ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

297 ಸಿಬ್ಬಂದಿಯನ್ನು ಕೆಲಸದಿಂದ ತೆಗೆದ ಪಿಟಿಐ, ಅ. 1ಕ್ಕೆ ಪ್ರತಿಭಟನೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 30: ಸುದ್ದಿಮನೆಯವರೇ ಸುದ್ದಿ ಆಗಿರುವ ವರದಿ ಇದು. ವಿವಿಧ ಕಂಪನಿಗಳ ಪಿಂಕ್ ಸ್ಲಿಪ್ ಸರಣಿಯನ್ನು ಬರೆದು, ಪ್ರಸಾರ ಮಾಡಿದ್ದನ್ನು ನೋಡಿರುತ್ತೀರಿ. ಇದೀಗ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ಶನಿವಾರದಂದು 297 ಸಿಬ್ಬಂದಿಯನ್ನು ವೆಚ್ಚ ಕಡಿತದ ಭಾಗವಾಗಿ ಕೆಲಸದಿಂದ ತೆಗೆದಿದೆ.

ಈ ವಿಚಾರವನ್ನು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾದ ಮುಖ್ಯ ಆಡಳಿತಾಧಿಕಾರಿ ಎಂ.ಆರ್.ಮಿಶ್ರಾ ಉದ್ಯೋಗಿಗಳಿಗೆ ಪತ್ರ ಬರೆದು ತಿಳಿಸಿದ್ದು, ತಕ್ಷಣದಿಂದಲೇ ಅನ್ವಯ ಆಗುವಂತೆ ಕೆಲಸದಿಂದ ತೆಗೆಯಲಾಗಿದೆ. ಉದ್ಯೋಗಿಗಳಿಗೆ ಬಾಕಿ ಇರುವ ಮೊತ್ತದ ಮಾಹಿತಿಯನ್ನು ಪೋಸ್ಟ್ ಮೂಲಕ ರವಾನಿಸಲಾಗಿದೆ. ಈ ಮಾಹಿತಿ ಪಿಟಿಐ ವೆಬ್ ಸೈಟ್ ನಲ್ಲೂ ಲಭ್ಯವಿದೆ ಎಂದು ತಿಳಿಸಿದ್ದಾರೆ.

297 PTI employees retrenchment all over India

ಪತ್ರಕರ್ತರಿಗಾಗಿ 'ಮಾಧ್ಯಮ ಸಂಜೀವಿನಿ' ಯೋಜನೆಗೆ ಸರ್ಕಾರ ಆದೇಶ ಪತ್ರಕರ್ತರಿಗಾಗಿ 'ಮಾಧ್ಯಮ ಸಂಜೀವಿನಿ' ಯೋಜನೆಗೆ ಸರ್ಕಾರ ಆದೇಶ

ಈ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಉದ್ಯೋಗಿಗಳು, ಅಕ್ಟೋಬರ್ 1ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6ರ ತನಕ ದೇಶದಾದ್ಯಂತ ಇರುವ ಪಿಟಿಐ ಕೇಂದ್ರಗಳಲ್ಲಿ ಸಭೆ ಹಾಗೂ ಧರಣಿಗಳನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಪಿಟಿಐ ಆಡಳಿತ ವರ್ಗದ ಏಕಪಕ್ಷೀಯ ನಿರ್ಧಾರವನ್ನು ತಕ್ಷಣದಿಂದಲೇ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

English summary
297 PTI employees retrenchment all over India on September 29th. Employees call for dharna on October against this decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X