ಸೆ.14ರಂದು ಕರ್ನಾಟಕದ ಎಲ್ಲಾ ಜಿಲ್ಲೆಗಳ ಪೆಟ್ರೋಲ್ ಬೆಲೆ ವಿವರ
ಬೆಂಗಳೂರು, ಸೆಪ್ಟೆಂಬರ್ 14: ಸರ್ಕಾರಿ ಸ್ವಾಮ್ಯದ ಮೂರು ಪ್ರಮುಖ ತೈಲ ಕಂಪನಿಗಳು ಸೆಪ್ಟೆಂಬರ್ 14ರಂದು ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆ ಮಾಡಿಲ್ಲ. ಭಾರತದಲ್ಲಿ ಕಳೆದ ಬುಧವಾರ ಹಾಗೂ ಭಾನುವಾರ (ಸೆ.05) ರಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಸರಾಸರಿ 15 ಪೈಸೆಯಷ್ಟು ಇಳಿಕೆ ಮಾಡಲಾಗಿತ್ತು. ರಾಜ್ಯದಲ್ಲಿ ಪೆಟ್ರೋಲ್ ಪ್ರತಿ ಲೀಟರ್ 104 ರು ನಿಂದ 106 ರು ಗರಿಷ್ಠ ಇದೆ. ಇಡೀ ದೇಶದಲ್ಲಿ ಪುದುಚೇರಿ ಹಾಗೂ ತಮಿಳುನಾಡಿನಲ್ಲಿ ಮಾತ್ರ ಪ್ರತಿ ಲೀಟರ್ ಸುಮಾರು 3ರು ಇಳಿಕೆಯಾಗಿದೆ.
ಮೇ 4ರಿಂದ ಇಂದಿನ ತನಕ ಪೆಟ್ರೋಲ್ ಒಟ್ಟು 40 ಬಾರಿ ಹಾಗೂ ಡೀಸೆಲ್ 37 ಬಾರಿ ಏರಿಕೆಯಾಗಿತ್ತು. ಮೇ 4ರಿಂದ ಪೆಟ್ರೋಲ್ 11.15 ರು ಪ್ರತಿ ಲೀಟರ್ ಹಾಗೂ ಡೀಸೆಲ್ 10.80 ರು ಪ್ರತಿ ಲೀಟರ್ ಆಗಿದೆ. ಭಾರತ ಸರ್ಕಾರ ಮೂಲ ಬೆಲೆಯ 125% ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ ಪೆಟ್ರೋಲ್ ಮೇಲೆ 32. 98 ರೂ ಹಾಗೂ ಡೀಸೆಲ್ ಮೇಲೆ 31.80 ರೂ ನಷ್ಟಿದೆ.
ಮೆಟ್ರೋ ನಗರಗಳ ಪೈಕಿ ಮುಂಬೈನಲ್ಲಿ ಅತ್ಯಧಿಕ ಪೆಟ್ರೋಲ್ 107.26 ರು ಪ್ರತಿ ಲೀಟರ್, ಡೀಸೆಲ್ 96.19ರು ಪ್ರತಿ ಲೀಟರ್‌ನಷ್ಟಿದೆ ಎಂದು ಇಂಡಿಯನ್ ಆಯಿಲ್ ಸಂಸ್ಥೆ ಪ್ರಕಟಿಸಿದೆ. ಕರ್ನಾಟಕದ ಪ್ರಮುಖ ಪಟ್ಟಣಗಳಲ್ಲಿ ವಿವಿಧ ದರಗಳ ವಿವರ ಮುಂದಿದೆ...

ಪೆಟ್ರೋಲ್ ಪ್ರತಿ ಲೀಟರ್‌ಗೆ 107ರುಗೆ ಏರಿಕೆ
ಬೆಂಗಳೂರಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 104.70ರೂಪಾಯಿಗೆ ತಲುಪಿದೆ. ಡೀಸೆಲ್ ದರವು ಪ್ರತಿ ಲೀಟರ್‌ಗೆ 94.04ರೂಪಾಯಿಗೆ ಮುಟ್ಟಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 107.05 ಪ್ಲಸ್ ಇದ್ದು, ಇದು ರಾಜ್ಯದಲ್ಲೇ ಅತ್ಯಧಿಕವಾಗಿದೆ. ಮಿಕ್ಕಂತೆ ಬಳ್ಳಾರಿ, ದಾವಣಗೆರೆ, ಕೊಪ್ಪಳ, ಶಿಮಮೊಗ್ಗ ಜಿಲ್ಲೆಗಳಲ್ಲೂ ಪ್ರತಿ ಲೀಟರ್‌ಗೆ 106 ಪ್ಲಸ್ ದರ ಇದೆ ಇತರೆ ಜಿಲ್ಲೆಗಳಲ್ಲಿ 104 ರಿಂದ 105ರು ನಷ್ಟಿದೆ ಎಂದು ಗುಡ್‌ರಿಟರ್ನ್ಸ್.ಇನ್ ವರದಿ ಮಾಡಿದೆ.

