ಕರ್ನಾಟದಾದ್ಯಂತ ಮುಂಗಾರು ಸಂಪೂರ್ಣ ದುರ್ಬಲ: ಬಿಸಿಲಿನ ತಾಪ ಏರಿಕೆ

ಬೆಂಗಳೂರು ಆಗಸ್ಟ್ 17: ಕರಾವಳಿ ಕರ್ನಾಟಕ ಸೇರಿದಂತೆ ಕರ್ನಾಟಕದ ಎಲ್ಲ ಭಾಗಗಳಲ್ಲೂ ಮುಂಗಾರು ಮಳೆ ಸಂಪೂರ್ಣವಾಗಿ ಕಡಿಮೆ ಆಗಿದೆ. ರಾಜ್ಯದ ಕೆಲವು ಕಡೆಗಳಲ್ಲಿ ಮಾತ್ರ ತುಂತುರು ಮಳೆ ಇಲ್ಲವೆ ಹಗುರ ಮಳೆ ಆಗಬಹುದು ಎಂದು ಕರ್ನಾಟಕ ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳ್ಲಲಿ ಅಬ್ಬರಿಸಿ, ಅನೇಕ ಆವಾಂತರಗಳಿಗೆ ಕಾರಣವಾಗಿದ್ದ ಮುಂಗಾರು ಮಾರುತಗಳು ರಾಜ್ಯಾದ್ಯಂತ ಕ್ಷೀಣಿಸಿವೆ. ಕರಾವಳಿ ಮತ್ತು ಮಲೆನಾಡಿನ ಕೆಲವು ಕಡೆಗಳಲ್ಲಿ ಮಾತ್ರ ಸಾಮಾನ್ಯ ಮಳೆ ಸುರಿಸುವ ಲಕ್ಷಣಗಳು ಇವೆ. ಇದರ ಹೊರತು ಹವಾಮಾನದಲ್ಲಿ ಯಾವುದೇ ಗಂಭೀರ ಬದಲಾವಣೆಗಳು ಇಲ್ಲ ಎಂದು ತಿಳಿದು ಬಂದಿದೆ.

ಕರ್ನಾಟಕದಲ್ಲಿ ಮುಂದಿನ 48 ಗಂಟೆಗಳ ಅವಧಿಯಲ್ಲಿ ಕರಾವಳಿ ಭಾಗದ ಮೂರು ಜಿಲ್ಲೆಗಳು ಒಳಗೊಂಡಂತೆ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಬಹಳಷ್ಟು ವ್ಯಾಪಕ ಮಳೆ ಬೀಳುವ ನಿರೀಕ್ಷೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ದೇಶಾದ್ಯಂತ ಮುಂಗಾರು ಮಾರುತಗಳು ದುರ್ಬಲ

ದೇಶಾದ್ಯಂತ ಮುಂಗಾರು ಮಾರುತಗಳು ದುರ್ಬಲ

ಕರ್ನಾಟಕ ಒಳಗೊಂಡಂತೆ ದೇಶದ ಬಹುತೇಕ ಎಲ್ಲ ರಾಜ್ಯಗಳಲ್ಲಿ ಕಡೆಗಳಲ್ಲಿ ನಿರಂತವಾಗಿ ಸುರಿದ ಅತ್ಯಧಿಕ ಮಳೆ ಇದೀಗ ಸಂಪೂರ್ಣವಾಗಿ ಇಳಿಮುಖವಾಗಿದೆ. ಕಳೆದ 24ಗಂಟೆಗಳಲ್ಲಿ ಗುಜರಾತ್, ಗೋವಾ, ಪಶ್ಚಿಮ ರಾಜಸ್ತಾನಗಳಲ್ಲಿ ಮಾತ್ರ ಗುಡುಗು ಸಹಿತ ಭಾರಿ ಮಳೆ ಆಗಿದೆ. ಇದರ ಹೊರುತ ಎಲ್ಲಿಯೂ ಮಳೆ ಅಬ್ಬರಿಸಿದ್ದ ಬಗ್ಗೆ ವರದಿ ಆಗಿಲ್ಲ. ನಾಳೆ ಈ ಮೂರು ಪ್ರದೇಶಗಳಲ್ಲೂ ಮಳೆ ಮತ್ತಷ್ಟು ಇಳಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಗುಡುಗು, ಮಳೆ ಮುನ್ನೆಚ್ಚರಿಕೆ ಇಲ್ಲ

