ಕೊಡಗು: 2013ರ ಚುನಾವಣಾ ಫಲಿತಾಂಶದಲ್ಲಿ ಗೆದ್ದವರು, ಸೋತವರು
ಬೆಂಗಳೂರು, ಮಾರ್ಚ್ 13: 1956ರಲ್ಲಿ ರಚನೆಯಾದ ಕರ್ನಾಟಕ ಸುಂದರ ಜಿಲ್ಲೆ ಕೊಡಗು ಜಿಲ್ಲೆ. ಮಡಿಕೇರಿ ಕೊಡಗಿನ ಜಿಲ್ಲಾ ಕೇಂದ್ರ. ಮಡಿಕೇರಿಯನ್ನು ಲಿಂಗರಾಜ ಮಹಾರಾಜ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದ. ಇಲ್ಲಿ ಲಿಂಗರಾಜ ಕಟ್ಟಿಸಿದ ಓಂಕಾರೇಶ್ವರ ದೇವಸ್ಥಾನ, ರಾಜಸೀಟ್, ಅರಮನೆಗಳಿವೆ.
ಮಡಿಕೇರಿಯ ಮಂಜು, ಮಡಿಕೇರಿ ದಸರಾ, ತಲ ಕಾವೇರಿ, ಭಾಗಮಂಡಲ, ಬೆಟ್ಟ ಗುಡ್ಡಗಳಿಂದ ಕೂಡಿದ ಚಾರಣ ತಾಣ ಮಂದಲ್ ಪಟ್ಟಿ, ಮುಗಿಲು ಪೇಟೆ, ಅಬ್ಬೀ ಜಲಪಾತ... ಹೀಗೆ ಹಲವು ಪ್ರವಾಸಿಗರ ನೆಚ್ಚಿನ ತಾಣಗಳೂ ಇಲ್ಲಿದ್ದು ಪ್ರವಾಸೋದ್ಯಮದ ನಕಾಶೆಯಲ್ಲಿ ಮಡಿಕೇರಿ ಮತ್ತು ಕೊಡಗಿಗೆ ವಿಶಿಷ್ಟ ಸ್ಥಾನವನ್ನು ಕರುಣಿಸಿವೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಇವತ್ತಿಗೆ ಕೊಡಗು ದಕ್ಷಿಣ ಭಾರತದಲ್ಲೇ ಪ್ರಮುಖ ಪ್ರವಾಸಿ ಕೇಂದ್ರವಾಗಿ ಗುರುತಿಸಿಕೊಂಡಿದ್ದರೆ ಅದಕ್ಕೆ ಇಲ್ಲಿನ ಅತ್ಯಪೂರ್ವ ನಿಸರ್ಗವೇ ಕಾರಣ. ಜತೆಗೆ ಇಲ್ಲಿನ ವೈನ್ ಮತ್ತು ಪಂದಿ ಕರಿ.
4,102 ಚದರ ಕಿಲೋಮೀಟರ್ ಹರಡಿಕೊಂಡಿರುವ ಕೊಡಗಿನಲ್ಲಿ ಮೂರು ತಾಲೂಕುಗಳಿವೆ; ಮಡಿಕೇರಿ, ವಿರಾಜಪೇಟೆ ಮತ್ತು ಸೋಮವಾರಪೇಟೆ. ಸದ್ಯಕ್ಕೆ ಇರುವುದು ಎರಡೇ ವಿಧಾನಸಭಾ ಕ್ಷೇತ್ರಗಳು. ಒಂದು ಮಡಿಕೇರಿ, ಇನ್ನೊಂದು ವಿರಾಜಪೇಟೆ. ಈ ಹಿಂದೆ ಇದ್ದ ಸೋಮವಾರ ಪೇಟೆ 2008ರ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ರದ್ದಾಯಿತು.
ವಿರಾಜಪೇಟೆಯಿಂದಲೇ ಗೆದ್ದು ಆರ್. ಗುಂಡೂರಾವ್ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಈ ಕ್ಷೇತ್ರದಲ್ಲಿ ನಡೆಯುತ್ತಿದ್ದ ಗುಂಡೂರಾವ್ ಮತ್ತು ಬಿ.ಎ. ಜೀವಿಜಯ ನಡುವಿನ ರಾಜಕೀಯ ಕದನ ರೋಚಕವಾಗಿರುತ್ತಿತ್ತು. ಆದರೆ ಆ ಕ್ಷೇತ್ರವೇ ಇವತ್ತು ನೆನಪು ಮಾತ್ರ.
2013ರಲ್ಲಿ ಇಲ್ಲಿ ಚುನಾವಣೆ ನಡೆದಾಗ ಎರಡೂ ಕ್ಷೇತ್ರಗಳನ್ನು ಬಿಜೆಪಿ ತನ್ನ ಬುಟ್ಟಿಗೆ ಹಾಕಿಕೊಂಡಿತ್ತು. 2013ರಲ್ಲಿ ಕೊಡಗಿನಲ್ಲಿ ಗೆದ್ದ ಶಾಸಕರು ಯಾರು? ಪ್ರಬಲ ಸ್ಪರ್ಧೆ ನೀಡಿಯೂ ಎಡವಿ ಬಿದ್ದವರು ಯಾರು? ಯಾರಿಗೆ ಎಷ್ಟು ಮತ? ಗೆಲುವಿನ ಅಂತರ ಎಷ್ಟು? ಮುಂತಾದ ವಿವರಗಳು ಇಲ್ಲಿವೆ...













Click it and Unblock the Notifications