ಮಾರ್ಚ್ 27: ಕರ್ನಾಟಕದ ವಿವಿಧೆಡೆ ಪೆಟ್ರೋಲ್, ಡೀಸೆಲ್ ಬೆಲೆ

ಬೆಂಗಳೂರು, ಮಾರ್ಚ್ 27: ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಶನಿವಾರ (ಮಾರ್ಚ್ 27)ದಂದು ಎರಡನೇ ದಿನ ಸ್ಥಿರವಾಗಿದೆ. ಸತತವಾಗಿ ಎರಡು ದಿನ ಬೆಲೆ ಇಳಿಕೆಯಾದ ಬಳಿಕ ಶನಿವಾರವೂ ಬೆಲೆ ಸ್ಥಿರವಾಗಿ ಉಳಿದಿದೆ.

ಈ ಎರಡು ದಿನದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀ.ಗೆ 39 ಪೈಸೆ ಮತ್ತು ಡೀಸೆಲ್ ಪ್ರತಿ ಲೀ.ಗೆ 37 ಪೈಸೆ ಇಳಿಕೆಯಾಗಿದೆ. ಭಾರತದಲ್ಲಿ 24 ದಿನಗಳಿಂದಲೂ ಪೆಟ್ರೋಲ್, ಡೀಸೆಲ್ ದರದಲ್ಲಿ ಸ್ಥಿರತೆ ಕಾಯ್ದುಕೊಂಡು ಬಂದ ಇಂಧನ ಮಾರುಕಟ್ಟೆ ಕಂಪನಿಗಳು ವಾಹನ ಸವಾರರಿಗೆ ಎರಡು ದಿನಗಳ ಹಿಂದೆ ಸಿಹಿ ಸುದ್ದಿ ನೀಡಿ, ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಕೊಂಚ ಇಳಿಕೆ ಮಾಡಿತ್ತು.

ಜಾಗತಿಕವಾಗಿ ಕಚ್ಚಾತೈಲ ಬೆಲೆ ಏರಿಕೆ ಕಂಡಿದ್ದರೂ ಭಾರತದಲ್ಲಿ ತೈಲ ಬೆಲೆ ಸ್ಥಿರತೆ ಕಂಡುಕೊಂಡಿತ್ತು. ಚುನಾವಣೆ ಮುಂದಿಟ್ಟುಕೊಂಡು ಬೆಲೆ ಏರಿಕೆ ಮಾಡದೆ ತೈಲ ಕಂಪನಿಗಳು ಗ್ರಾಹಕರ ಹಿತಕಾಯುವ ನೆಪವೊಡ್ಡಿದ್ದರು. ಫೆಬ್ರವರಿ 9ರಿಂದ ಸುಮಾರು 14 ಬಾರಿ ಇಂಧನ ದರ ಪರಿಷ್ಕರಣೆಯಾಗಿದ್ದು, ಒಟ್ಟಾರೆ, ಪೆಟ್ರೋಲ್ ಬೆಲೆ 4.22 ರೂ ಪ್ರತಿ ಲೀಟರ್ ಹಾಗೂ ಡೀಸೆಲ್ 4.34 ಪ್ರತಿ ಲೀಟರ್ ಏರಿಕೆ ಕಂಡಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆಯಾಗಿ 64.30 ಯುಎಸ್ ಡಾಲರ್ ಪ್ರತಿ ಬ್ಯಾರೆಲ್ ತನಕ ತಲುಪಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಸುಧಾರಣೆಗೊಂಡು 72.63 ತಲುಪಿದೆ.

Petrol Diesel Rates On March 27 across Karnataka

ಒಪೆಕ್ ರಾಷ್ಟ್ರಗಳು ತೈಲ ಪೂರೈಕೆಯಲ್ಲಿ ವ್ಯತ್ಯಯ ಮಾಡಿರುವುದರಿಂದ ಭಾರತದಂಥ ಅತಿ ಹೆಚ್ಚು ಆಮದು ಮಾಡಿಕೊಳ್ಳುವ ರಾಷ್ಟ್ರಕ್ಕೆ ಭಾರಿ ಹೊಡೆತ ಬಿದ್ದಿದೆ. ಭಾರತ ಸರ್ಕಾರ ಮೂಲ ಬೆಲೆಯ 125% ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ ಪೆಟ್ರೋಲ್ ಮೇಲೆ 32. 98 ರೂ ಹಾಗೂ ಡೀಸೆಲ್ ಮೇಲೆ 31.80 ರೂ ನಷ್ಟಿದೆ. ಬೆಂಗಳೂರಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 93.82ರೂಪಾಯಿಗೆ ತಲುಪಿದೆ. ಡೀಸೆಲ್ ದರವು ಪ್ರತಿ ಲೀಟರ್‌ಗೆ 85.99 ರೂಪಾಯಿಗೆ ಮುಟ್ಟಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರಕಟಿಸಿದೆ. ಬೆಳಗಾವಿಯಿಂದ ಕೋಲಾರ ತನಕ ರಾಜ್ಯದ ವಿವಿಧ ನಗರ, ಪಟ್ಟಣ, ಜಿಲ್ಲಾ ಕೇಂದ್ರಗಳಲ್ಲಿನ ಪೆಟ್ರೋಲ್, ಡೀಸೆಲ್ ದರ (ಮಾರ್ಚ್ 27ರಂತೆ) ಪಟ್ಟಿ ಸಚಿತ್ರ ಮಾಹಿತಿ ಇಲ್ಲಿದೆ...

Petrol Diesel Rates On March 27 across Karnataka

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+