ಗುಡುಗು, ಮಳೆ ಮುನ್ನೆಚ್ಚರಿಕೆ ಇಲ್ಲ

ಬುಧವಾರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡಂತೆ ಹಿಂದಿನ 24 ಗಂಟೆಯಲ್ಲಿ ಕಲಬುರಗಿಯಲ್ಲಿ ಕೊಡ್ಲಾ ಅಧಿಕ 5ಸೆಂ.ಮೀ. ಮಳೆ ದಾಖಲಾಗಿದೆ. ಉಳಿದಂತೆ ಅಡಿಕಿ 3ಸೆಂ.ಮೀ, ಕ್ಯಾಸಲ್ ರಾಕ್ ಮತ್ತು ಮುಧೋಳ್‌ದಲ್ಲಿ 2ಸೆಂ.ಮೀ ಮಳೆ ದಾಖಲಾದರೆ. ಹವಲೆಡೆ ತುಂತುರು ಮಳೆ ಬಿದ್ದಿದೆ. ಮುಂದಿನ ಎರಡು ದಿನ ರಾಜ್ಯದಲ್ಲಿ ಎಲ್ಲಿಯೂ ಮಳೆ, ಗುಡುಗು ಸಹಿತ ಮಳೆ ಬಗ್ಗೆ ಯಾವುದೇ ಮುನ್ನೆಚ್ಚರಿಕೆಗಳು ಇಲ್ಲ ಎಂದು ರಾಜ್ಯ ಹವಾಮಾನ ಇಲಾಖೆ ಹೇಳಿದೆ.

ಬೆಂಗಳೂರಿನಲ್ಲೂ ಮಳೆ ದುರ್ಬಲ

ಬೆಂಗಳೂರಿನಲ್ಲೂ ಮಳೆ ದುರ್ಬಲ

ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಮಳೆ ಬಿದ್ದಿಲ್ಲ. ಕೇವಲ ಮೋಡ ಮುಸುಕಿನ ವಾತವರಣ ದಾಖಲಾಗಿದೆ. ಇದೇ ವಾತಾವರಣ ಮುಂದಿನ 48ಗಂಟೆ ಮುಂದುವರಿಯಲಿದೆ. ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 20ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡು ಬರುವ ಸಾಧ್ಯತೆ ಇದೆ.

ಕರ್ನಾಟಕದಲ್ಲಿ ಎಲ್ಲೆಲ್ಲಿ ಎಷ್ಟು ತಾಪಮಾನ ದಾಖಲಾಗಿದೆ?

ಕರ್ನಾಟಕದಲ್ಲಿ ಎಲ್ಲೆಲ್ಲಿ ಎಷ್ಟು ತಾಪಮಾನ ದಾಖಲಾಗಿದೆ?

ರಾಜ್ಯ ರಾಜಧಾನಿ ಬೆಂಗಳೂರಲ್ಲಿ 29ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, ತೇವಾಂಶ 62, ಗಾಳಿಯ ವೇಗ ಗಂಟೆಗೆ 20ಕಿ.ಮೀ. ಕಂಡು ಬಂದಿದೆ. ಬಾಗಲಕೋಟೆ 31ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 60ತೇವಾಂಶ, ರಾಯಚೂರು 34ಡಿಗ್ರಿ ಸೆಲ್ಸಿಯಸ್ ಗರಿಷ್ಠ, 55ತೇವಾಂಶ, ಚಿತ್ರದುರ್ಗದಲ್ಲಿ 30ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 55ರಷ್ಟು ತೇವಾಂಶ, ಕಲಬುರಗಿ 32ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 48ರಷ್ಟು ತೇವಾಂಶ ಇದ್ದು, ಚಿಕ್ಕಮಗಳೂರಲ್ಲಿ 29ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ, 65ರಷ್ಟು ತೇವಾಂಶ ಕಂಡು ಬಂದಿದೆ.

ಅದೇ ರೀತಿ ಮಂಗಳೂರು 30ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಇದ್ದು, ಶೇ.71ರಷ್ಟು ತೇವಾಂಶ ಇದೆ. ಶಿವಮೊಗ್ಗ 29ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ, ತೇವಾಂಶ 64ರಷ್ಟು ಇದ್ದು, ಮೈಸೂರಲ್ಲಿ 31ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ, 61 ತೇವಾಂಶ, ಬಳ್ಳಾರಿ 33ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಹಾಗೂ 28ರಷ್ಟು ತೇವಾಂಶ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+