ಮತ್ತೆ ಏರಿದ ಪೆಟ್ರೋಲ್ ಬೆಲೆ; ರಾಜ್ಯದಲ್ಲಿ ಎಷ್ಟಾಗಿದೆ ಇಂಧನ ದರ?

ಬೆಂಗಳೂರು, ಜುಲೈ 17: ಮೂರು ದಿನಗಳಿಂದ ಸ್ಥಿರತೆ ಕಾಯ್ದುಕೊಂಡಿದ್ದ ಪೆಟ್ರೋಲ್ ಬೆಲೆ ಶನಿವಾರ ಮತ್ತೆ ಏರಿಕೆ ಕಂಡಿದೆ. ಜುಲೈ 17ರಂದು ದೇಶಾದ್ಯಂತ ಪೆಟ್ರೋಲ್ ಬೆಲೆಯಲ್ಲಿ 30 ಪೈಸೆ ಏರಿಕೆ ಮಾಡಲಾಗಿದ್ದು, ಈ ಮೂಲಕ ಜುಲೈ ತಿಂಗಳಿನಲ್ಲಿ ಒಟ್ಟು ಹತ್ತು ಬಾರಿ ಇಂಧನ ಬೆಲೆ ಏರಿಕೆಯಾದಂತಾಗಿದೆ. ಡೀಸೆಲ್‌ ಬೆಲೆಯಲ್ಲಿ ಯಾವುದೇ ಏರಿಕೆಯಾಗಿಲ್ಲ.

ಜುಲೈ 15ರಂದು ಪೆಟ್ರೋಲ್ ಬೆಲೆ ಸರಾಸರಿ 35 ಪೈಸೆ ಪ್ರತಿ ಲೀಟರ್, ಡೀಸೆಲ್ ಬೆಲೆ 15ಪೈಸೆ ಪ್ರತಿ ಲೀಟರ್‌ನಂತೆ ಏರಿಕೆಯಾಗಿತ್ತು. ಇದೀಗ ಜುಲೈ 17ರಂದು ಪೆಟ್ರೋಲ್ ಬೆಲೆಯಲ್ಲಿ ಮತ್ತೆ 30 ಪೈಸೆ ಹೆಚ್ಚಳ ಮಾಡಲಾಗಿದೆ.

ಈ ಬೆಲೆ ಏರಿಕೆಯೊಂದಿಗೆ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 105.25 ರೂಪಾಯಿಗೆ ಮುಟ್ಟಿದೆ. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಪೆಟ್ರೋಲ್ ಬೆಲೆ 110 ರೂಪಾಯಿ ಆಗಿದ್ದು, ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ 113.12 ರೂಪಾಯಿಗೆ ತಲುಪಿದೆ.

Petrol, Diesel Rates Raised on July 17 Across Karnataka

ಕಚ್ಚಾತೈಲ ಬೆಲೆ ಮೇ 2020ರಲ್ಲಿ 31 ಯುಎಸ್ ಡಾಲರ್ ಇದ್ದಿದ್ದು ಈಗ ಸರಾಸರಿ 75 ಡಾಲರ್ ಆಗಿದೆ. ಭಾರತದಲ್ಲಿ ಕೇಂದ್ರ ಸರ್ಕಾರ ಕೂಡ ಪೆಟ್ರೋಲ್ ಮೇಲೆ 13 ರೂಪಾಯಿ, ಡೀಸೆಲ್ ಮೇಲೆ 16 ರೂಪಾಯಿ ಅಬಕಾರಿ ಸುಂಕ ಹೆಚ್ಚಳ ಮಾಡಿದೆ.

ಪೆಟ್ರೋಲ್ ಪ್ರತಿ ಲೀಟರ್‌ಗೆ 106 ರೂ ದಾಟಿದ ಜಿಲ್ಲೆಗಳು: ಬೆಂಗಳೂರಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 105.25 ರೂಪಾಯಿಗೆ ತಲುಪಿದೆ. ಡೀಸೆಲ್ ದರವು ಪ್ರತಿ ಲೀಟರ್‌ಗೆ 95.26 ರೂಪಾಯಿಗೆ ಮುಟ್ಟಿದೆ. ಬಳ್ಳಾರಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 106.97 ರೂ ಇದೆ. ಚಿತ್ರದುರ್ಗದಲ್ಲಿ ಪೆಟ್ರೋಲ್ ಬೆಲೆ 107.11 ರೂ ಇದ್ದು, ರಾಜ್ಯದಲ್ಲೇ ಅತ್ಯಧಿಕವಾಗಿದೆ. ಚಿಕ್ಕಮಗಳೂರು, ದಾವಣಗೆರೆ, ಕೊಪ್ಪಳ, ಕೊಡಗು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲೂ ಬೆಲೆ 106 ರೂ ಹತ್ತಿರತ್ತಿರವಿದೆ ಎಂದು ಗುಡ್ ರಿಟರ್ನ್ಸ್.ಇನ್ ವರದಿ ಮಾಡಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆ ಕಂಡು 73.47ಯುಎಸ್ ಡಾಲರ್(1 USD=74.61ರು) ಪ್ರತಿ ಬ್ಯಾರೆಲ್‌ನಷ್ಟಿದೆ.

Petrol, Diesel Rates Raised on July 17 Across Karnataka

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರೂಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

ಕರ್ನಾಟಕ ರಾಜ್ಯದ ವಿವಿಧ ನಗರ, ಪಟ್ಟಣ, ಜಿಲ್ಲಾ ಕೇಂದ್ರಗಳಲ್ಲಿನ ಪೆಟ್ರೋಲ್, ಡೀಸೆಲ್ ದರ (ಜುಲೈ 17) ಸಚಿತ್ರ ಮಾಹಿತಿ ಇಲ್ಲಿದೆ.

ಚಿತ್ರ ವಿನ್ಯಾಸ: ಭರತ್ ಎಚ್. ಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+