ಇಂಜಿನಿಯರಿಂಗ್ ಓದಬಯಸುವ ಬಡ ವಿದ್ಯಾರ್ಥಿನಿಯರಿಗಾಗಿ 'ಉಡಾನ್'
ಇಂಜಿನಿಯರಿಂಗ್ ಓದಲು ಬಯಸುವ ಪ್ರತಿಭಾವಂತ ವಿದ್ಯಾರ್ಥನಿಯರಿಗೆ ಪ್ರವೇಶ ಪರೀಕ್ಷೆಗೆ ತಯಾರಿ ಮಾಡುವ ಉದ್ದೇಶದಿಂದ, ಉಚಿತವಾಗಿ ತರಬೇತಿ ನೀಡುವ 'ಉಡಾನ್' ಎಂಬ ವಿಶೇಷ ಕಾರ್ಯಕ್ರಮವನ್ನು ಕೇಂದ್ರ ಸರಕಾರ ಆರಂಭಿಸಿದೆ.
ಕೇಂದ್ರೀಯ ವಿದ್ಯಾಲಯ, ರಾಷ್ಟ್ರೀಯ ವಿದ್ಯಾಲಯ, ಮಾನ್ಯತೆ ಪಡೆದ ಯಾವುದೇ ಬೋರ್ಡ್ ನ ಸರಕಾರಿ ಶಾಲೆ, ಸಿಬಿಎಸ್ಇ ಮಾನ್ಯತೆ ಇರುವ ಖಾಸಗಿ ಶಾಲೆಯಲ್ಲಿ XIನೇ ತರಗತಿಯಲ್ಲಿ ಓದುತ್ತಿರುವ ಎಲ್ಲ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
6 ಲಕ್ಷಕ್ಕಿಂತ ಕಡಿಮೆ ಆದಾಯವಿರುವ ಕುಟುಂಬದ, ಹನ್ನೊಂದನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರ ಪ್ರತಿಭೆಯ ಆಧಾರದ ಮೇಲೆ ಮತ್ತು ಅವರು ತರಬೇತಿಗಾಗಿ ಆಯ್ದುಕೊಳ್ಳುವ ನಗರದ ಆಧಾರದ ಮೇಲೆ ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಲಾಗುತ್ತದೆ.
ಈ ವಿದ್ಯಾರ್ಥಿನಿಯರು ಅರ್ಹತೆ ಗಳಿಸಲು ಎಸ್ಸೆಸ್ಸೆಲ್ಸಿಯಲ್ಲಿ ಕನಿಷ್ಠ ಶೇ.70ರಷ್ಟು ಅಂಕ ಗಳಿಸಿರಬೇಕು. ಅದರಲ್ಲಿಯೂ ವಿಜ್ಞಾನ ಮತ್ತು ಗಣಿತದಲ್ಲಿ ಕನಿಷ್ಠ ಶೇ.80ರಷ್ಟು ಅಂಕ ಪಡೆದಿರಬೇಕು. ಸಿಜಿಪಿಎ ಅನುಸರಿಸುತ್ತಿರುವ ಬೋರ್ಡ್ ನಲ್ಲಿ ಕನಿಷ್ಠ 8 ಮತ್ತು ವಿಜ್ಞಾನ ಮತ್ತು ಗಣಿತದಲ್ಲಿ ಕನಿಷ್ಠ 9 ಜಿಪಿಎ ಅಂಕ ಗಳಿಸಿರಬೇಕು.













Click it and Unblock the Notifications