'18 ಸಾವಿರ ಪೊಲೀಸ್ ಕಾನ್‌ ಸ್ಟೆಬಲ್ ಹುದ್ದೆಗಳ ನೇಮಕಾತಿಗೆ ಸರ್ಕಾರ ಒಪ್ಪಿಗೆ'

ಬೆಂಗಳೂರು, ಡಿಸೆಂಬರ್ 23 : 'ಶೀಘ್ರವೇ 18 ಸಾವಿರ ಪೊಲೀಸ್ ಕಾನ್‌ ಸ್ಟೆಬಲ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು' ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಶುಕ್ರವಾರ ಬೆಂಗಳೂರಿನ ವೈಟ್‌ಫೀಲ್ಡ್ ಬಳಿ ಇರುವ ಕಾಡುಗುಡಿ ಹಾಗೂ ನಾಗರಬಾವಿಯಲ್ಲಿ ಪೊಲೀಸ್ ವಸತಿ ಸಮುಚ್ಚಯ ಕಾಮಗಾರಿಗೆ ಚಾಲನೆ ನೀಡಿ ಬಳಿಕ ಮಾತನಾಡಿದ ರಾಮಲಿಂಗಾರೆಡ್ಡಿ, "ರಾಜ್ಯದಲ್ಲಿ 18 ಸಾವಿರ ಪೊಲೀಸ್ ಕಾನ್‌ ಸ್ಟೆಬಲ್ ಗಳನ್ನು ನೇಮಕ ಮಾಡಲು ಸರ್ಕಾರ ಒಪ್ಪಿಗೆ ನೀಡಿದ್ದು, ಶೀಘ್ರವೇ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಹೇಳಿದರು.

18 thousand police constable appoints soon says minister Ramalinga Reddy

ಯಾದಗಿರಿ, ಕಲಬುರಗಿ ಸೇರಿದಂತೆ ರಾಜ್ಯದಲ್ಲಿ ಕಾನ್‌ ಸ್ಟೆಬಲ್ ಗಳಿಗಾಗಿ 11 ಸಾವಿರ ವಸತಿ ಗೃಹಗಳ ನಿರ್ಮಾಣವಾಗಲಿದೆ. ಜೊತೆಗೆ 786 ಸಬ್‌ ಇನ್‌ಸ್ಪೆಕ್ಟರ್ ಮನೆ ನಿರ್ಮಿಸಲಾಗುತ್ತದೆ ಎಂದರು.

ನಗರದಲ್ಲಿ ಒಟ್ಟು ಏಳು ಕಡೆಗಳಲ್ಲಿ ಪೊಲೀಸ್ ವಸತಿ ಸಮುಚ್ಛಯ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ನಾಲ್ಕು ವರ್ಷದಲ್ಲಿ ಒಟ್ಟು 2,782 ಮನೆಗಳನ್ನು ನಿರ್ಮಿಸಿ, ಹಂಚಿಕೆ ಮಾಡಿದ್ದೇವೆ. ಮೂರನೇ ಹಂತದಲ್ಲಿ 4,760 ಕಾನ್‌ ಸ್ಟೆಬಲ್ ಗಳಿಗೆ, 192 ಸಬ್‌ಇನ್‌ಸ್ಪೆಕ್ಟರ್ ಗಳಿಗೆ ಮನೆ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+