KAS Recurutiment: ಸಂದರ್ಶನಕ್ಕೆ ಅಂಕಗಳು ನಿಗದಿ, ವಿವರ
ಬೆಂಗಳೂರು, ಫೆಬ್ರವರಿ 25; ಕರ್ನಾಟಕ ಸರ್ಕಾರದ ಹಣಕಾಸು ಇಲಾಖೆ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕಾತಿಗೆ ಒಪ್ಪಿಗೆ ಕೊಟ್ಟಿದೆ. ಒಟ್ಟು 384 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಈ ಹುದ್ದೆಗಳ ಭರ್ತಿಗೆ ಈಗ ಸಂದರ್ಶನಕ್ಕೆ ಅಂಕಗಳನ್ನು ನಿಗದಿ ಮಾಡಲಾಗಿದೆ.
ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ವಿಧಾನಸಭೆ ಕಲಾಪದಲ್ಲಿ ಮಾಹಿತಿ ನೀಡಿದ್ದಾರೆ. ವಿಠ್ಠಲ ಸೋಮಣ್ಣ ಹಲಗೇಕರ್ ಕೇಳಿದ ಪ್ರಶ್ನೆಗೆ ಉತ್ತರ ನೀಡುವಾಗ ಸಂದರ್ಶನದ ಅಂಕಗಳ ಕುರಿತು ಹೇಳಿಕೆ ನೀಡಿದ್ದಾರೆ.

ಎಷ್ಟು ಅಂಕಗಳು ನಿಗದಿ?; ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡುವಾಗ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 384 ಕೆಎಎಸ್ ಹುದ್ದೆಗಳ ನೇಮಕಾತಿ ಪರೀಕ್ಷೆಯ ಸಂದರ್ಶನಕ್ಕೆ 25 ಅಂಕಗಳನ್ನು ನಿಗದಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಈ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಒಂದು ವರ್ಷದ ಕಾಲಮಿತಿ ನಿಗದಿ ಮಾಡಲಾಗಿದೆ. ಈ ನೇರ ನೇಮಕಾತಿ ಪ್ರಕ್ರಿಯೆ ಒಟ್ಟು 3 ಹಂತಗಳನ್ನು ಒಳಗೊಂಡಿದೆ. ಪೂರ್ವಭಾವಿ ಪರೀಕ್ಷೆಗೆ 400 ಅಂಕಗಳನ್ನು ನಿಗದಿಗೊಳಿಸಲಾಗಿದೆ.
ಮುಖ್ಯ ಪರೀಕ್ಷೆ 1,250 ಅಂಕಗಳಿಗೆ ನಡೆಯಲಿದೆ. ಸಂದರ್ಶನ 15 ಅಂಕಗಳಿಗೆ ಇರುತ್ತದೆ. ಪೂರ್ವಭಾವಿ ಪರೀಕ್ಷೆಯಲ್ಲಿ ಅರ್ಹತೆಗಳಿಸುವ ಅಭ್ಯರ್ಥಿಗಳಿಗೆ ನಡೆಸುವ ಮುಖ್ಯ ಪರೀಕ್ಷೆ ಮತ್ತು ಸಂದರ್ಶನ ಸೇರಿ ಒಟ್ಟು 1,275 ಅಂಕಗಳು ಇರುತ್ತವೆ.
ಯಾವ-ಯಾವ ಇಲಾಖೆ?; ಕೆಎಎಸ್ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆಯನ್ನು ಕೆಪಿಎಸ್‌ಸಿ ನಡೆಸಲಿದೆ. ಈಗಾಗಲೇ ಡಿ. ಚಂದ್ರಕಲಾ, ಸರ್ಕಾರದ ಅಧೀನ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಸೇವೆಗಳು-7) ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಕಾರ್ಯದರ್ಶಿಗಳಿಗೆ ಪ್ರಕ್ರಿಯೆ ಆರಂಭಿಸಲು ಒಪ್ಪಿಗೆ ನೀಡಿ ಪತ್ರವನ್ನು ಬರೆದಿದ್ದಾರೆ.
ಗ್ರೂಪ್-ಎ ಮತ್ತು ಗ್ರೂಪ್-ಬಿ ಎಂದು ಹುದ್ದೆಗಳನ್ನು ವರ್ಗೀಕರಣ ಮಾಡಲಾಗಿದೆ. ಗ್ರೂಪ್-ಎ ವಿಭಾಗದಲ್ಲಿ ಸಹಾಯಕ ಆಯುಕ್ತರು (ಕಿರಿಯ ಶ್ರೇಣಿ). ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಒಟ್ಟು 40. ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು. ವಾಣಿಜ್ಯ ತೆರಿಗೆ ಇಲಾಖೆಯ ಒಟ್ಟು 41. ಸಹಾಯಕ ನಿರ್ದೇಶಕರು. ಖಜಾನೆ ಇಲಾಖೆಯ ಒಟ್ಟು 2 ಹುದ್ದೆ ಭರ್ತಿ ಮಾಡಲಾಗುತ್ತದೆ.
