5,500,000,00,000 ಬಂಡವಾಳ ಹೂಡಿಕೆ ಯೋಜನೆಗಳು ಜಾರಿ: 06ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿ: ಎಂಬಿ ಪಾಟೀಲ್

ಬೆಂಗಳೂರು, ಆಗಸ್ಟ್ 03: ಜಾಗತಿಕ ಹೂಡಿಕೆದಾರರ ಸಮಾವೇಶ (#GIM2025)ದಲ್ಲಿ ಕರ್ನಾಟಕವು ₹10.27 ಲಕ್ಷ ಕೋಟಿ ಹೂಡಿಕೆ ಬದ್ಧತೆಗಳನ್ನು ಪಡೆದುಕೊಂಡಿದೆ. ಇದರಲ್ಲಿನ ಹೆಚ್ಚಿನ ಹೂಡಿಕೆ 5.5 ಲಕ್ಷ ಕೋಟಿ ಹೂಡಿಕೆ ಉತ್ಪಾದನಾ ಕ್ಷೇತ್ರದಲ್ಲಿ ಆಗಿದೆ. ಬೆಂಗಳೂರಿನ ಹೊರ ಭಾಗದಲ್ಲೂ ಅನೇಕ ಕೈಗಾರಿಕೆ ಬೆಳವಣಿಗೆಗೆ ಈ ಹೂಡಿಕೆ ಸಹಕಾರಿಯಾಗಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಫಾಟೀಲ್ ಅವರು ಮಾಹಿತಿ ನೀಡಿದ್ದಾರೆ. ಹಾಗಾದ್ರೆ ಯಾವೆಲ್ಲ ಕಂಪನಿಗಳು ಕರ್ನಾಟಕಕ್ಕೆ ಬಂದಿವೆ, ಲಕ್ಷಾಂತರ ಉದ್ಯೋಗ ಸೃಷ್ಟಿಯಾಗಲಿವೆ ಎಂಬ ಮಾಹಿತಿ ಇಲ್ಲಿದೆ.

ಕರ್ನಾಟಕ ಸರ್ಕಾರದೊಂದಿಗೆ ಹೂಡಿಕೆ ಸಮಾವೇಶದಲ್ಲಿ ವಿವಿಧ ಕಂಪನಿಗಳು ಮಾಡಿಕೊಂಡ ಈ ಒಪ್ಪಂದಗಳಲ್ಲಿ ಕೇವಲ 6 ತಿಂಗಳ ಅವಧಿಯೊಳಗೆ ಶೇಕಡಾ 62ರಷ್ಟು ಸಾಕಾರಗೊಳ್ಳುತ್ತಿರುವುದು ನಮ್ಮ ಆಡಳಿತದ ಕಾರ್ಯಕ್ಷಮತೆಗೆ ಸ್ಪಷ್ಟ ಸಾಕ್ಷಿಯಾಗಿದೆ. ಮುಖ್ಯವಾಗಿ ಈ ಕೆಲಸಗಳು, ಕೇವಲ ಬೆಂಗಳೂರಿಗೆ ಸೀಮಿತವಾಗದೆ, ರಾಜ್ಯದ ಸಮತೋಲಿತ ಅಭಿವೃದ್ಧಿಗೆ ಈ ಹೂಡಿಕೆಗಳು ತಾಂತ್ರಿಕವಾಗಿ ನೆರವಾಗುವಂತೆ ಮಾಡಲು ನಾವು ನಿರಂತರ ಶ್ರಮಿಸುತ್ತಿದ್ದೇವೆ ಎಂದು ಅವರು ವಿವರಿಸಿದರು.

5 5 Lakh Crore investment projects Implementation in Karnataka 6 00 000 More jobs creates MB Patil

