಿಕಲ್ / ಎಲೆಕ್ಟ್ರಿಕ್ / ಎಲೆಕ್ಟ್ರಾನಿಕ್ಸ್/ ಕಂಪ್ಯೂಟರ್ ಸೈನ್ಸ್/ ಇನಫರ್ಮೇಷನ್ ಟೆಕ್ನಾಲಜಿ/ಆಟೋಮೊಬೈಲ್/ಇನ್ ಸ್ಟ್ರೊಮೆಂಟ್ ಟಕ್ನಾಲಜಿ ವೃತ್ತಿಗಳಲ್ಲಿ ಪದವಿ ಪಡೆದವರು ಅರ್ಜಿ ಅದರೊಂದಿಗೆ ಇಂಗ್ಲೀಷ್ ವಿಷಯದಲ್ಲಿ ಕನಿಷ್ಠ 50 ಅಂಕ ಕಡ್ಡಾಯವಾಗಿ ಪಡೆದಿರಬೇಕು. ಎರಡು ವರ್ಷಗಳ ವೃತ್ತಿಪರ ಕೋರ್ಸ್ ಗಳಲ್ಲಿ ವೃತ್ತಿಯೇತರ ವಿಷಯಗಳಾದ ಗಣಿತ ಹಾಗೂ ಭೌತಶಾಸ್ತ್ರ ವಿಷಯಗಳೊಂದಿಗೆ ಶೇಕಡ 50 ಅಂಕ ಪಡೆದ ಅಭ್ಯರ್ಥಿಗಳು ಉತ್ತೀರ್ಣವಾಗಿರಬೇಕು.
ಇನ್ನೂ ವಿಜ್ಞಾನೇತರ ಸ್ಟ್ರೀಮ್ ಅಭ್ಯರ್ಥಿಗಳಿಗೆ ಕೆಲವು ಷರತ್ತು ವಿಧಿಸಲಾಗಿದೆ. ಅವುಗಳೆಂದರೆ ಅವರು, ದ್ವಿತೀಯ ಪಿಯುಸಿ ಯಲ್ಲಿ ಶೇಕಡ 50 ಅಂಕ ಸಹಿತ ಪಾಸಾಗಿರಬೇಕು. ಇಂಗ್ಲೀಷ್ ವಿಷಯದಲ್ಲಿ ಕನಿಷ್ಠ 50 ಅಂಕ ಪಡೆದಿರಬೇಕು ಇಲ್ಲವಾದಲ್ಲಿ ಎರಡು ವರ್ಷಗಳ ವೃತ್ತಿಪರ ಕೋರ್ಸ್ ಗಳಲ್ಲಿ ಶೇಕಡ 50 ಅಂಕಗಳನ್ನು ಪಡೆದು ಪಾಸಾಗಿರಬೇಕು.
ವಯೋಮಿತಿ ಎಷ್ಟಿರಬೇಕು?
ಅಗ್ನಿಪಥ್ ಯೋಜನೆಯಡಿ ಅಗ್ನಿವೀರರಾಗಲು ಬಯಸುವ ಅಭ್ಯರ್ಥಿಗಳು 2002ರ ಡಿಸೆಂಬರ್ 26 ರಿಂದ 2006 ಜೂನ್ 06 ನಡುವೆ ಜನಿಸಿದವರಾಗಿರಬೇಕು. ಇನ್ನೂ ದೇಹದಾರ್ಡತೆ ನೋಡುವುದಾದರೆ, ಪರುಷರು 152.5 ಸೆ.ಮೀ ಹಾಗೂ ಮಹಿಳೆಯರು 152 ಸೆಂ.ಮೀ ಎತ್ತವಿರಬೇಕು ಮತ್ತು ಎತ್ತರಕ್ಕೆ ಅನುಗುಣವಾದ ತೂಕವನ್ನು ಹೊಂದಿರುವುದು ಕಡ್ಡಾಯವಾಗಿದೆ.
ಅಭ್ಯರ್ಥಿಳ ಆಯ್ಕೆ ವಿಧಾನ
ನೇಮಕಾತಿ ಪ್ರಕಿಯು ಎರಡು ಹಂತದ ಆನ್ ಲೈನ್ ಪರೀಕ್ಷೆಗಳು, ದೈಹಿಕ ಸಾಮರ್ಥ್ಯ ಪರೀಕ್ಷೆ, ಅಡಾಪ್ಟೀವ್ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆಗಳನ್ನು ಒಳಗೊಂಡಿರುತ್ತದೆ. ಆಸಕ್ತರು ವೆಬ್ ಸೈಟ್ https://agnipathvayu.cdac.in ನಲ್ಲಿ ಇದೇ ತಿಂಗಳ ಮಾರ್ಚ್ 31 ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲಿರುವ ಎಲ್ಲರಿಗೂ ಅರ್ಜಿಯ ಶುಲ್ಕ 250 ನಿಗದಿಗೊಳಿಸಲಾಗಿತ್ತು. ಅದನ್ನು ನೀವು ಆನ್‌ಲೈನ್ ಮೂಲಕ ಪಾವತಿಸಬಹುದು.
ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ http://careerindianairforce.cdac.in ನಲ್ಲಿ ನೀಡಬಹುದು ಅಥವಾ ಉಪ ಪ್ರಾದೇಶಿಕ ಉದ್ಯೋಗ ವಿನಿಮಯ ಕಛೇರಿ, ಕೆ.ಜಿ.ರಸ್ತೆ, ಬೆಂಗಳೂರು - 560009 ಇಲ್ಲಿಗೆ ಭೇಟಿ ನೀಡಬಹುದು ಎಂದು ಉಪ ಪ್ರಾದೇಶಿಕ ಉದ್ಯೋಗ ವಿನಿಮಯ ಕಛೇರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











Click it and Unblock the Notifications