ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದಲ್ಲಿ ಹಲವು ಹುದ್ದೆಗಳಿವೆ
ಬೆಂಗಳೂರು, ಆಗಸ್ಟ್ 12: ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ(ಎಎಐ) ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ 2021-22ನೇ ಸಾಲಿನ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಕುರಿತಂತೆ ಅಧಿಕೃತ ವೆಬ್‌ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ವಿವಿಧ ಹಿರಿಯ ಸಹಾಯಕ ಹುದ್ದೆಗಳಿಗೆ ಆಯ್ಕೆಯಾಗ ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ಆಗಸ್ಟ್ 31, 2021 ರೊಳಗೆ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ.
ಸಂಸ್ಥೆಯ ಹೆಸರು: ಏರ್ ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಎಐ)
ಹುದ್ದೆ: Senior Assistant
ಒಟ್ಟು ಹುದ್ದೆ: ವಿವಿಧ
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 31, 2021
ಹುದ್ದೆಗಳ ವಿವರ:
ಹಿರಿಯ ಸಹಾಯಕ (ಆಪರೇಷನ್ಸ್): 14 ಹುದ್ದೆ
ಹಿರಿಯ ಸಹಾಯಕ (ಫೈನಾನ್ಸ್): 06 ಹುದ್ದೆ
ಹಿರಿಯ ಸಹಾಯಕ (ಎಲೆಕ್ಟ್ರಾನಿಕ್ಸ್): 09 ಹುದ್ದೆ

ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, ಡಿಪ್ಲೋಮಾ ಪಡೆದಿರಬೇಕು.
ಹಿರಿಯ ಸಹಾಯಕ (ಆಪರೇಷನ್ಸ್): ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, ಮ್ಯಾನೇಜ್ಮೆಂಟ್ ವಿಷಯದಲ್ಲಿ ಡಿಪ್ಲೋಮಾ ಹಾಗೂ ಲಘು ವಾಹನದ ಲೈಸನ್ಸ್.
ಹಿರಿಯ ಸಹಾಯಕ (ಫೈನಾನ್ಸ್): ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಕಾಂ ಪದವಿ, ಕಂಪ್ಯೂಟರ್ ಸೈನ್ಸ್ ಕೋರ್ಸ್ (3 ರಿಂದ 6 ತಿಂಗಳ) ಪ್ರಮಾಣ ಪತ್ರ.
ಹಿರಿಯ ಸಹಾಯಕ (ಎಲೆಕ್ಟ್ರಾನಿಕ್ಸ್): ಸರ್ಕಾರದಿಂದ ಮಾನ್ಯತೆ ಪಡೆದ ತಾಂತ್ರಿಕ ವಿಶ್ವವಿದ್ಯಾಲಯದಿಂದ ಡಿಪ್ಲೋಮಾ ಇನ್ ಎಲೆಕ್ಟ್ರಾನಿಕ್ಟ್ರ್ಸ್/ ಟೆಲಿ ಕಮ್ಯೂನಿಕೇಷನ್/ ರೇಡಿಯೋ ಇಂಜಿನಿಯರಿಂಗ್.
ವಯೋಮಿತಿ:
ಹಿರಿಯ ಸಹಾಯಕ (ಆಪರೇಷನ್ಸ್), ಹಿರಿಯ ಸಹಾಯಕ (ಫೈನಾನ್ಸ್) ಹಾಗೂ ಹಿರಿಯ ಸಹಾಯಕ (ಎಲೆಕ್ಟ್ರಾನಿಕ್ಸ್) ಮೂರು ಹುದ್ದೆಗಳಿಗೆ ಜೂನ್ 30, 2021ರ ಅನ್ವಯ ಅಭ್ಯರ್ಥಿಗಳ ವಯೋಮಿತಿ ಗರಿಷ್ಠ 50 ವರ್ಷ ಮೀರಬಾರದು.
ಅರ್ಹರಿಗೆ ನಿಯಮಾವಳಿಯಂತೆ ವಯೋಮಿತಿಯಲ್ಲಿ ವಿನಾಯಿತಿ ಸಿಗಲಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗೆ 3 ವರ್ಷ, ಹಿಂದುಳಿದ ವರ್ಗ(ಕೆನೆಪದರ ರಹಿತ) 3 ವರ್ಷ, ದಿವ್ಯಾಂಗರಿಗೆ 10 ವರ್ಷ ಮತ್ತು ಮಾಜಿ ಯೋಧರಿಗೆ 5 ವರ್ಷ ವಯೋಮಿತಿಯಲ್ಲಿ ವಿನಾಯಿತಿ ಸಿಗಲಿದೆ.
