₹1.13 ಕೋಟಿ ಸಂಬಳದ ಉದ್ಯೋಗ ಗಿಟ್ಟಿಸಿಕೊಂಡ ವಿದ್ಯಾರ್ಥಿ, ಈತನ ವಿದ್ಯಾಭ್ಯಾಸ ಏನು ಗೊತ್ತಾ?
ಮಧ್ಯಪ್ರದೇಶ, ನವೆಂಬರ್, 15: ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ದೊಡ್ಡ ದೊಡ್ಡ ಮಟ್ಟದ ಸಾಧನೆ ಮಾಡಿರುವ ಉದಾಹರಣೆಗಳು ಇವೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿ 1.13 ಕೋಟಿ ರೂಪಾಯಿ ಸಂಬಳದ ಉದ್ಯೋಗ ಗಿಟ್ಟಿಸಿಕೊಂಟು ಇತರ ವಿದ್ಯಾರ್ಥಿಗಳಿಗೂ ಮಾದರಿಯಾಗಿದ್ದಾನೆ. ಇನ್ನೂ ಈತನ ವಿದ್ಯಾಭ್ಯಾಸ ಕೇಳಿದರೆ ನೀವು ಶಾಕ್ ಆಗುವುದಂತೂ ಗ್ಯಾರಂಟಿ.
ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ದೇವಿ ಅಹಲ್ಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಾಹಿಲ್ ಅಲಿ, ನೆದರ್‌ಲ್ಯಾಂಡ್‌ನ ತಂತ್ರಜ್ಞಾನ ಸಂಸ್ಥೆ ಅಡ್ಯೆನ್‌ನಿಂದ ವಾರ್ಷಿಕ 1.13 ಕೋಟಿ ರೂಪಾಯಿ ಪ್ಯಾಕೇಜ್ (ಸಂಬಳ) ಪಡೆಯುವ ಮೂಲಕ ತನ್ನ ಕಾಲೇಜಿನಲ್ಲಿ ದಾಖಲೆಗಳನ್ನು ಮುರಿದಿದ್ದಾರೆ. ಡಿಎವಿವಿಯ ಐಐಪಿಎಸ್ ಕಾಲೇಜಿನಲ್ಲಿ ಎಂಟೆಕ್ ಪದವಿಯನ್ನು ಪೂರ್ಣಗೊಳಿಸಿದ ಸಾಹಿಲ್ ಫೆಬ್ರವರಿ 2023ರಲ್ಲಿ ಅಡ್ಯೆನ್‌ಗೆ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಸೇರಿದರು.

ಸಾಹಿಲ್ ಇಂದೋರ್‌ನ ದೇವಿ ಅಹಲ್ಯಾ ವಿಶ್ವವಿದ್ಯಾಲಯದ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಸ್ಟಡೀಸ್‌ನಿಂದ 5 ವರ್ಷಗಳ ಇಂಟಿಗ್ರೇಟೆಡ್ ಎಂಟೆಕ್ ಕೋರ್ಸ್ ಮಾಡಿದ್ದಾರೆ. ಇದೇ ವರ್ಷದ ಜನವರಿಯಲ್ಲಿ ನಡೆದ ಪ್ಲೇಸ್‌ಮೆಂಟ್ ಸೆಷನ್‌ನಲ್ಲಿ ನೆದರ್‌ಲ್ಯಾಂಡ್‌ನ ಕಂಪನಿಯೊಂದು 1.13 ಕೋಟಿ ರೂಪಾಯಿ ಪ್ಯಾಕೇಜ್‌ನಲ್ಲಿ ಅವರಿಗೆ ಉದ್ಯೋಗ ನೀಡಿದೆ.
ಇದು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯೊಬ್ಬ ಪಡೆದ ಅತಿದೊಡ್ಡ ಪ್ಯಾಕೇಜ್ ಆಗಿದೆ. ಈ ಮೊದಲು ಇಲ್ಲಿ ಗರಿಷ್ಠ ದಾಖಲೆ 63 ಲಕ್ಷ ರೂಪಾಯಿ ವಿಶ್ವವಿದ್ಯಾನಿಲಯದ ಉಪಕುಲಪತಿ ಸೇರಿದಂತೆ ಎಲ್ಲಾ ಶಿಕ್ಷಕರು ಮತ್ತು ನೌಕರರು ಸಾಹಿಲ್‌ಗೆ ಈ ದಾಖಲೆಯ ಕೊಡುಗೆಯಿಂದ ತುಂಬಾ ಸಂತೋಷಪಟ್ಟಿದ್ದಾರೆ.
ಸಾಹಿಲ್ ಅವರು ಈ ಪ್ಯಾಕೇಜ್ ಪಡೆಯಲು ತುಂಬಾ ಶ್ರಮಿಸಿದ್ದರು. ಅವರ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಅವರು ಪ್ಲೇಸ್‌ಮೆಂಟ್‌ಗೆ ಮೊದಲು ಅನೇಕ ಸ್ಥಳಗಳಲ್ಲಿ ಇಂಟರ್ನ್‌ಶಿಪ್ ಮಾಡಿದ್ದರು. ಇದರಿಂದಾಗಿ ಅವರು ತಮ್ಮ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಂಡಿದ್ದರು ಎಂದು ಹೇಳಲಾಗಿದೆ. ಉತ್ತಮ ಪ್ಯಾಕೇಜ್‌ಗಾಗಿ ಐಐಟಿ, ಐಐಎಂ ಕಡೆಗೆ ಓಡುವ ಅಗತ್ಯವಿಲ್ಲ, ಆದರೆ ಸ್ವಂತ ಕೌಶಲ್ಯದಿಂದ ಕೆಲಸ ಮಾಡುವ ಅವಶ್ಯಕತೆಯಿದೆ ಎಂಬುದನ್ನು ಸಾಹಿಲ್‌ನ ಈ ಯಶಸ್ಸು ಸಾಬೀತುಪಡಿಸಿದೆ.












Click it and Unblock the Notifications