ಕಾರ್ಯ ನಿರ್ವಾಹಕ ಅಧಿಕಾರಿ/ ಸಹಾಯಕ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಒಟ್ಟು 40. ಡಿವೈಎಸ್‌ಪಿ. ಒಳಾಡಳಿತ ಇಲಾಖೆಯ ಒಟ್ಟು 9. ಸಹಾಯಕ ನಿರ್ದೇಶಕರು ಗ್ರೇಡ್-1. ಸಮಾಜ ಕಲ್ಯಾಣ ಇಲಾಖೆಯ ಒಟ್ಟು 20. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ/ ಸಹಾಯಕ ನಿರ್ದೇಶಕರು/ ಪ್ರಾಂಶುಪಾಲರು (ಪಿಇಟಿಸಿ) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಒಟ್ಟು 7 ಹುದ್ದೆ ಭರ್ತಿಯಾಗಲಿದೆ.
ಗ್ರೂಪ್-ಬಿ ವೃಂದದಲ್ಲಿ ತಹಶೀಲ್ದಾರ್ (ಗ್ರೇಡ್-2) ಕಂದಾಯ ಇಲಾಖೆಯ ಒಟ್ಟು 51. ವಾಣಿಜ್ಯ ತೆರಿಗೆ ಅಧಿಕಾರಿ, ವಾಣಿಜ್ಯ ತೆರಿಗೆ ಇಲಾಖೆಯ ಒಟ್ಟು 59. ಕಾರ್ಮಿಕ ಅಧಿಕಾರಿ, ಕಾರ್ಮಿಕ ಇಲಾಖೆಯ ಒಟ್ಟು 4. ಸಹಾಯಕ ಅಧೀಕ್ಷಕರು. ಒಳಾಡಳಿತ ಇಲಾಖೆ (ಕಾರಾಗೃಹ)ಯ ಒಟ್ಟು 3 ಹುದ್ದೆಗಳನ್ನು ತುಂಬಲಾಗುತ್ತದೆ.
ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಸಹಕಾರ ಇಲಾಖೆಯ ಒಟ್ಟು 12. ಸಹಾಯಕ ನಿರ್ದೇಶಕರು, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಒಟ್ಟು 9. ಅಬಕಾರಿ ಉಪ ಅಧೀಕ್ಷಕರು, ಆರ್ಥಿಕ ಇಲಾಖೆ (ಅಬಕಾರಿ)ಯ ಒಟ್ಟು 10. ಉದ್ಯೋಗಾಧಿಕಾರಿ. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಒಟ್ಟು 3 ಹುದ್ದೆ ಭರ್ತಿಯಾಗಲಿದೆ.
ಸಹಾಯಕ ನಿರ್ದೇಶಕರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಒಟ್ಟು 4. ಮುಖ್ಯಾಧಿಕಾರಿ (ಗ್ರೇಡ್-1) ನಗರಾಭಿವೃದ್ಧಿ ಇಲಾಖೆಯ ಒಟ್ಟು 1. ಸಹಾಯಕ ಖಜನಾಧಿಕಾರಿ. ಆರ್ಥಿಕ ಇಲಾಖೆ (ಖಜಾನೆ)ಯ ಒಟ್ಟು 46 ಹುದ್ದೆ ಭರ್ತಿ.
ಸಹಾಯಕ ನಿರ್ದೇಶಕರು. ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಒಟ್ಟು 9. ಸಹಾಯಕ ನಿರ್ದೇಶಕರು. ಪ್ರವಾಸೋದ್ಯಮ ಇಲಾಖೆಯ ಒಟ್ಟು 2. ಶಾಖಾಧಿಕಾರಿ ಕರ್ನಾಟಕ ಸರ್ಕಾರದ ಸಚಿವಾಲಯದ ಒಟ್ಟು 5. ಸಹಾಯಕ ನಿರ್ದೇಶಕರು (ಗ್ರೇಡ್-2). ಸಮಾಜ ಕಲ್ಯಾಣ ಇಲಾಖೆಯ ಒಟ್ಟು 7 ಸ್ಥಾನ ಭರ್ತಿಯಾಗಲಿದೆ.












Click it and Unblock the Notifications