ತಗ್ಗಿದ ಮಳೆ ಆರ್ಭಟ, ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಏರಿಕೆ
ಕರ್ನಾಟಕದ ಉತ್ತರ ಒಳನಾಡು ಹಾಗೂ ಕರಾವಳಿಯಲ್ಲಿ ಮುಂದಿನ ಎರಡು ದಿನ ಮಳೆಯಾಗಲಿದೆ, ದಕ್ಷಿಣ ಒಳನಾಡಿನಲ್ಲಿ ಮಳೆ ಕ್ಷೀಣಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನೈಋತ್ಯ ಮಳೆ ಮಾರುತಗಳು ಕರಾವಳಿ ಕರ್ನಾಟಕದಲ್ಲಿ ಸಕ್ರಿಯವಾಗಿದ್ದು, ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿದ ಕಾರಣ ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಮೂರ್ನಾಲ್ಕು ದಿನಗಳ ಕಾಲ ಮಳೆ ಮತ್ತೆ ಹೆಚ್ಚಾಗುವ ಸಾಧ್ಯತೆಯಿದೆ.
ಬೀದರ್, ರಾಯಚೂರು, ಗದಗ, ಬಾಗಲಕೋಟೆ, ಕೊಪ್ಪಳ, ಕಲಬುರಗಿ ಜಿಲ್ಲೆಗಳಲ್ಲಿ ನಾಳೆ ಮಳೆಯಾಗುವ ಸಂಭವವಿದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಅತ್ಯಧಿಕ ಮಳೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯ ಹಂಪಸಂದ್ರ ಎಂಬಲ್ಲಿ 94ಮಿ.ಮೀ ಸುರಿದಿದೆ, ಬೆಂಗಳೂರು ದಕ್ಷಿಣ ವಿಭಾಗದ ಅಂಜನಾಪುರದಲ್ಲಿ 17.5 ಮಿ.ಮೀ ಸುರಿದಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ. ಬೆಂಗಳೂರಿನಲ್ಲಿ ವಾತಾವರಣದಲ್ಲಿ ಯಾವುದೇ ಬದಲಾವಣೆ ಇಲ್ಲ, ಮೋಡ ಕವಿದ ವಾತಾವರಣ ಮುಂದುವರೆಯಲಿದೆ.
ಈ ನಡುವೆ ಕರ್ನಾಟಕದಲ್ಲಿ ಇಂದಿನ (ಅ.20) ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ? ಮಳೆ ಮುನ್ಸೂಚನೆ ಬಗ್ಗೆ ಮುಂದೆ ವಿವರವಾಗಿ ತಿಳಿಯಿರಿ. (ಅಂಕಿ ಅಂಶ ಕೃಪೆ: KSNMDC); ವಿನ್ಯಾಸ: ಭರತ್ ಎಚ್. ಸಿ.
ರಾಜ್ಯದೆಲ್ಲೆಡೆ ಭರ್ಜರಿ ಮಳೆ, ಜಲಾಶಯಗಳ ನೀರಿನ ಪ್ರಮಾಣ
ಕರ್ನಾಟಕದ ಹವಾಮಾನ ವರದಿ, ಅಣೆಕಟ್ಟುಗಳ ವಿವರ
ಮಳೆ ಮುನ್ಸೂಚನೆ
ಮಳೆ ಮುನ್ಸೂಚನೆ: ರಾಜ್ಯದಾದ್ಯಂತ ವ್ಯಾಪಕವಾಗಿ ಸಾಧರಣ ಮಳೆ ಹಾಗೂ ಅಲ್ಲಲ್ಲಿ ಉತ್ತಮದಿಂದ ಅಧಿಕ ಮಳೆ ಹಾಗೂ ಅಲ್ಲಲ್ಲಿ ಮಿಂಚಿನೊಂದಿಗೆ ಗುಡುಗು ಸಂಭವಿಸುವ ಸಾಧ್ಯತೆಯಿದೆ.
ಬಿಬಿಎಂಪಿ ಮಳೆ ಮುನ್ಸೂಚನೆ: ಬಿಬಿಎಂಪಿ ವ್ಯಾಪ್ತಿ ಪ್ರದೇಶಗಳಲ್ಲಿ ವ್ಯಾಪಕವಾಗಿ ಸಾಧರಣ ಮಳೆ ಹಾಗೂ ಅಲ್ಲಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ.

ಹೇಮಾವತಿ, ಲಿಂಗನಮಕ್ಕಿ, ಹಾರಂಗಿ
ಹೇಮಾವತಿ, ಲಿಂಗನಮಕ್ಕಿ, ಹಾರಂಗಿ ಅಣೆಕಟ್ಟಿನ ಪೂರ್ಣ ಮಟ್ಟ ಹಾಗೂ ಇಂದಿನ ಮಟ್ಟದ ವಿವರ ಇಲ್ಲಿದೆ

ಕೃಷ್ಣರಾಜಸಾಗರ, ಭದ್ರಾ, ಕಬಿನಿ
ಕೃಷ್ಣರಾಜಸಾಗರ, ಭದ್ರಾ, ಕಬಿನಿ ಅಣೆಕಟ್ಟಿನ ಪೂರ್ಣ ಮಟ್ಟ ಹಾಗೂ ಇಂದಿನ ಮಟ್ಟದ ವಿವರ ಇಲ್ಲಿದೆ.

ತುಂಗಭದ್ರಾ, ಆಲಮಟ್ಟಿ ಅಣೆಕಟ್ಟಿನ ಪೂರ್ಣ ಮಟ್ಟ
ಬಸವಸಾಗರ(ನಾರಾಯಣಪುರ), ತುಂಗಭದ್ರಾ, ಆಲಮಟ್ಟಿ ಅಣೆಕಟ್ಟಿನ ಪೂರ್ಣ ಮಟ್ಟ ಹಾಗೂ ಇಂದಿನ ಮಟ್ಟದ ವಿವರ ಇಲ್ಲಿದೆ.

ಘಟಪ್ರಭಾ, ಮಲಪ್ರಭಾ ಅಣೆಕಟ್ಟಿನ ಪೂರ್ಣ ಮಟ್ಟ
ಸೂಪಾ, ಘಟಪ್ರಭಾ, ಮಲಪ್ರಭಾ ಅಣೆಕಟ್ಟಿನ ಪೂರ್ಣ ಮಟ್ಟ ಹಾಗೂ ಇಂದಿನ ಮಟ್ಟದ ವಿವರ ಇಲ್ಲಿದೆ.












Click it and Unblock the Notifications