ಸರ್ಕಾರಿ ಪ್ರೌಢ ಶಾಲೆಗಳಿಗೆ 750 ಅತಿಥಿ ಶಿಕ್ಷಕರ ನೇಮಕಕ್ಕೆ ಒಪ್ಪಿಗೆ

ಬೆಂಗಳೂರು, ಡಿಸೆಂಬರ್ 20; ಸಾರ್ವಜನಿಕ ಶಿಕ್ಷಣ ಇಲಾಖೆ 2022-23ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರೌಢ ಶಾಲೆಗಳಲ್ಲಿನ ಖಾಲಿ ಇರುವ ವಿಷಯ ಶಿಕ್ಷಕರ ಹುದ್ದೆಗಳಿಗೆ ಎದುರಾಗಿ ತಾತ್ಕಾಲಿಕವಾಗಿ ಹೆಚ್ಚುವರಿ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಅನುಮತಿ ನೀಡಿದೆ.

ನಿರ್ದೇಶಕರು (ಪ್ರೌಢ ಶಿಕ್ಷಣ) ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ಇವರು ಈ ಕುರಿತು ಅತೀ ತುರ್ತು ಆದೇಶವನ್ನು ಹೊರಡಿಸಿದ್ದಾರೆ. ಕೆಲವು ಜಿಲ್ಲಾ ಉಪನಿರ್ದೇಶಕರು (ಆ) ತಮ್ಮ ಜಿಲ್ಲೆಯಲ್ಲಿ ಖಾಲಿ ಹುದ್ದೆಗಳಿಗೆ ಅತಿಥಿ ಶಿಕ್ಷಕರ ಬೇಡಿಕೆಯನ್ನು ಸಲ್ಲಿಸಿರುತ್ತಾರೆ. ಇದನ್ನು ಉಲ್ಲೇಖಿಸಿ ಈ ಆದೇಶ ಹೊರಡಿಸಲಾಗಿದೆ.

2022-23ನೇ ಸಾಲಿನ ಸರ್ಕಾರಿ ಪ್ರೌಢಶಾಲೆಗಳಲ್ಲಿನ ಖಾಲಿ ಇರುವ ವಿಷಯ ಶಿಕ್ಷಕರ ಹುದ್ದೆಗಳಿಗೆ ಎದುರಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿಯಿಂದ ನೇರ ನೇಮಕಾತಿ ಮೂಲಕ ಭರ್ತಿ ಮಾಡುವವರೆಗೆ ಅಥವಾ ಪ್ರಸಕ್ತ ಶೈಕ್ಷಣಿಕ ಸಾಲಿನ ಅಂತ್ಯದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಈಗಾಗಲೇ ಒಟ್ಟು 5159 ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ಗೌರವಧನದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಸರ್ಕಾರದ ಅನುಮತಿ ನೀಡಲಾಗಿರುತ್ತದೆ.

govt

ಈಗ ಸರ್ಕಾರದಿಂದ 750 ಹೆಚ್ಚುವರಿಯಾಗಿ ಪ್ರೌಢ ಶಾಲೆಗಳಲ್ಲಿನ ವಿಷಯ ಶಿಕ್ಷಕರ ಖಾಲಿ ಹುದ್ದೆಗಳಿಗೆ ಎದುರಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಅನುಮತಿ ನೀಡಲಾಗಿರುತ್ತದೆ. 16/12/2022ರಂದು ಇದ್ದಂತೆ ಈಗಾಗಲೇ ಹಂಚಿಕೆ ಮಾಡಿರುವ ಅತಿಥಿ ಶಿಕ್ಷಕರ ಹುದ್ದೆಗಳನ್ನು ಹೊರತುಪಡಿಸಿ ಒಟ್ಟು 3,646 ಹುದ್ದೆಗಳು ಖಾಲಿ ಇರುತ್ತವೆ.

ಈ ಹುದ್ದೆಗಳ ಸಂಖ್ಯೆಗೆ ಒಟ್ಟು 750 ಅತಿಥಿ ಶಿಕ್ಷಕರನ್ನು ಸರ್ಕಾರವು ಒದಗಿಸಿರುವುದರಿಂದ ಆಯಾ ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳ ಅನುಪಾತದಂತೆ ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿದೆ.