ಡೀಸೆಲ್ ಬೆಲೆ ಕಡಿಮೆ ಇರುವ ಜಿಲ್ಲೆಗಳು
ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳ ಹಿಂದೆ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ ಸರಾಸರಿ 15-19ಪೈಸೆಯಷ್ಟು ಇಳಿಕೆಯಾಗಿತ್ತು, ಸೋಮವಾರದಂದು ಯಾವುದೇ ಬದಲಾವಣೆಯಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕನಿಷ್ಠ 93.50 ರು ಪ್ರತಿ ಲೀಟರ್‌ನಷ್ಟಿದೆ. ಉಳಿದಂತೆ, ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ, ಬೀದರ್, ಬೆಳಗಾವಿ, ವಿಜಯಪುರ, ಚಾಮರಾಜನಗರ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಧಾರವಾಡ,ಗದಗ, ಕಲಬುರಗಿ, ಹಾಸನ, ಮಂಡ್ಯ, ಮೈಸೂರು ಹಾಗೂ ಉಡುಪಿಯಲ್ಲಿ ಪ್ರತಿ ಲೀಟರ್ 94 ರಿಂದ 95 ರು ಆಸುಪಾಸಿನಲ್ಲಿದೆ.

ರಾಜಸ್ಥಾನದಲ್ಲಿ ಇಂದಿಗೂ ಬೆಲೆ ಅತ್ಯಧಿಕ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ 13ರಂದು ಈ ಸಮಯಕ್ಕೆ ಕಚ್ಚಾತೈಲ ಬೆಲೆ ಕೊಂಚ ಏರಿಕೆ ಕಂಡು 73.91ಯುಎಸ್ ಡಾಲರ್(1 USD=73.63ರೂ) ಪ್ರತಿ ಬ್ಯಾರೆಲ್‌ನಷ್ಟಿದೆ. ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿ ಪ್ರತಿ ಪೆಟ್ರೋಲ್ ಬೆಲೆ ದೇಶದಲ್ಲೇ ಅತ್ಯಧಿಕ 112.55ರು ನಷ್ಟಿದೆ, ಡೀಸೆಲ್ ಬೆಲೆ 101.83ರು ಆಗಿದೆ. ಅಲ್ಲದೆ ರಾಜಸ್ಥಾನದ ಎಲ್ಲಾ ಪ್ರಮುಖ ಪಟ್ಟಣಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಬೆಲೆ 100 ರು ಗಡಿ ದಾಟಿದೆ.

ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.
ಬೆಳಗಾವಿಯಿಂದ ಕೋಲಾರ ತನಕ ರಾಜ್ಯದ ವಿವಿಧ ನಗರ, ಪಟ್ಟಣ, ಜಿಲ್ಲಾ ಕೇಂದ್ರಗಳಲ್ಲಿನ ಪೆಟ್ರೋಲ್, ಡೀಸೆಲ್ ದರ (ಸೆಪ್ಟೆಂಬರ್ 14) ಸಚಿತ್ರ ಮಾಹಿತಿ ಇಲ್ಲಿದೆ. ಚಿತ್ರ ವಿನ್ಯಾಸ: ಭರತ್ ಎಚ್. ಸಿ.
-
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
ಎಲ್ಪಿಜಿ ಸಿಲಿಂಡರ್ ದರ 60 ರೂ ಏರಿಕೆ: ಮೋದಿ ಸರ್ಕಾರದ ವಿರುದ್ಧ ತೀವ್ರ ಟೀಕೆ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
ಡಿವೋರ್ಸ್ವರೆಗೆ ಪತಿಯ ನಿವಾಸದಲ್ಲೇ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ: ನಟ ವಿಜಯ್ ಪತ್ನಿ ಕೋರ್ಟ್ಗೆ ಮನವಿ -
Yash: ಪತ್ನಿ ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ಹೊಸ ಲುಕ್ನಲ್ಲಿ ಯಶ್ ಪ್ರತ್ಯಕ್ಷ -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
ಟಿ20 ವಿಶ್ವಕಪ್ 2026 ಫೈನಲ್ ನಂತರ ಎಲ್ಲಾ ಮಾದರಿಯ ಕ್ರಿಕೆಟ್ಗೆ ಸೂರ್ಯಕುಮಾರ್ ಯಾದವ್ ನಿವೃತ್ತಿ ಘೋಷಣೆ ವದಂತಿ -
Vijay Divorce: ಡಿವೋರ್ಸ್ ವದಂತಿ ನಡುವೆಯೇ ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ದಳಪತಿ ವಿಜಯ್; ವಿಡಿಯೋ ವೈರಲ್












Click it and Unblock the Notifications