ಏಪ್ರಿಲ್ 1: ಕರ್ನಾಟಕದ ವಿವಿಧ ಪಟ್ಟಣಗಳಲ್ಲಿ ಇಂಧನ ದರ ಎಷ್ಟು?
ಬೆಂಗಳೂರು, ಏಪ್ರಿಲ್ 1: ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಮಂಗಳವಾರದಂದು ಪೆಟ್ರೋಲ್ ಬೆಲೆ 19 ರಿಂದ 22 ಪೈಸೆ ಪ್ರತಿ ಲೀಟರ್ ಹಾಗೂ ಡೀಸೆಲ್ ಬೆಲೆ 21 ರಿಂದ 23 ಪೈಸೆ ಪ್ರತಿ ಲೀಟರ್ ಇಳಿಕೆಯಾಗಿತ್ತು. ಆದರೆ, ಗುರುವಾರದಂದು ಯಾವುದೇ ಬದಲಾವಣೆಯಾಗಿಲ್ಲ. ಆದರೆ, ರಾಜ್ಯದ ಇತರೆ ಪಟ್ಟಣಗಳಿಗೆ ಹೋಲಿಸಿದರೆ ಬಳ್ಳಾರಿಯಲ್ಲಿ ಇಂಧನ ದರ ತುಸು ಇಳಿಕೆಯಾಗಿದ್ದು, ಪೆಟ್ರೋಲ್ ದರ 23 ಪೈಸೆ ಇಳಿಕೆಯಾಗಿದ್ದು, 94.85 ಪ್ರತಿ ಲೀಟರ್ ಹಾಗೂ ಡೀಸೆಲ್ ದರ 21ಪೈಸೆ ಇಳಿಕೆಯಾಗಿದ್ದು, 86.92ರು ನಷ್ಟಿದೆ.
ಫೆಬ್ರವರಿ 27ರ ಬಳಿಕ ಮತ್ತೆ ಇಂಧನ ದರ ಪರಿಷ್ಕರಣೆಗೊಂಡಿರಲಿಲ್ಲ. ಆದರೆ, ನಂತರ ಸತತ ಎರಡು ದಿನ ಸರ್ಕಾರಿ ಸ್ವಾಮ್ಯದ ಮೂರು ತೈಲ ಕಂಪನಿಗಳು ಬೆಲೆ ಇಳಿಕೆ ಮಾಡಿ, ಪರಿಷ್ಕೃತ ದರ ಪ್ರಕಟಿಸಿದ್ದವು. ಈಗ ಸತತ ನಾಲ್ಕನೇ ದಿನ ಯಾವುದೇ ಬದಲಾವಣೆಯಾಗಿರಲಿಲ್ಲ. ಫೆಬ್ರವರಿ 9ರಿಂದ ಸುಮಾರು 14 ಬಾರಿ ಇಂಧನ ದರ ಪರಿಷ್ಕರಣೆಯಾಗಿದ್ದು, ಒಟ್ಟಾರೆ, ಪೆಟ್ರೋಲ್ ಬೆಲೆ 4.22 ರು ಪ್ರತಿ ಲೀಟರ್ ಹಾಗೂ ಡೀಸೆಲ್ 4.34 ಪ್ರತಿ ಲೀಟರ್ ಏರಿಕೆ ಕಂಡಿತ್ತು.
ಬೆಂಗಳೂರಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 93.59ರೂಪಾಯಿಗೆ ತಲುಪಿದೆ. ಡೀಸೆಲ್ ದರವು ಪ್ರತಿ ಲೀಟರ್‌ಗೆ 85.75 ರೂಪಾಯಿಗೆ ಮುಟ್ಟಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರಕಟಿಸಿದೆ.

ಬೆಳಗಾವಿಯಿಂದ ಕೋಲಾರ ತನಕ ರಾಜ್ಯದ ವಿವಿಧ ನಗರ, ಪಟ್ಟಣ, ಜಿಲ್ಲಾ ಕೇಂದ್ರಗಳಲ್ಲಿನ ಪೆಟ್ರೋಲ್, ಡೀಸೆಲ್ ದರ(ಮಾರ್ಚ್ 30ರಂತೆ) ಪಟ್ಟಿ ಸಚಿತ್ರ ಮಾಹಿತಿ ಇಲ್ಲಿದೆ..

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.












Click it and Unblock the Notifications