ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿ: 2013ರ ಚುನಾವಣೆಯಲ್ಲಿ ಗೆದ್ದವರು, ಬಿದ್ದವರು

By Sachhidananda Acharya
|
Google Oneindia Kannada News

ಕರಾವಳಿ ಕರ್ನಾಟಕದ ವಿಶಿಷ್ಟ ಜಿಲ್ಲೆ ಉಡುಪಿ. ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾಗಿದ್ದ ಉಡುಪಿಯನ್ನು 1997ರಲ್ಲಿ ಆಡಳಿತ ದೃಷ್ಟಿಯಿಂದ ಪ್ರತ್ಯೇಕ ಜಿಲ್ಲೆಯನ್ನಾಗಿ ವಿಭಜನೆ ಮಾಡಲಾಯಿತು.

ದ್ವೈತ ಸಿದ್ಧಾಂತದ ಪ್ರವರ್ತಕ ಆಚಾರ್ಯ ಮಧ್ವರು ಶ್ರೀಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪನೆಗೈದ ಸ್ಥಳ ಉಡುಪಿ. ಈ ಪುಣ್ಯಕ್ಷೇತ್ರ ಧಾರ್ಮಿಕವಾಗಿ ವಿಶ್ವಮಾನ್ಯವಾಗಿದ್ದು ಮಾತ್ರವಲ್ಲ, ಇಲ್ಲಿನ ಮಣಿಪಾಲ ವೈದ್ಯಕೀಯ ಶಿಕ್ಷಣ ರಂಗದಲ್ಲಿಯೂ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ.

ದೇಗುಲಗಳ ನಾಡು ಉಡುಪಿ ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಸಮಸ್ಯೆಗಳುದೇಗುಲಗಳ ನಾಡು ಉಡುಪಿ ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಸಮಸ್ಯೆಗಳು

ಎಸ್ಸೆಸ್ಸೆಲ್ಸಿ ಪರೀಕ್ಷೆಯೇ ಆಗಲಿ, ಪಿಯುಸಿ ಪರೀಕ್ಷೆಯೇ ಆಗಲಿ ಪ್ರತಿವರ್ಷ ಉಳಿದೆಲ್ಲ ಜಿಲ್ಲೆಗಳನ್ನು ಹಿಂದಿಕ್ಕಿ ನಂಬರ್ ವನ್ ಪಟ್ಟ ಅಲಂಕರಿಸುವ ಉಡುಪಿ ರಾಜಕೀಯಕ್ಕೆ ತನ್ನದೇ ಆದ ಇತಿಹಾಸವಿದೆ. ವಿ.ಎಸ್. ಆಚಾರ್ಯ, ಯು.ಆರ್. ಸಭಾಪತಿ , ಮನೋರಮಾ ಮಧ್ವರಾಜ್ ರಂಥಹ ಘಟಾನುಘಟಿ ರಾಜಕಾರಣಿಗಳು ಈ ಜಿಲ್ಲೆಯಿಂದ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

ರಾಜಕೀಯವಾಗಿ ಉಡುಪಿಯಲ್ಲಿ 5 ವಿಧಾನಸಭಾ ಕ್ಷೇತ್ರಗಳಿವೆ. 2013ರಲ್ಲಿ ಇಲ್ಲಿ ಚುನಾವಣೆ ನಡೆದಾಗ ಗೆದ್ದವರು ಯಾರು? ಪ್ರಬಲ ಸ್ಪರ್ಧೆ ನೀಡಿಯೂ ಎಡವಿ ಬಿದ್ದವರು ಯಾರು? ಯಾರಿಗೆ ಎಷ್ಟು ಮತ? ಮುಂತಾದ ವಿವರಗಳು ಇಲ್ಲಿವೆ...

Udupi district 2013 assembly election results
English summary
Udupi is the Coastal Karnataka district. Countdown begins for Karnataka assembly elections 2018. Here are the infographics of Udupi district 2013 assembly election results.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X