ಈ ಮೇಲಿನ ಎಲ್ಲಾ ಅಂಶಗಳನ್ನು ಪರಿಗಣಿಸಿ, ಇಲಾಖೆಯ ನಿಯಮಗಳು ಹಾಗೂ ಸುತ್ತೋಲೆಗಳ ಮಾರ್ಗದರ್ಶನದಡಿ ಹೆಚ್ಚುವರಿ 750 ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಸರ್ಕಾರದ ಸಹಮತಿಯಂತೆ ಉಲ್ಲೇಖ (1) ಮತ್ತು (2)ರ ಪತ್ರದಲ್ಲಿ ವಿಧಿಸಿರುವ ಷರತ್ತುಗಳನ್ನೊಳಗೊಂಡಂತೆ ಜಿಲ್ಲೆಗಳಿಗೆ ಅತಿಥಿ ಶಿಕ್ಷಕರನ್ನು ಹಂಚಿಕೆ ಮಾಡಿ ಅನುಮತಿ ನೀಡಲಾಗಿದೆ.

ಪ್ರಸ್ತುತ ಹಂಚಿಕೆಯಾದ ಸಂಖ್ಯೆಯಂತೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡು ತಾಲ್ಲೂಕುವಾರು ಹುದ್ದೆಗಳ ವಿವರಗಳನ್ನು ನಮೂನೆಯಲ್ಲಿ ತಾಲ್ಲೂಕು ಪಂಚಾಯಿತಿವಾರು ಹಂಚಿಕೆ ಮಾಡಲಾದ ಅತಿಥಿ ಶಿಕ್ಷಕರ ಮಾಹಿತಿ, ಅನುದಾನದ ವಿವರವನ್ನು ಸೇರಿಸಿ ಹಾಗೂ ಉಳಿಕೆ ಅತಿಥಿ ಶಿಕ್ಷಕರ ಮಾಹಿತಿಯನ್ನು ದೃಢೀಕೃತ 23/12/2022ರೊಳಗೆ ಸಲ್ಲಿಕೆ ಮಾಡಲು ಸೂಚನೆ ಸುತ್ತೋಲೆಯಲ್ಲಿ ಸೂಚನೆ ಸೂಚಿಸಲಾಗಿದೆ.

order

ಒಂದು ವೇಳೆ ಯಾವುದೇ ಜಿಲ್ಲೆಗೆ ಪ್ರಸ್ತುತ ಹಂಚಿಕೆ ಮಾಡಿದ ಅತಿಥಿ ಶಿಕ್ಷಕರುಗಳ ಸಂಖ್ಯೆಯಲ್ಲಿ ಯಾವುದೇ ಸಂಖ್ಯೆಯ ಅತಿಥಿ ಶಿಕ್ಷಕರು ಪ್ರಸ್ತುತ ಅವಶ್ಯಕವಿಲ್ಲದಿದ್ದಲ್ಲಿ, ಸದರಿ ಸಂಖ್ಯೆಯನ್ನು ಅದ್ಯರ್ಪಣೆ ಮಾಡಲಾಗಿದೆ ಎಂದು 23/12/2022ರ ಒಳಗಾಗಿ ನಮೂನೆ - 2ರಲ್ಲಿ ಸಲ್ಲಿಸಬೇಕು.

ಕ್ರಮ ಸಂಖ್ಯೆ, ತಾಲೂಕಿನ ಹೆಸರು, ತಾಲೂಕು ಪಂಚಾಯಿತಿ ಹೆಸರು, ಹಂಚಿಕೆ ಮಾಡಲಾದ ಅತಿಥಿ ಶಿಕ್ಷಕರ ಸಂಖ್ಯೆ, ಅನುದಾನ (ಲಕ್ಷಗಳಲ್ಲಿ) ತಿಂಗಳಿಗೆ ರೂ. 10,500ರಂತೆ ಡಿಸೆಂಬರ್ 2022ರಿಂದ ಮಾರ್ಚ್ 2023ರ ತನಕ ಎಷ್ಟು ತಿಂಗಳು? ಎಂದು ನಮೂನೆಯಲ್ಲಿ ಕಳಿಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+