ಸಂಬಳ ನಿರೀಕ್ಷೆ:
ಹಿರಿಯ ಸಹಾಯಕ (ಆಪರೇಷನ್ಸ್): 36,000 ರು ನಿಂದ 1,10,000 ರು ತನಕ
ಹಿರಿಯ ಸಹಾಯಕ (ಫೈನಾನ್ಸ್): 36,000 ರು ನಿಂದ 1,10,000 ರು ತನಕ
ಹಿರಿಯ ಸಹಾಯಕ (ಎಲೆಕ್ಟ್ರಾನಿಕ್ಸ್): 36,000 ರು ನಿಂದ 1,10,000 ರು ತನಕ
ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಡ್ರೈವಿಂಗ್ ಟೆಸ್ಟ್, ದೈಹಿಕ ಸಾಮರ್ಥ್ಯ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ
ಹಿರಿಯ ಸಹಾಯಕ (ಆಪರೇಷನ್ಸ್), ಹಿರಿಯ ಸಹಾಯಕ (ಫೈನಾನ್ಸ್) ಹಾಗೂ ಹಿರಿಯ ಸಹಾಯಕ (ಎಲೆಕ್ಟ್ರಾನಿಕ್ಸ್) ಮೂರು ಹುದ್ದೆಗಳಿಗೆ ವಿದ್ಯಾರ್ಹತೆ ಜೊತೆಗೆ 2 ವರ್ಷ ಸಂಬಂಧಪಟ್ಟ ಕ್ಷೇತ್ರದಲ್ಲಿ ಎರಡು ವರ್ಷಗಳ ಅನುಭವವಿದ್ದವರಿಗೆ ಆದ್ಯತೆ ನೀಡಲಾಗುತ್ತದೆ.
ಅರ್ಜಿ ಶುಲ್ಕ: ಯಾವುದೇ ಶುಲ್ಕವಿಲ್ಲ
ಪ್ರಮುಖ ದಿನಾಂಕ:
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 31-08-2021
ಅರ್ಜಿ ಸಲ್ಲಿಸುವುದು ಹೇಗೆ:
ಎಎಐನ ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಆಯ್ಕೆಯಾದ ಅಭ್ಯರ್ಥಿಗಳ ಪೈಕಿ ಬಹುತೇಕರಿಗೆ ಈಶಾನ್ಯ ಭಾಗದ ಎಎಐ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಇತ್ತೀಚೆಗೆ ಈಶಾನ್ಯ ಭಾರತದ ಆದ್ಯತೆಯ ಪ್ರದೇಶಗಳಲ್ಲಿ ಬಲಿಷ್ಠ ವೈಮಾನಿಕ ಸಂಪರ್ಕವನ್ನು ಸ್ಥಾಪಿಸುವ ಭಾರತ ಸರ್ಕಾರದ ಉದ್ದೇಶ ಪೂರ್ಣಗೊಂಡಿದೆ. ಈವರೆಗೆ 361 ಮಾರ್ಗಗಳು ಮತ್ತು 59 ವಿಮಾನ ನಿಲ್ದಾಣಗಳನ್ನು (5 ಹೆಲಿಪೋರ್ಟ್ ಮತ್ತು 2 ಜಲ ಏರೋಡ್ರಮ್ ಸೇರಿದಂತೆ) ಉಡಾನ್ ಯೋಜನೆ ಅಡಿಯಲ್ಲಿ ಕಾರ್ಯಾರಂಭಿಸಲಾಗಿದೆ. ಈವರೆಗೆ ವಿಮಾನಯಾನ ಸಂಪರ್ಕ ಹೊಂದಿಲ್ಲದಿರದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಲಿಷ್ಠ ವೈಮಾನಿಕ ಸಂಪರ್ಕವನ್ನು ಒದಗಿಸುವುದು ಯೋಜನೆಯ ಉದ್ದೇಶವಾಗಿದ್ದು, ಭಾರತೀಯ ವೈಮಾನಿಕ ಮಾರುಕಟ್ಟೆಯಲ್ಲಿ ಹೊಸ ಪ್ರಾದೇಶಿಕ ವಲಯಕ್ಕೆ ಅಡಿಪಾಯ ಹಾಕಿದೆ.












Click it and Unblock the Notifications