06ಲಕ್ಷಕ್ಕೂ ಅಧಿಕ ಹುದ್ದೆ ಸೃಷ್ಟಿ

ಸಿಎಂ ಸಿದ್ದರಾಮಯ್ಯ ಹಾಗೂ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರ ನೇತೃತ್ವದಲ್ಲಿ ಈ ಹೂಡಿಕೆ ಯೋಜನೆಗಳು ಬದ್ಧತೆಗಳು ಅನುಷ್ಠಾನಗೊಳ್ಳುವಂತೆ ಮಾಡಲಾಗುತ್ತಿದೆ. ಒಪ್ಪಂದ ಮಾಡಿಕೊಂಡ ಕಂಪನಿಗಳ ಪೈಕಿ 'ಕ್ರೋನೆಸ್, ಸಂವರ್ಧನ ಮದರ್‌ಸನ್, ಎಪ್ಸಿಲಾನ್, ಎಎಸ್‌ಎಂ ಟೆಕ್ನಾಲಜಿಸ್, EMMVEE, ಶಿನ್‌ಡೆಂಜನ್, ಶ್ರೀಸೀಮೆಂಟ್, ನೈಡೆಕ್, ಟಾಟಾ ಅಡ್ವಾನ್ಸ್‌ಡ ಸಿಸ್ಟಮ್, ಯುನಿವರ್ಸಿಟಿ ಆಫ್ ಲೈವರ್‌ಪೂಲ್, ಫಾಕ್ಸ್‌ಕಾನ್, ಈ ಹೂಡಿಕೆಗಳ ಪೈಕಿ ಶೇಕಡಾ 75ರಷ್ಟು ಹೂಡಿಕೆ ಬೆಂಗಳೂರಿನ ಹೊರ ಭಾಗದಲ್ಲಿ ಆಗಿವೆ. 06ಲಕ್ಷಕ್ಕೂ ಅಧಿಕ ಹುದ್ದೆಗಳು ಸೃಷ್ಟಿಯಾಗಲಿವೆ. ಕರ್ನಾಟಕ ಎಲ್ಲರನ್ನು ಒಳಗೊಂಡ ಸಮತೋಲಿತ ಬೆಳವಣಿಗೆಯತ್ತ ಮುನ್ನಡೆಯುತ್ತಿದೆ ಎಂದು ಸಚಿವರು ವಿಡಿಯೋ ಪೋಸ್ಟ್ ಮಾಡಿಕೊಂಡಿದ್ದಾರೆ.

ಜಗತ್ತಿನೊಂದಿಗೆ ಕರ್ನಾಟಕದ ಸ್ಪರ್ಧೆ: ಎಂಬಿ ಪಾಟೀಲ್

ಕರ್ನಾಟಕವನ್ನು ಜಾಗತಿಕ ಉತ್ಪಾದನಾ ತಾಣವನ್ನಾಗಿ ರೂಪಿಸುವತ್ತ ನಮ್ಮ ಸರ್ಕಾರ ವಿನೂತನ ಯೋಜನೆಗಳನ್ನು ನೀಡುತ್ತಲೇ ಬಂದಿದೆ. ಇದರ ಪರಿಣಾಮ ಬಂಡವಾಳ ಆಕರ್ಷಣೆ ಮತ್ತು ಹೂಡಿಕೆಗೆ ಉತ್ತೇಜನ ಸಿಕ್ಕಿದ್ದು ರಾಜ್ಯದ ಕೈಗಾರಿಕಾ ವಲಯ ಪ್ರಗತಿಯ ಪಥದಲ್ಲಿದೆ.

ಐಟಿ, ಏರೋಸ್ಪೇಸ್ ಮತ್ತು ಡಿಫೆನ್ಸ್, ಮಷಿನ್ ಟೂಲ್ಸ್, ESDM ಕ್ಷೇತ್ರಗಳಲ್ಲಿ ಪಾರಮ್ಯ ಸಾಧಿಸಿರುವ ನಮ್ಮ ರಾಜ್ಯವು ಸ್ಮಾರ್ಟ್ ಪೋನ್ ತಯಾರಿಕೆ ವಲಯದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆ ಹಿಮ್ಮೆಟ್ಟಿಸಿ ಬಂಡವಾಳ ಸೆಳೆಯಲು ಸಜ್ಜಾಗಿದೆ. ಸ್ಮಾರ್ಟ್‌ಫೋನ್ ತಯಾರಿಕೆ ಸೇರಿದಂತೆ ವಿವಿಧ ಕೈಗಾರಿಕೆಗಳಿಗೆ ರಿಯಾಯಿತಿ ನೀಡುವ ಸಂಬಂಧ ವಿನೂತನ ನೀತಿ ರೂಪಿಸಲಾಗುತ್ತಿದೆ. ಈ ಮೂಲಕ ಬೇರೆ ರಾಜ್ಯಗಳೊಂದಿಗೆ ರಾಜ್ಯ ಸ್ಪರ್ಧಿಸಿದೇ ರಾಷ್ಟ್ರಮಟ್ಟದಲ್ಲಿ ಸ್ಪರ್ಧೆ ಸಕಾರಾತ್ಮಕ ಪೈಪೋಟಿ ನೀಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+